ಬಿಪಿಎಲ್ ಕಾರ್ಡ್ ಇರುವ ಮಹಿಳೆಯರಿಗೆ ಗೃಹಲಕ್ಷ್ಮಿ ಜೊತೆಗೆ ಮತ್ತೊಂದು ಯೋಜನೆ ಜಾರಿ! ಇಂದೇ ಅರ್ಜಿ ಸಲ್ಲಿಸಿ!
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಆಗಸ್ಟ್ ಇಂದ ಜಾರಿಗೆ ಬರಲಿದೆ. ನಾಲ್ಕನೆಯ ಅನ್ನಭಾಗ್ಯ ಯೋಜನೆ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಐದನೆಯ ಯುವನಿಧಿ ಯೋಜನೆ ಡಿಸೆಂಬರ್ ನಲ್ಲಿ ಲಾಂಚ್ ಆಗಲಿದೆ.
ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ಈಗ ಭರವಸೆ ನೀಡಿದ ಹಾಗೆ 5 ಗ್ಯಾರಂಟಿ ಯೋಜನೆಗಳನ್ನು (Schemes) ಜಾರಿಗೆ ತರುವ ಕಾರ್ಯದಲ್ಲಿದೆ. ಇವುಗಳಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದು ಒಂದು ತಿಂಗಳಿಗಿಂತ ಹೆಚ್ಚಿನ ಸಮಯ ಕಳೆದಿದೆ.
ಇನ್ನು ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಆಗಸ್ಟ್ ಇಂದ ಜಾರಿಗೆ ಬರಲಿದೆ. ನಾಲ್ಕನೆಯ ಅನ್ನಭಾಗ್ಯ ಯೋಜನೆ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಐದನೆಯ ಯುವನಿಧಿ ಯೋಜನೆ ಡಿಸೆಂಬರ್ ನಲ್ಲಿ ಲಾಂಚ್ ಆಗಲಿದೆ.
ಈ ಐದು ಯೋಜನೆಗಳ ವಿಚಾರ ಒಂದು ಕಡೆಯಾದರೆ, ಮತ್ತೊಂದು ಕಡೆ ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆಯ ಯಜಮಾನಿಯ ಖಾತೆಗೆ (Bank Account) ತಿಂಗಳಿಗೆ ₹2000 ರೂಪಾಯಿ ಜಮೆ ಆಗಲಿದೆ.
ಈ ಯೋಜನೆಯ ಸೌಲಭ್ಯವನ್ನು ರಾಜ್ಯದ ಬಹಳಷ್ಟು ಹೆಣ್ಣುಮಕ್ಕಳು ಪಡೆಯುತ್ತಿದ್ದಾರೆ. ಈ ಯೋಜನೆಯ ಜೊತೆಗೆ ಹೆಣ್ಣುಮಕ್ಕಳಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರುವ ಸಿದ್ಧತೆ ನಡೆಸಿದೆ ರಾಜ್ಯ ಸರ್ಕಾರ.
ಎಲ್ಲಾ ಹೆಣ್ಣುಮಕ್ಕಳು ಈ ಯೋಜನೆಯ ಲಾಭವನ್ನು ಸಹ ಪಡೆಯಬಹುದು. ಪ್ರಸ್ತುತ ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ ಜಾರಿಯಾಗಿದೆ. ಶಕ್ತಿ ಯೋಜನೆಯಿಂದ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿಯ ಖಾತೆಗೆ ₹2000 ಜಗೆ ಆಗಲಿದೆ.
ಇದರ ಬೆನ್ನಲ್ಲೇ ಈಗ ರಾಜ್ಯ ಸರ್ಕಾರವು ಹೆಣ್ಣುಮಕ್ಕಳಿಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತರಲಿದೆ. ಇದು ವಿಶೇಷವಾಗಿ ಗರ್ಭಿಣಿ ಹೆಂಗಸರಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ.
ತೆರಿಗೆ ಕಟ್ಟೋ ಮಗ ಅಥವಾ ಮಗಳಿದ್ರೆ ತಾಯಿಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಾ? ಕೊನೆ ಗಳಿಗೆಯಲ್ಲಿ ಹೊಸ ರೂಲ್ಸ್
ಗರ್ಭಿಣಿ ಹೆಂಗಸರು ಮತ್ತು ಬಾಣಂತಿಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಹೆಸರು ಕರ್ನಾಟಕ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆ. ಈ ಯೋಜನೆಯ ಮುಖ್ಯ ಉದ್ದೇಶ ಕಷ್ಟದಲ್ಲಿರುವ ಗರ್ಭಿಣಿ ಮಹಿಳೆಯರ ಮತ್ತು ಮಗು ಜನಿಸಿದ ಮೇಲೆ ಅವರ ಮಕ್ಕಳ ಆರೋಗ್ಯಕ್ಕೆ ಸಹಾಯ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.
