ನಿಮ್ಮ ಹೊಲ, ಗದ್ದೆ, ಜಮೀನಿಗೆ ದಾರಿ ಇದಿಯೋ ಇಲ್ವೋ ಮೊಬೈಲ್‌ನಲ್ಲೇ ತಿಳಿದುಕೊಳ್ಳಿ

Story Highlights

ಮೊಬೈಲ್ ನಲ್ಲಿ ಸರ್ವೆ ನಂಬರ್ (survey number) ಮೂಲಕ ಜಮೀನಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಕೂಡ ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಭೂಮಾಪನ ಕಂದಾಯ ಇಲಾಖೆ (revenue department) ಭೂ ವ್ಯವಸ್ಥೆ ಯೋಜನೆ ಅಡಿಯಲ್ಲಿ ನೀವು ನಿಮ್ಮ ಜಮೀನಿನ ದಾಖಲೆಯನ್ನು ಇಟ್ಟುಕೊಂಡಿದ್ದರೆ ಅದರ ಮೂಲಕ ಮೊಬೈಲ್ (mobile) ನಲ್ಲಿಯೇ ನಿಮ್ಮ ಜಮೀನಿನ (Property) ಸುತ್ತಲಿನ ಪ್ರದೇಶ ಅಥವಾ ಜಮೀನು ಯಾರದ್ದು ಎಂದು ತಿಳಿದುಕೊಳ್ಳುವುದು ಮಾತ್ರವಲ್ಲದೆ ಜಮೀನಿಗೆ ಹಾದು ಹೋಗುವ ಕಾಲುದಾರಿ ಅಥವಾ ಬಂಡಿದಾರಿ ಬಗೆಗಿನ ವಿವರಗಳನ್ನು ಕೂಡ ತಿಳಿಯಬಹುದು.

ಹೌದು, ರೈತರು ಎಷ್ಟೋ ಬಾರಿ ತಮ್ಮ ಜಮೀನಿನ ಸುತ್ತ ಯಾರ ಜಮೀನು ಇದೆ? ತಮ್ಮ ಜಮೀನಿಗೆ (Property) ಹಾದು ಹೋಗುವ ಕಾಲುದಾರಿ ಅಥವಾ ಬಂಡಿದಾರಿ ವ್ಯಾಪ್ತಿ ಎಷ್ಟು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಕೆಲವು ವ್ಯಾಜ್ಯಗಳಲ್ಲಿ ಸಿಲುಕಿ ಕೊಳ್ಳುತ್ತಾರೆ.

ಗೃಹಲಕ್ಷ್ಮಿ ಹಣ ಒಟ್ಟಾರೆ 8,000 ಜಮಾ! ಇನ್ನೂ ಹಣ ಸಿಗದ ಮಹಿಳೆಯರಿಗೆ ಹೊಸ ಅಪ್ಡೇಟ್

ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ ನೀವು ಕೇವಲ ಮೊಬೈಲ್ ನಲ್ಲಿ ಸರ್ವೆ ನಂಬರ್ (survey number) ಮೂಲಕ ಜಮೀನಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಕೂಡ ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಮೊಬೈಲ್ ನಲ್ಲಿ ಭೂ ವಿವರಣೆ ತಿಳಿದುಕೊಳ್ಳುವುದು ಹೇಗೆ? (How to check)

ನಿಮ್ಮ ಮೊಬೈಲ್ ನಲ್ಲಿ ಗೂಗಲ್ ವೆಬ್ ಬ್ರೌಸರ್ ತೆರೆಯಿರಿ.

ವೆಬ್ ಬ್ರೌಸರ್ ನಲ್ಲಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ landrecords.karnataka.gov.in ಲಿಂಕ್ ಓಪನ್ ಮಾಡಿ.

ಈಗ ಕಂದಾಯ ಇಲಾಖೆಯ ಮುಖಪುಟ ತೆರೆದುಕೊಳ್ಳುತ್ತದೆ. ಅಲ್ಲಿ ರೆವೆನ್ಯೂ ನಕ್ಷೆಗಳು (revenue maps) ಎನ್ನುವುದರ ಮೇಲೆ ಕ್ಲಿಕ್ ಮಾಡಿ.

