ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ ಎಲೆಕ್ಟ್ರಿಸಿಟಿ ಬಿಲ್ ಮತ್ತೆ ಹೆಚ್ಚಾಗುವ ಸಾಧ್ಯತೆ

ಹೊಸ ವರ್ಷದ ಹೊಸ್ತಿಲಿನಲ್ಲಿ ಸ್ವಲ್ಪವಾದರೂ ಬೆಲೆ ಇಳಿಕೆ ಆಗಲಿ ಎಂದು ಜನ ಬಯಸಿದರೆ, ಕರ್ನಾಟಕ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದೆ. ಎಲೆಕ್ಟ್ರಿಸಿಟಿ ಬಿಲ್ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ.
ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಮಂಡಳಿ (KERC) ಮತ್ತೊಮ್ಮೆ ಎಲೆಕ್ಟ್ರಿಸಿಟಿ ಬೆಲೆ ಪರಿಷ್ಕರಣೆ (electricity price revision) ನಡೆಸಿದೆ. ನಮಗೆಲ್ಲಾ ತಿಳಿದಿರುವಂತೆ 2023ರಲ್ಲಿ ಗೃಹಜ್ಯೋತಿ ಯೋಜನೆ (Gruha jyothi scheme) ಯ ಅಡಿಯಲ್ಲಿ ಸಾಕಷ್ಟು ಕುಟುಂಬದವರು ಉಚಿತವಾಗಿ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಾಗಿದೆ.
ಕೃಷಿ ಭೂಮಿ ಇಲ್ಲದ ರೈತರು ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳೋ ಅವಕಾಶ! ಅರ್ಜಿ ಸಲ್ಲಿಸಿ
ಇದರ ಜೊತೆಗೆ ಯೋಜನೆಯಿಂದ ಹೊರಗೆ ಉಳಿದವರು ಹೆಚ್ಚುವರಿ ವಿದ್ಯುತ್ ಬಿಲ್ (electricity bill) ಪಾವತಿಸುವ ಭಾರವನ್ನು ಕೂಡ ಹೊತ್ತಿದ್ದಾರೆ. ಇದೀಗ ಮತ್ತೆ ವಿದ್ಯುತ್ ದರ ಹೆಚ್ಚಿಸುವ ಬಿಸಿ ಜನರನ್ನು ತಟ್ಟಲಿದೆ.
ವಿದ್ಯುತ್ ದರ ಹೆಚ್ಚಳಕ್ಕೆ ಸರ್ಕಾರದ ಚಿಂತನೆ! (Electricity price may increase)
ಇದು ನಿಜಕ್ಕೂ ಜನರನ್ನು ಸಂಕಷ್ಟಕ್ಕೆ ನೂಕಬಹುದು. ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ (free unit) ಗಳ ವರೆಗೆ ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ, ಇದರಿಂದ ತಮ್ಮ ಕ್ಷೇತ್ರ ಹೆಚ್ಚು ನಷ್ಟ ಅನುಭವಿಸುತ್ತಿದೆ ಎಂದು ಎಸ್ಕಾಂ, ಮೆಸ್ಕಾಂ, ಬೆಸ್ಕಾಂ, ಜೆಸ್ಕಾಂ ಮೊದಲದ ವಿದ್ಯುತ್ ಸರಬರಾಜು ಕಂಪನಿಗಳು (electricity supply company) ಸರ್ಕಾರಕ್ಕೆ ವಿದ್ಯುತ್ ದರ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿವೆ. ಎಸ್ಕಾಂ ಸಲ್ಲಿಸಿರುವ ಪ್ರಸ್ತಾವನೆಯ ಆಧಾರದ ಮೇಲೆ ಕೆಇಆರ್‌ಸಿ (KERC), ಹೊಸದರ ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೃಷಿ ಮಾಡೋ ಇಂತಹ ರೈತರಿಗೆ ಸಿಗಲಿದೆ 5 ಲಕ್ಷ ಧನ ಸಹಾಯ! ಈ ರೀತಿ ಅರ್ಜಿ ಸಲ್ಲಿಸಿ
ಲೋಕಸಭಾ ಚುನಾವಣೆಯಿಂದ ಆಗಬಹುದು ದೊಡ್ಡ ಬದಲಾವಣೆ!
ಸಾರ್ವಜನಿಕ ಅದಾಲತ್ ನಡೆಸುವುದರ ಮೂಲಕ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಇದರ ಜೊತೆಗೆ ಲೋಕಸಭಾ ಚುನಾವಣೆ (Loksabha election 2024) ಕೂಡ ಸದ್ಯದಲ್ಲಿಯೇ ನಡೆಯಲಿದ್ದು, ಹೊಸದರ ಹೇರಿಕೆ ಸ್ವಲ್ಪ ವಿಳಂಬ ಆಗಲೂಬಹುದು.
ಉಚಿತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ನೆರವು! ಈ ದಾಖಲೆಗಳು ಇದ್ದವರು ಅರ್ಜಿ ಸಲ್ಲಿಸಿ
ಲೋಕಸಭಾ ಚುನಾವಣೆ ಏಪ್ರಿಲ್ ಮತ್ತು ಮೇ ತಿಂಗಳುಗಳ ದಿನಾಂಕ ಘೋಷಣೆಯಾದರೆ ಹೊಸದರ ಪರಿಷ್ಕರಣೆ ಕಾರ್ಯವನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು. ಹೀಗಾಗಿ ಹೊಸ ದರ ಪರಿಷ್ಕರಣೆ ಕಾರ್ಯ ಮುಂದುವರೆದರೆ ಮುಂದಿನ ಕೆಲವು ತಿಂಗಳುಗಳ ಕಾಲ ವಿದ್ಯುತ್ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು.
Electricity bill is likely to increase again
ಲೋಕಸಭಾ ಚುನಾವಣೆಯಿಂದ ಆಗಬಹುದು ದೊಡ್ಡ ಬದಲಾವಣೆ!






