ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ವಸತಿ ಯೋಜನೆಯಲ್ಲಿ ಸ್ವಂತ ಮನೆ ಮಾಡಿಕೊಳ್ಳಿ

ರಾಜೀವ್ ಗಾಂಧಿ ಉಚಿತ ಮನೆ ಹಂಚಿಕೆ; ನೀವು ನೋಂದಾಯಿಸಿಕೊಂಡರೆ ಸ್ವಂತ ಮನೆ ಪಡೆಯಬಹುದು

ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi housing scheme) ಯ ಅಡಿಯಲ್ಲಿ ಉಚಿತ ಮನೆ ವಿತರಣೆ ಮಾಡುವ ಸಲುವಾಗಿ ರಾಜ್ಯ ಸರ್ಕಾರ (state government) ಇನ್ನಷ್ಟು ಕೋಟ್ಯಾಂತರ ಹಣದ ಅನುದಾನ ನೀಡುತ್ತಿದೆ.

ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ಮಾತ್ರವಲ್ಲದೆ ನಗರ ಭಾಗದಲ್ಲಿ ಇರುವ ಜನರು ಕೂಡ ಸ್ವಂತ ಮನೆ ನಿರ್ಮಾಣ (Own house) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.

ತನ್ನದೇ ಆಗಿರುವ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಎನ್ನುವ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ? ನಗರ ಭಾಗದಲ್ಲಿ ಇರಬಹುದು ಅಥವಾ ಹಳ್ಳಿಯಲ್ಲಿಯೇ ಇರಬಹುದು ಸಾಕಷ್ಟು ಜನ ತಮ್ಮದೇ ಆಗಿರುವ ಒಂದು ಮನೆ ಕೂಡ ಹೊಂದಿರುವುದಿಲ್ಲ. ಇದಕ್ಕೆ ಮುಖ್ಯವಾಗಿ ಬಡತನ (poverty) ಎನ್ನುವುದು ಕಾರಣವಾಗಿರುತ್ತದೆ.

ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ವಸತಿ ಯೋಜನೆಯಲ್ಲಿ ಸ್ವಂತ ಮನೆ ಮಾಡಿಕೊಳ್ಳಿ - Kannada News

ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ; ಪಟ್ಟಿಯಲ್ಲಿ ಹೆಸರಿದ್ರೆ ಮಾತ್ರ ಹಣ ಖಾತೆಗೆ ಜಮಾ!

ಸ್ವಂತ ಮನೆ ಮಾಡಿಕೊಳ್ಳಲು ಕೆಲವರು ಹೋಮ್ ಲೋನ್ (Home Loan) ಮೊರೆ ಹೋದರೆ, ಬಹುತೇಕರಿಗೆ ಹೋಮ್ ಲೋನ್ (Home Loan) ಕೂಡ ಸಿಗುವುದಿಲ್ಲ.

ಮನೆ ನಿರ್ಮಾಣ ಮಾಡುವುದು ಅಂದ್ರೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕು. ಅಷ್ಟು ಹಣ ಎಲ್ಲರ ಬಳಿ ಇರಲು ಸಾಧ್ಯವೇ ಇಲ್ಲ. ಆದರೆ ಇದಕ್ಕೆ ಮನೆ ನಿರ್ಮಾಣ ಮಾಡಿ ಕೊಳ್ಳುವ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಲ್ಲ. ಯಾಕೆಂದರೆ ರಾಜೀವ್ ಗಾಂಧಿ ವಸತಿ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಮನೆ ಹಂಚಿಕೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ ಸಾವಿರಾರು ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಬಹು ಮಹಡಿ ವಸತಿ ಯೋಜನೆಗೆ ಚಾಲನೆ ನೀಡಿದ ರಾಜ್ಯ ಸರ್ಕಾರ!

ಬೆಂಗಳೂರಿನಲ್ಲಿ ಕೆಲಸವನ್ನು ಅರಸಿ ತಮ್ಮದೇ ಆಗಿರುವ ಜೀವನ ಕಟ್ಟಿಕೊಳ್ಳಲು ಪ್ರತಿದಿನ ಲಕ್ಷಾಂತರ ಜನ ಬರುತ್ತಾರೆ. ಹೀಗೆ ಬೆಂಗಳೂರಿಗೆ ವಲಸೆ ಬಂದು ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿ (house in Bengaluru City) ನಲ್ಲಿಯೇ ವಾಸಿಸುತ್ತಿರುವ ಜನರಿಗೆ ಇಲ್ಲಿಯೇ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಸದಾವಕಾಶ ಮಾಡಿಕೊಟ್ಟಿದೆ.

