ಕಲುಷಿತ ನೀರು ಕುಡಿದು 70 ಮಂದಿ ಅಸ್ವಸ್ಥ! ಧಾರವಾಡ ಜಿಲ್ಲೆಯಲ್ಲಿ ಘಟನೆ
ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಟಗಿ ಗ್ರಾಮದಲ್ಲಿ ಗುರುವಾರ ಕಲುಷಿತ ನೀರು ಕುಡಿದ ಪರಿಣಾಮ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ (illness).
ಕಲುಷಿತ ನೀರನ್ನು ಕುಡಿಯುವ ಮೂಲಕ ಹಲವರಿಗೆ ವಾಂತಿ (vomiting) ಮತ್ತು ಅತಿಸಾರ (diarrhea) ಉಂಟಾಗಿದ್ದು, 70 ಮಂದಿಯ ಪೈಕಿ 10 ಮಂದಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಮತ್ತು 36 ಮಂದಿ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಔಷಧಿ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಮಧ್ಯೆ, ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಗನ್ನಿಯನ್ನು (Praveen Kumar Ganni) ಜಿಲ್ಲಾಧಿಕಾರಿ ದಿವ್ಯಾ ಪ್ರಭು (Divya Prabhu) ಅಮಾನತುಗೊಳಿಸಿದ್ದಾರೆ.
ಮುಟಗಿಗೆ ಭೇಟಿ ನೀಡಿದ ದಿವ್ಯಾ ಪ್ರಭು ಅವರು, “ಗ್ರಾಮಕ್ಕೆ ಮೂರು ಬೋರ್‌ವೆಲ್‌ಗಳಿಂದ (borewells) ನೀರು ಬರುತ್ತದೆ. ಇತ್ತೀಚೆಗೆ ಸುರಿದ ಹಿಂಗಾರು ಮಳೆಯಿಂದ (heavy rain) ಹೊಸ ನೀರು ಕಲಘಟಗಿ ಕೆರೆಗಳಿಗೆ ಹರಿದುಹೋಗಿದೆ. ಈ ಸಂದರ್ಭ ಕಲುಷಿತ ನೀರು ಕೂಡ ಬಂದಿರುವ ಸಾಧ್ಯತೆಯಿದೆ. ನೀರಿನ ಮಾದರಿಗಳನ್ನು ಪರೀಕ್ಷೆಗೆ (water samples for testing) ಕಳುಹಿಸಲಾಗಿದೆ” ಎಂದು ತಿಳಿಸಿದ್ದಾರೆ.
70 people fell ill after drinking polluted water in Dharwad
Our Whatsapp Channel is Live Now 👇