ಹಾಗೆಯೇ ಹೆರಿಗೆ ನಂತರ ಕೂಡ ಕೆಲವು ದಿನಗಳ ಕಾಲ ಸರ್ಕಾರವೇ ನಿಮ್ಮ ಚಿಕೆತ್ಸೆ ವೆಚ್ಚವನ್ನು (Medical Expenses) ಭರಿಸುತ್ತದೆ. ಮಗು ಹುಟ್ಟಿದ ನಂತರ ಮಡಿಲು ಕಿಟ್ ನೀಡುವ ಮೂಲಕ, ತಾಯಿ ಮಗುವಿನ ಆರೋಗ್ಯಕ್ಕೆ ಸಹಾಯ ಆಗುವ 19 ದಿನನಿತ್ಯ ಬಳಕೆ ವಸ್ತುಗಳನ್ನು ಮಡಿಲು ಕಿಟ್ ಜೊತೆಗೆ ಬಾಣಂತಿಯರಿಗೆ ವಿತರಿಸಲಾಗುತ್ತದೆ.
ಈ ಕರ್ನಾಟಕ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯ (Karnataka Samagra Mathru Arogya Palana Scheme) ಅಡಿಯಲ್ಲಿ ನಾಲ್ಕು ಯೋಜನೆಗಳು ಸೇರಿವೆ. ಆ ನಾಲ್ಕು ಯೋಜನೆಗಳು ತಾಯಿ ಭಾಗ್ಯ ಯೋಜನೆ, ತಾಯಿ ಭಾಗ್ಯ ಪ್ಲಸ್ ಯೋಜನೆ, ಪ್ರಸೂತಿ ಆರೈಕೆ ಯೋಜನೆ, ಮಡಿಲು ಕಿಟ್ ಯೋಜನೆಗಳು ಬರುತ್ತದೆ.
ಇಲ್ಲಿರುವ ನಾಲ್ಕರ ಪೈಕಿ ತಾಯಿ ಭಾಗ್ಯ ಯೋಜನೆಯಲ್ಲಿ ಹೆರಿಗೆಯಾದ ಹೆಣ್ಣುಮಕ್ಕಳಿಗೆ ₹1000 ರೂಪಾಯಿ ಕೊಡಲಾಗುತ್ತದೆ. ಹಾಗೆಯೇ ಪ್ರಸೂತಿ ಯೋಜನೆಯಲ್ಲಿ ಎಸ್.ಸಿ/ಎಸ್.ಟಿ ಗೆ ಸೇರುವ ಬಾಣಂತಿ ಹೆಣ್ಣುಮಕ್ಕಳಿಗೆ ₹3000 ಕೊಡಲಾಗುತ್ತದೆ.
ಹಾಗೆಯೇ ಬಿಪಿಎಲ್ ಕಾರ್ಡ್ ಹೊಂದಿರುವ ಬಾಣಂತಿಯರಿಗೆ ₹2000 ರೂಪಾಯಿ ಕೊಡಲಾಗುತ್ತದೆ. ಈ ಎಲ್ಲಾ ಧನಸಹಾಯ ಮಾಡಲಾಗುತ್ತದೆ. ಮಡಿಲು ಯೋಜನೆಯಲ್ಲಿ ₹1500 ರೂಪಾಯಿ ಮೌಲ್ಯದ 19 ವಸ್ತುಗಳನ್ನು ಒಳಗೊಂಡಿರುವ ಮಡಿಲು ಕಿಟ್ ನೀಡಲಾಗುತ್ತದೆ.
ಈ ಯೋಜನೆಗೆ ಸೇರಲು ನೀವು ಆಶಾ ಕಾರ್ಯಕರ್ತೆಯರು ಅಥವಾ ಕಿರಿಯ ಕುಟುಂಬ ಆರೋಗ್ಯ ಅಧಿಕಾರಿಯನ್ನು ಸಂಪರ್ಕಿಸಿ ಯೋಜನೆಯ ಸೌಲಭ್ಯ ಪಡೆಯಬಹುದು.
After Gruha Lakshmi Yojana Another scheme for women with BPL card
Follow us On
Google News |