ಮಂಡ್ಯದಲ್ಲಿ 8 ವರ್ಷದ ಬಾಲಕಿಗೆ ಕೇಕ್ ಆಮಿಷ, ಶಾಲಾ ಆವರಣದಲ್ಲೇ ಅತ್ಯಾಚಾರ
ಮೂವರು ದುಷ್ಕರ್ಮಿಗಳಿಂದ ಮಧ್ಯಾಹ್ನದ ಹೊತ್ತಿನಲ್ಲೇ ಭೀಕರ ಕೃತ್ಯ – ಬಾಲಕಿ ಚಿಕ್ಕಮ್ಮನ ಬಳಿ ನೋವು ತೋಡಿಕೊಂಡ ಬಳಿಕ ಘಟನೆ ಬೆಳಕಿಗೆ
- ಕೇಕ್ (Cake) ಕೊಡಿಸುವ ನೆಪದಲ್ಲಿ 8 ವರ್ಷದ ಬಾಲಕಿಗೆ ಬೆದರಿಕೆ
- ಸರ್ಕಾರಿ ಶಾಲಾ ಆವರಣದಲ್ಲಿ ಮೂವರು ಕಾಮುಕರು ನಡೆಸಿದ ಕೃತ್ಯ
- ಘಟನೆ ಜ.31ರಂದು ನಡೆದಿದ್ದು, ತಡವಾಗಿ ಹೊರಬಂದ ವಿಚಾರ
ಮಂಡ್ಯ (Mandya) ಜಿಲ್ಲೆಯ ಹೊರವಲಯದಲ್ಲಿ 8 ವರ್ಷದ ಬಾಲಕಿಗೆ ಕೇಕ್ ಆಮಿಷವೊಡ್ಡಿ, ಚಾಕು (Knife) ಹಾಕುವುದಾಗಿ ಬೆದರಿಸಿ ಮೂವರು ದುಷ್ಕರ್ಮಿಗಳು ಅತ್ಯಾಚಾರವೆಸಗಿದ ಅಮಾನವೀಯ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ಆವರಣದಲ್ಲೇ ಈ ಭೀಕರ ಕೃತ್ಯ ನಡೆದಿದೆ.
ಘಟನೆ ಜನವರಿ 31 ರಂದು ನಡೆದಿದ್ದು, ಆದರೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ತಾನು ಎದುರಿಸಿದ ಹೀನಾಯ ಘಟನೆಯನ್ನು ಯಾರಿಗೂ ಹೇಳಿಕೊಂಡಿರಲಿಲ್ಲ. ಆದರೆ, ಎರಡು ದಿನಗಳಾದರೂ ಹೊಟ್ಟೆ ನೋವು, ಮತ್ತು ನಿರಂತರ ರಕ್ತಸ್ರಾವದಿಂದ ತೀವ್ರ ಅನಾರೋಗ್ಯ ಅನುಭವಿಸಿದಳು. ಇದರಿಂದ ಅನುಮಾನಗೊಂಡ ಚಿಕ್ಕಮ್ಮ ಬಾಲಕಿಯನ್ನು ವಿಚಾರಿಸಿದಾಗ ಸಂಪೂರ್ಣ ಸತ್ಯ ಬೆಳಕಿಗೆ ಬಂದಿದೆ.
ಸದ್ಯ, ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ (Treatment) ನೀಡಲಾಗುತ್ತಿದೆ. ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
8-Year-Old Girl Assaulted in Mandya School Premises