Karnataka News

ಬಿಸಿ ಟೀ ಮೈ ಮೇಲೆ ಬಿದ್ದು ಎರಡು ವರ್ಷದ ಬಾಲಕ ಸಾವು

ಶಿವಮೊಗ್ಗ (Shivamogga): ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹಿರಿಮನೆ ರಾಜೇಶ್ ಮತ್ತು ಅಶ್ವಿನಿ ಪಾಟೀಲ್ ಅವರ ಪುತ್ರ ಅಥರ್ವ (2) ಮೃತರು.

ಕಳೆದ ತಿಂಗಳು 24ರಂದು ರಾಜೇಶ್ ಅವರ ಪಕ್ಕದ ಮನೆಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅನೇಕ ಸಂಬಂಧಿಕರು ಬಂದಿದ್ದರು. ರಾಜೇಶ್ ಅವರ ಕುಟುಂಬಸ್ಥರು ಬಂದವರಿಗೆ ಚಹಾ (Tea) ತಯಾರಿಸಿ ಪಾತ್ರೆಯಲ್ಲಿ ಸುರಿದು ತಮ್ಮ ಮನೆಯ ಗೋಡೆಯ ಮೇ ಇಟ್ಟಿದ್ದರು.

A two-year-old boy died after a hot tea fell on him in Shivamogga

ಹಾಸನಾಂಬ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ತಂದೆ-ಮಗಳು ಸಾವು

ಬಾಲಕ ಅಥರ್ವ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಪಾತ್ರೆಗೆ ತಗುಲಿ ಬಿಸಿ ಟೀ ಮಗುವಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಬಾಲಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ (Mangalore Hospital) ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಬಾಲಕನ ಸಾವಿನ ನಂತರ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ.

A two-year-old boy died after a hot tea fell on him in Shivamogga

Our Whatsapp Channel is Live Now 👇

Whatsapp Channel

Related Stories