ರೇಷನ್ ಕಾರ್ಡ್ ಇಲ್ಲದವರಿಗೆ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ

ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ (ration card) ಇಲ್ಲದವರಿಗೆ 2024 ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಘೋಷಿಸಿದೆ.

ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ (ration card) ಇಲ್ಲದವರಿಗೆ 2024 ಹೊಸ ವರ್ಷಕ್ಕೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ಘೋಷಿಸಿದೆ. ಇನ್ನು ಮುಂದೆ ಸರ್ಕಾರದ ಪಡಿತರ ವಸ್ತು ಪಡೆದುಕೊಳ್ಳುವುದು ಮಾತ್ರವಲ್ಲದೆ ಸರ್ಕಾರದ ಇತರ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅಗತ್ಯವಾಗಿರುವ ರೇಷನ್ ಕಾರ್ಡ್ ಅನ್ನು ಪ್ರತಿಯೊಬ್ಬರು ಹೊಂದಬಹುದು ಎಂದು ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರದ ಹೊಸ ಅಪ್ಡೇಟ್ (State government new update)

ಆಹಾರ ಇಲಾಖೆ (food department) ಗೆ ಇದುವರೆಗೆ ಸಂದಾಯವಾಗಿರುವ ಸುಮಾರು ಮೂರು ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ಅರ್ಜಿಯನ್ನು ಹಂತ ಹಂತವಾಗಿ ಪರಿಶೀಲನೆ (application verification) ಮಾಡಲಾಗುತ್ತಿದೆ.

ಸುಮಾರು 20 ಸಾವಿರಕ್ಕೂ ಹೆಚ್ಚಿನ ಪಡಿತರ ಚೀಟಿ ಪರಿಶೀಲನೆ ನಡೆಸಲಾಗಿದ್ದು, ಜನವರಿ 15ರ ಒಳಗೆ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡಲಾಗುವುದು.

ರೇಷನ್ ಕಾರ್ಡ್ ಇಲ್ಲದವರಿಗೆ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ - Kannada News

ಕೇವಲ 1 ಲಕ್ಷಕ್ಕೆ ಸ್ವಂತ ಮನೆ ಮಾಡಿಕೊಳ್ಳಿ, ಸರ್ಕಾರದ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

ಇನ್ನು ಇದರ ಜೊತೆಗೆ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೌದು, ರಾಜ್ಯದಲ್ಲಿ ಯಾರು ಪಡಿತರ ಚೀಟಿ ಹೊಂದಿಲ್ಲವೋ ಅಂತವರಿಗೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಸರ್ಕಾರ ಮತ್ತೆ ಅವಕಾಶ ನೀಡುತ್ತಿದೆ.

ಜನವರಿಯಲ್ಲಿ ಹೊಸ ಪಡಿತರ ಚೀಟಿ ಗಾಗಿ ಅರ್ಜಿ (you can apply for new ration card) ಸಲ್ಲಿಸಬಹುದು. ಮುಂದಿನ ತಿಂಗಳು ಅಂದರೆ ಫೆಬ್ರುವರಿಯಲ್ಲಿಯೂ ಕೂಡ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿಯಬಹುದು.

ಹೊಸ ಪಡಿತರ ಚೀಟಿ ಗಾಗಿ ಅರ್ಜಿ ಸಲ್ಲಿಸುವವರು ಇದನ್ನು ಗಮನಿಸಿ!

ಬೇಕಾಬಿಟ್ಟಿಯಾಗಿ ಯಾರೂ ಕೂಡ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಂತಿಲ್ಲ. ಇದಕ್ಕೆ ಸರ್ಕಾರದ ಕೆಲವು ಪ್ರಮುಖ ನಿಯಮಗಳನ್ನು ಪಾಲನೆ ಮಾಡಬೇಕು.

ಪಡಿತರ ಚೀಟಿ ಹೊಂದಿರುವವರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ಎಪಿಎಲ್ ಕಾರ್ಡ್ (APL Card) ಇರುವವರು ಬಿಪಿಎಲ್ ಕಾರ್ಡ್ (BPL card) ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಸಾಧ್ಯತೆ ಇರುತ್ತದೆ. ಆದರೆ ಈ ರೀತಿ ಮಾಡುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.

ಇನ್ನು ಎರಡನೆಯದಾಗಿ ನೀವು ಒಂದು ಪಡಿತರ ಚೀಟಿಯಲ್ಲಿ ಸದಸ್ಯರಾಗಿ ನಿಮ್ಮ ಹೆಸರು ಇದ್ದರೆ ಆ ಹೆಸರನ್ನು ಮೊದಲು ತೆಗೆಸಬೇಕು. ಆ ಕುಟುಂಬದಿಂದ ನೀವು ಹೊರಗೆ ಇದ್ದರೆ ಅರ್ಜಿ ಸಲ್ಲಿಸಬಹುದು.