ಹೌದು ಬೆಂಗಳೂರಿನಲ್ಲಿ ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ವಾಸವಾಗಿರುವ ಜನರಿಗೆ ಬಹು ಮಹಡಿ ಕಟ್ಟಡ ಯೋಜನೆಯ ಅಡಿಯಲ್ಲಿ ಸರ್ಕಾರ ಒಂದು ಲಕ್ಷ ಮನೆಗಳನ್ನು ಮಂಜೂರು ಮಾಡಿದೆ. ಬಹುಮಹಡಿ ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದ್ದು, ಸದ್ಯದಲ್ಲಿಗೆ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ನಿಮ್ಮ ಹೊಲ, ಗದ್ದೆ, ಜಮೀನಿಗೆ ದಾರಿ ಇದಿಯೋ ಇಲ್ವೋ ಮೊಬೈಲ್‌ನಲ್ಲೇ ತಿಳಿದುಕೊಳ್ಳಿ

housing schemeಈಗಲೇ ಅರ್ಜಿ ಸಲ್ಲಿಸಿ!

ಬೆಂಗಳೂರು ಬಹು ಮಹಡಿ ಕಟ್ಟಡ ಯೋಜನೆಯಲ್ಲಿ ಈಗಾಗಲೇ ಐದು ತಾಲೂಕುಗಳಲ್ಲಿ ಸುಮಾರು 8096 ಫ್ಲ್ಯಾಟ್ ನಿರ್ಮಾಣ (Flat construction) ಮಾಡಲಾಗಿದೆ. ಈ ಮನೆಗಳನ್ನು ಶೇರ್ ವಾಲ್ ತಂತ್ರಜ್ಞಾನ (share wall technology) ಬಳಸಿ ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಯ ಕಾರ್ಪೆಟ್ ಏರಿಯಾ 485 sq ft ಇರಲಿದೆ.

ಮೊದಲ ಹಂತದಲ್ಲಿ 3138 ಫ್ಲಾಟ್ ಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದ್ದು ಇದಕ್ಕೆ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ.

ಗೃಹಲಕ್ಷ್ಮಿ ಹಣ ಒಟ್ಟಾರೆ 8,000 ಜಮಾ! ಇನ್ನೂ ಹಣ ಸಿಗದ ಮಹಿಳೆಯರಿಗೆ ಹೊಸ ಅಪ್ಡೇಟ್

ಬೆಂಗಳೂರಿನ ಮನೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಮುಖ್ಯಮಂತ್ರಿ ಬಹು ಮಹಡಿ ಕಟ್ಟಡ ಯೋಜನೆಯ ಅಡಿಯಲ್ಲಿ ಸುಮಾರು ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು 2BHK ಫ್ಲಾಟ್ ಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು.

ಈ ಮನೆಗಳನ್ನು 14 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮನೆ ಎರಡು ಬ್ರೆಡ್ ರೂಮ್ (2BHK) ಒಂದು ಕಿಚನ್ ಒಂದು ಶೌಚಾಲಯ ಹಾಗೂ ಒಂದು ಹಾಲ್ ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents to apply)

ಬೆಂಗಳೂರು ನಗರ ಅಥವಾ ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಕಳೆದ ಒಂದು ವರ್ಷಗಳಿಂದ ವಾಸವಾಗಿರಬೇಕು.
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ದಿವ್ಯಾಂಗರಾಗಿದ್ದರೆ ಸರ್ಕಾರದಿಂದ ನೀಡಿರುವ ಪ್ರಮುಖ ಪತ್ರ ಸಲ್ಲಿಕೆ ಮಾಡಬೇಕು.

ರೇಷನ್‌ ಕಾರ್ಡ್‌ನಲ್ಲಿ ಹೊಸ ಸದಸ್ಯರನ್ನು ಸೇರಿಸಲು ಅವಕಾಶ! ಇಲ್ಲಿದೆ ಸುಲಭ ವಿಧಾನ

ಅರ್ಜಿ ಸಲ್ಲಿಸುವುದು ಹೇಗೆ? (How to apply)

https://ashraya.karnataka.gov.in/BeneficiaryStatusNew.aspx
ರಾಜೀವ್ ಗಾಂಧಿ ವಸತಿ ನಿರ್ಮಾಣದ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ ನೀವು ಬೆಂಗಳೂರಿನ ವಿಧಾನಸಭಾ ಕ್ಷೇತ್ರ, ತಾಲೂಕು ಹೋಬಳಿ ಮೊದಲಾದ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಎಲ್ಲಾ ವಿವರಗಳನ್ನು ನೀಡಿದ ನಂತರ ಒಂದು ಲಕ್ಷ ರೂಪಾಯಿಗಳನ್ನು ಡೆಪಾಸಿಟ್ (deposit 1 lakh rupees) ಇಟ್ಟು ಬುಕ್ ಮಾಡಿಕೊಳ್ಳಲೇಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ! (Contact for more details)

ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ,
8/9ನೇ ಮಹಡಿ, ಇ ಬ್ಲಾಕ್
ಕ.ಮಂ, ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು- 560009
ಕರೆ ಮಾಡಿ – 91-080-23118888

Own a house in a housing scheme, Apply today for Free House

Follow us On

FaceBook Google News

Own a house in a housing scheme, Apply today for Free House