ಗೃಹಲಕ್ಷ್ಮಿ 4ನೇ ಕಂತಿನ ಪೆಂಡಿಂಗ್ ಹಣ ಬಿಡುಗಡೆ! ಇಲ್ಲಿದೆ ಜಿಲ್ಲಾವಾರು ಪಟ್ಟಿ
ಪ್ರತಿ ತಿಂಗಳು ನೇರವಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ (Bank Account) ಜಮಾ (DBT) ಆಗುತ್ತಿದೆ.
ರಾಜ್ಯ ಸರ್ಕಾರ (state government) ದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಹೆಚ್ಚು ಅನುದಾನವನ್ನು ಪಡೆದುಕೊಂಡು ಆರಂಭಿಸಲಾಗಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha lakshmi scheme).
ಮಹಿಳೆಯರು ಸಾಮಾನ್ಯವಾಗಿ ತಮ್ಮ ದೈನಂದಿನ ಖರ್ಚುಗಳನ್ನು ನಿಭಾಯಿಸಿಕೊಳ್ಳುವುದಕ್ಕೆ ಸ್ವಲ್ಪವಾದರೂ ಆರ್ಥಿಕವಾಗಿ ಸಹಾಯ ಮಾಡಬೇಕು ಎನ್ನುವ ದೃಷ್ಟಿಯಿಂದ ಸರ್ಕಾರ ಮಹಿಳೆಯರಿಗೆ 2,000 ಗಳನ್ನು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೀಡುತ್ತಿದೆ. ಪ್ರತಿ ತಿಂಗಳು ನೇರವಾಗಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ (Bank Account) ಜಮಾ (DBT) ಆಗುತ್ತಿದೆ.
ನಿಮ್ಮ ರೇಷನ್ ಕಾರ್ಡ್‌ಗೆ ಅನ್ನಭಾಗ್ಯ ಹಣ ವರ್ಗಾವಣೆ ಆಗಿದ್ಯಾ? ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆಯ ಮೂರು ದಿನಗಳ ಕ್ಯಾಂಪ್ ಯಶಸ್ವಿ!
ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ರಾಜ್ಯದಲ್ಲಿ ಕೋಟ್ಯಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಮೂರು ಕಂತಿನ ಹಣ ಬಹುತೇಕ ಮಹಿಳೆಯರ ಖಾತೆಗೆ ವರ್ಗಾವಣೆ (Money Transfer) ಆಗಿದೆ.
ಆದರೆ ಇನ್ನೂ ಲಕ್ಷಾಂತರ ಜನರ ಖಾತೆಗೆ ಹಣ ವರ್ಗಾವಣೆ ಆಗದೆ ಇರುವುದನ್ನು ಗಮನಿಸಿದ ಸರ್ಕಾರ ಮೂರು ದಿನಗಳ ಗ್ರಾಮೀಣ ಮಟ್ಟದ ಕ್ಯಾಂಪ್ (3 days camp) ಆಯೋಜನೆ ಮಾಡಿತ್ತು. ಈ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕೂಡ ಈ ಶಿಬಿರದಲ್ಲಿ ಭಾಗವಹಿಸಿದ್ದು, ಸಾಕಷ್ಟು ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆ ಪರಿಹಾರಕ್ಕೆ ಮಾರ್ಗದರ್ಶನ ನೀಡಿದ್ದಾರೆ.
ಉಚಿತ ಮನೆ ಹಂಚಿಕೆಗೆ ಅರ್ಜಿ ಆಹ್ವಾನ! ವಸತಿ ಯೋಜನೆಯಲ್ಲಿ ಸ್ವಂತ ಮನೆ ಮಾಡಿಕೊಳ್ಳಿ
ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar Card link) ಆಗಿರಲಿಲ್ಲ. ಕೆವೈಸಿ ಮಾಡಿಸಿಕೊಳ್ಳದೆ ಇರುವ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಮ್ಯಾಚ್ ಆಗುತ್ತಿರಲಿಲ್ಲ.
ಇಂತಹ ಎಲ್ಲಾ ಸಮಸ್ಯೆಗಳ ಜೊತೆಗೆ ಒಂದಷ್ಟು ತಾಂತ್ರಿಕ ದೋಷ (technical error) ಗಳು ಕೂಡ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗದೆ ಇರುವುದಕ್ಕೆ ಕಾರಣಗಳು.
ಇದೀಗ ಇವೆಲ್ಲಾ ಸಮಸ್ಯೆಗಳನ್ನು ಮಹಿಳೆಯರು ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯವಾಗಿದ್ದು ನಾಲ್ಕನೇ ಕಂತಿನ ಹಣ ಬಹುತೇಕ 100% ಮಹಿಳೆಯರ ಖಾತೆಗೆ ಜಮಾ (Money Deposit) ಆಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ; ಪಟ್ಟಿಯಲ್ಲಿ ಹೆಸರಿದ್ರೆ ಮಾತ್ರ ಹಣ ಖಾತೆಗೆ ಜಮಾ!
ನಾಲ್ಕನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಿ!
ಜನವರಿ 20ನೇ ತಾರೀಖಿನ ಒಳಗೆ ಪ್ರತಿಯೊಬ್ಬರ ಖಾತೆಗೂ ಕೂಡ ನಾಲ್ಕನೇ ಕಂತಿನ ಹಣ (4th installment) ಜಮಾ ಆಗುವ ನಿರೀಕ್ಷೆ ಇದೆ. ಆರಂಭದಲ್ಲಿ 15 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿದ್ದು, ನಿನ್ನೆ ಅಂದರೆ 3 ಜನವರಿ 2024ರಂದು ಮತ್ತೆ ಕೆಲವು ಜಿಲ್ಲೆಗಳಿಗೆ ಹಣ ವರ್ಗಾವಣೆ ಆಗಿದೆ.
ನಿಮಗೆ 2,000 ಜಮಾ ಆಗಿರುವ ಬಗ್ಗೆ, ಮೊಬೈಲ್ಗೆ ಸಂದೇಶ ಬಾರದೆ ಇದ್ದರೆ ತಕ್ಷಣವೇ ಬ್ಯಾಂಕ್ (Bank) ಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲಿಸಿ. ಅಥವಾ ಕರ್ನಾಟಕ ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಶನ್ (mobile application) DBT Karnataka) ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
ನಿಮ್ಮ ಹೊಲ, ಗದ್ದೆ, ಜಮೀನಿಗೆ ದಾರಿ ಇದಿಯೋ ಇಲ್ವೋ ಮೊಬೈಲ್‌ನಲ್ಲೇ ತಿಳಿದುಕೊಳ್ಳಿ
ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ಗೆ ಒಂದು ಓಟಿಪಿ (OTP) ಕಳುಹಿಸಲಾಗುತ್ತದೆ. ಅದನ್ನು ಬಾಕ್ಸ್ ಒಳಗೆ ನಮೂದಿಸಿ ಬಳಿಕ ಲಾಗಿನ್ ಆಗಿ. ಈಗ ಸರ್ಕಾರದ ಯಾವುದೇ ಯೋಜನೆಯ ಡಿ ಬಿ ಟಿ ಹಣ ನಿಮ್ಮ ಖಾತೆಯನ್ನು ತಲುಪಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಬಹುದು.
Gruha lakshmi scheme 4th installment pending money release, Here is the district wise list