ಭೂ ರಹಿತ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ

BPL Ration Cardಪಡಿತರ ಚೀಟಿ ಸಲ್ಲಿಕೆ ಮಾಡುವಾಗ ನೀವು ಎಪಿಎಲ್ ಕಾರ್ಡ್ ಗಾಗಿ ಅಥವಾ ಬಿಪಿಎಲ್ ಕಾರ್ಡ್ ಗಾಗಿ ಹಾಗೂ ಅಂತ್ಯೋದಯ ಕಾರ್ಡ್ ಗಾಗಿ ಮೂರು ವಿಭಾಗದಲ್ಲಿ ಯಾವುದಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.

ಬೆಳಿಗ್ಗೆ 9:00 ಯಿಂದ ಮಧ್ಯಾಹ್ನದ ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಲ್ಲಿಸಲು ಬಯಸುವ ಫಲಾನುಭವಿಗಳು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಇರುವ ದಾಖಲೆಗಳನ್ನು ಹತ್ತಿರದ ಸೇವಾ ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ, ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ 4ನೇ ಕಂತಿನ ಪೆಂಡಿಂಗ್ ಹಣ ಬಿಡುಗಡೆ! ಇಲ್ಲಿದೆ ಜಿಲ್ಲಾವಾರು ಪಟ್ಟಿ

ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ!

ನಾಲ್ಕು ಕಂತಿನ ಹಣ ಕೂಡ ಬಿಡುಗಡೆ ಆಗಿದೆ, ಸಾಕಷ್ಟು ಜನರ ಖಾತೆಗೆ (Bank Account) ಅನ್ನಭಾಗ್ಯ ಯೋಜನೆ (Annabhagya scheme) ಯ ಹಣ ಜಮಾ ಆಗಿದ್ದು ಇನ್ನೂ ಹಲವರ ಖಾತೆಗೆ ಹಣ ಬಂದಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ.

ಮುಖ್ಯವಾಗಿ ಮನೆ ಯಜಮಾನ ಅಥವಾ ಯಜಮಾನಿ ಖಾತೆಗೆ ಕೆ ವೈ ಸಿ (E-KYC) ಆಗದೆ ಇರುವುದು ಪ್ರಮುಖವಾದ ಕಾರಣವಾಗಿದೆ. ಹೋಗಿ ಆಧಾರ್ ಲಿಂಕ್ ಆಗಿದ್ಯೋ ಇಲ್ಲವೂ ಎಂಬುದನ್ನು ಚೆಕ್ ಮಾಡಿಕೊಳ್ಳಿ.

ನಿಮ್ಮ ರೇಷನ್ ಕಾರ್ಡ್‌ಗೆ ಅನ್ನಭಾಗ್ಯ ಹಣ ವರ್ಗಾವಣೆ ಆಗಿದ್ಯಾ? ಚೆಕ್ ಮಾಡಿಕೊಳ್ಳಿ

ಅನ್ನಭಾಗ್ಯ ಯೋಜನೆಯ ಹಣ ಯಾವ ದಿನಾಂಕ ಜಮಾ ಆಗಲಿದೆ!

ಸರ್ಕಾರ ಕಳೆದ ಜುಲೈ ತಿಂಗಳಿನಿಂದಲೂ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34ಗಳಂತೆ 5 ಕೆಜಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ ಜಮಾ (Money Deposit) ಮಾಡುತ್ತಿದೆ. ಇಲ್ಲಿಯವರೆಗೂ ಉಚಿತ ಅಕ್ಕಿ ವಿತರಣೆ (free rice distribution) ಮಾಡಲು ಹೆಚ್ಚುವರಿ ಅಕ್ಕಿಯನ್ನು ಒದಗಿಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಡಿ ಬಿ ಟಿ ಮಾಡುವ ಪ್ರಕ್ರಿಯೆಯನ್ನು ಮುಂದುವರೆಸಿದೆ. ಆದ್ರೆ ಒಂದು ವೇಳೆ ನಿಮ್ಮ ಪಡಿತರ ಚೀಟಿ ರದ್ದಾಗಿದ್ದರೆ ನಿಮ್ಮ ಖಾತೆಗೆ (Bank Account) ಹಣ ಬರುವುದಿಲ್ಲ.

ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಈ ಸರ್ವಿಸ್ ವಿಭಾಗದಲ್ಲಿ, ಇ ಸ್ಥಿತಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಮಾಹಿತಿಗಳನ್ನು ನೀಡಿ ನಿಮ್ಮ ಪಡಿತರ ಚೀಟಿ ರದ್ದಾಗಿದೆಯೋ ಅಥವಾ ನಿಮ್ಮ ಹೆಸರು ಇದೆಯೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.

State Government Update for those who do not have a ration card

Follow us On

FaceBook Google News

State Government Update for those who do not have a ration card