ರೆವೆನ್ಯೂ ಮ್ಯಾಪ್ ಆನ್ಲೈನ್ ಎನ್ನುವ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಈಗ ರೆವೆನ್ಯೂ ಮ್ಯಾಪ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮೊದಲಾದ ವಿವರಗಳನ್ನು ನೀಡಬೇಕು.

ಮುಂದೆ maps types ಎನ್ನುವ ಆಪ್ಷನ್ ನಲ್ಲಿ Cadastrial Maps ಎನ್ನುವುದರ ಮೇಲೆ ಕ್ಲಿಕ್ ಮಾಡಿ.

ಈಗ ನೀವು ಆಯ್ಕೆ ಮಾಡಿದ ತಾಲೂಕು ಹೋಬಳಿ ಆಧಾರದ ಮೇಲೆ ಪಿಡಿಎಫ್ ನಕ್ಷೆ (PDF map) ತೆರೆದುಕೊಳ್ಳುತ್ತದೆ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

ರೇಷನ್‌ ಕಾರ್ಡ್‌ನಲ್ಲಿ ಹೊಸ ಸದಸ್ಯರನ್ನು ಸೇರಿಸಲು ಅವಕಾಶ! ಇಲ್ಲಿದೆ ಸುಲಭ ವಿಧಾನ

Agriculture Landಮೆನು ಬಾರ್ ನಲ್ಲಿ ಫೈಂಡ್ ಇನ್ ಡಾಕ್ಯುಮೆಂಟ್ಸ್ (Find in documents) ಎನ್ನುವ ಆಯ್ಕೆಯು ಇರುತ್ತದೆ ಆಗ ನೀವು ಸರ್ವೇ ನಂಬರ್ ನಮೂದಿಸಿ ನಕ್ಷೆಯನ್ನು ನೋಡಬಹುದು.

ಮೊಬೈಲ್ ನಲ್ಲಿ ಪಿಡಿಎಫ್ ರೀಡರ್ ಇದ್ದರೆ ಮಾತ್ರ ನೀವು ನಕ್ಷೆಯನ್ನು ತೆರೆದು ನೋಡಿಕೊಳ್ಳಬಹುದು. ಹಾಗಾಗಿ ಪಿಡಿಎಫ್ ರೀಡರ್ ಇಲ್ಲದೆ ಇದ್ದರೆ ಅದನ್ನು ಕೂಡ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.

ಈಗ ನೀವು ನಮೂದಿಸಿದ ಸರ್ವೇ ನಂಬರ್ ಅಡಿಯಲ್ಲಿ ನಿಮ್ಮ ಜಮೀನಿನ ನಕ್ಷೆ ತೆರೆದುಕೊಳ್ಳುತ್ತದೆ. ಇಲ್ಲಿ ಕೆಲವು ಚಿಹ್ನೆಗಳ ಮೂಲಕ ಕಾಲುದಾರಿ, ಬಂಡಿ ದಾರಿ, ಇತರ ಸರ್ವೆ ನಂಬರ್, ದೇವಾಲಯಗಳು, ರಸ್ತೆಗಳು, ನೀರಾವರಿ ಪ್ರದೇಶ, ಕೆ ಪ್ರತಿಯೊಂದು ವಿವರಗಳನ್ನು ಕೂಡ ಕಾಣಬಹುದು.

ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ ಎಲೆಕ್ಟ್ರಿಸಿಟಿ ಬಿಲ್ ಮತ್ತೆ ಹೆಚ್ಚಾಗುವ ಸಾಧ್ಯತೆ

ಬೇರೆ ಬೇರೆ ಬಣ್ಣದಲ್ಲಿ ಸಿಂಬಲ್ ಗಳನ್ನು ಕೊಟ್ಟಿರಲಾಗುತ್ತದೆ. ಆ ಮೂಲಕ ನೀವು ಮಾಹಿತಿ ತಿಳಿಯಬಹುದು.
ಕಂದಾಯ ಇಲಾಖೆ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಈ ನಕ್ಷೆ ಆಯ್ಕೆಯನ್ನು ಬಿಡುಗಡೆ ಮಾಡಿದ್ದು ಅಗತ್ಯ ಇರುವವರು ಪ್ರಯೋಜನ ಪಡೆದುಕೊಳ್ಳಬಹುದು.

Find out whether there is a way to your Property or not, right on your mobile

Related Stories