ಕೃಷಿ ಮಾಡೋ ರೈತರಿಗೆ 5 ರಿಂದ 50 ಲಕ್ಷ ರೂಪಾಯಿ ಸಹಾಯಧನ! ಇಂದೇ ಅಪ್ಲೈ ಮಾಡಿ

ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ ಪಡೆಯಿರಿ 50 ಲಕ್ಷ ರೂಪಾಯಿಗಳ ಸಹಾಯ ಧನ

ವಿದ್ಯಾವಂತ ಯುವಕರು, ಕೃಷಿ ಪದವೀಧರರು, ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರು, ಕೃಷಿಯ ಬಗ್ಗೆ ಬಲ್ಲ ಹಾಗೂ ತಾಂತ್ರಿಕವಾಗಿ ಕೃಷಿ ಅಭಿವೃದ್ಧಿ ಮಾಡಲು ಬಯಸುವ ಯುವಕರು ಈ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಸರ್ಕಾರದಿಂದ ಐದರಿಂದ 50 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ ಪಡೆಯಬಹುದು.

ಕೃಷಿ ನವೋದ್ಯಮ ಯೋಜನೆ! (Krushi navodyama Yojana)

ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಕೃಷಿ ಚಟುವಟಿಕೆ ( agriculture activities) ಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಕೃಷಿ ಮಾಡಿ ಹೆಚ್ಚು ಸಂಪಾದನೆ ಮಾಡಬಹುದು ಎಂಬುದನ್ನು ಅರಿತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಅಥವಾ ಕೃಷಿ ಉದ್ಯಮ ಆರಂಭಿಸುವುದಕ್ಕಾಗಿ ಯುವಕರಿಗೆ, ಸರ್ಕಾರ ಸಹಾಯಧನ (government subsidy) ನೀಡುವ ಮೂಲಕ ಕೃಷಿ ಚಟುವಟಿಕೆಯನ್ನು ಉತ್ತೇಜಿಸುತ್ತಿದೆ.

ಕೃಷಿ ಮಾಡೋ ರೈತರಿಗೆ 5 ರಿಂದ 50 ಲಕ್ಷ ರೂಪಾಯಿ ಸಹಾಯಧನ! ಇಂದೇ ಅಪ್ಲೈ ಮಾಡಿ - Kannada News

ನಿಮ್ಮ ಹೊಲ, ಗದ್ದೆ, ಜಮೀನಿಗೆ ದಾರಿ ಇದಿಯೋ ಇಲ್ವೋ ಮೊಬೈಲ್‌ನಲ್ಲೇ ತಿಳಿದುಕೊಳ್ಳಿ

ಕೃಷಿ ನವೋದ್ಯಮ ಯೋಜನೆಯ ಅಡಿಯಲ್ಲಿ ಆರ್ಥಿಕ ಸೌಲಭ್ಯ!

ಕೃಷಿ ಕ್ಷೇತ್ರ (agriculture field) ದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು, ಕೃಷಿಯಲ್ಲಿ ನಾವಿನ್ಯತೆ ಹಾಗೂ ತಾಂತ್ರಿಕತೆ (technology in agriculture field ) ಬಳಸಲು ಆಸಕ್ತಿ ಹೊಂದಿರುವ ಯುವಕರಿಗೆ ಕೃಷಿ ನವೋದ್ಯಮದ ಮೂಲಕ ಆರ್ಥಿಕ ನೆರವು ನೀಡುವುದು ಸರ್ಕಾರದ ಉದ್ದೇಶ.

ಗ್ರಾಮೀಣ ಭಾಗದಲ್ಲಿ ಯುವಕರು ಕೃಷಿಯಲ್ಲಿಯೇ ಉದ್ಯೋಗ ಕಂಡುಕೊಳ್ಳಲು ಈ ಯೋಜನೆ ಸಹಾಯಕವಾಗಲಿದೆ. ಕೃಷಿ ವಿಶ್ವವಿದ್ಯಾಲಯ (Agriculture University) ಗಳಲ್ಲಿ ಹಾಗೂ ಇತರ ಸಂಶೋಧನೆಗಳಲ್ಲಿ ವಾಣಿಜ್ಯೀಕರಣವನ್ನು ಉತ್ತೇಜಿಸುವ ಮೂಲಕ ಕೃಷಿ ನವೋದ್ಯಮ ಹೆಚ್ಚಿಸುವುದು ಸರ್ಕಾರದ ಉದ್ದೇಶ.

ಗೃಹಲಕ್ಷ್ಮಿ ಹಣ ಒಟ್ಟಾರೆ 8,000 ಜಮಾ! ಇನ್ನೂ ಹಣ ಸಿಗದ ಮಹಿಳೆಯರಿಗೆ ಹೊಸ ಅಪ್ಡೇಟ್

Loanಪಡೆಯಿರಿ 50 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ!

ಕೃಷಿ ನವೋದ್ಯೋಮಿಗಳಿಗೆ ಬ್ಯಾಂಕ್ ಮೂಲಕ ಐದರಿಂದ 20 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan Facility) ಒದಗಿಸಲಾಗುವುದು. ಇದರಲ್ಲಿ 50% ನಷ್ಟು ಸಹಾಯಧನ ಸರ್ಕಾರ ಒದಗಿಸುತ್ತದೆ.

ಅದೇ ರೀತಿ ಈಗಾಗಲೇ ಆರಂಭಿಸಿರುವ ಕೃಷಿ ಉದ್ಯಮವನ್ನು ಅಭಿವೃದ್ಧಿಪಡಿಸಲು 50 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Loan) ಹಾಗೂ 50% ನಷ್ಟು ಸಹಾಯಧನ ಪಡೆಯಬಹುದು. ಕೃಷಿ ಉದ್ದಿಮೆಗಳಿಗೆ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ತಂಡದಿಂದ ತರಬೇತಿ (agri training) ಯನ್ನು ನೀಡಲಾಗುತ್ತದೆ.

ರೇಷನ್‌ ಕಾರ್ಡ್‌ನಲ್ಲಿ ಹೊಸ ಸದಸ್ಯರನ್ನು ಸೇರಿಸಲು ಅವಕಾಶ! ಇಲ್ಲಿದೆ ಸುಲಭ ವಿಧಾನ

ಅರ್ಜಿ ಸಲ್ಲಿಸುವುದು ಹೇಗೆ?

ಕೃಷಿ ಇಲಾಖೆಯ ಕಿಸಾನ್ ವೆಬ್ಸೈಟ್ https://www.mofpi.gov.in/pmfme/ ಹೆಚ್ಚಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ. ಕೃಷಿ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಲು ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ.

5 to 50 lakh rupees subsidy for agricultural farmers

Follow us On

FaceBook Google News

5 to 50 lakh rupees subsidy for agricultural farmers