ಮಹಿಳೆಯರಿಗೆ ಫ್ರೀ ಬಸ್ ಸೌಲಭ್ಯದ ಬೆನ್ನಲ್ಲೇ ಸಾರಿಗೆ ನೌಕರರಿಗೆ ಬಾರೀ ಸುದ್ದಿ! ಹೊಸ ನಿರ್ಧಾರ ತೆಗೆದುಕೊಂಡ ಸರ್ಕಾರ
ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಹೆಣ್ಣುಮಕ್ಕಳು ಹೆಚ್ಚಾಗಿ ಪ್ರಯಾಣ ಮಾಡುತ್ತಿರುವುದರಿಂದ, ರಾಜ್ಯದಲ್ಲಿ ಈಗ ಹೆಚ್ಚುವರಿ ಬಸ್ ಗಳ ಅಗತ್ಯವಿದೆ.
ನಮ್ಮ ರಾಜ್ಯದಲ್ಲಿ ಶಕ್ತಿ ಯೋಜನೆ (Shakti Scheme) ಜಾರಿಯಾದ ನಂತರ ಸರ್ಕಾರಿ ಬಸ್ ಗಳಲ್ಲಿ (Government Bus) ಪ್ರಯಾಣ ಮಾಡುತ್ತಿರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಹೆಣ್ಣುಮಕ್ಕಳು ಹೆಚ್ಚಾಗಿ ಪ್ರಯಾಣ ಮಾಡುತ್ತಿರುವುದರಿಂದ, ರಾಜ್ಯದಲ್ಲಿ ಈಗ ಹೆಚ್ಚುವರಿ ಬಸ್ ಗಳ ಅಗತ್ಯವಿದೆ. ಹಾಗಾಗಿ ಬಸ್ ಗಳ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಸಾರಿಗೆ ಇಲಾಖೆಗೆ ಇನ್ನು ಹೆಚ್ಚು ಜನರ ನೇಮಕಾತಿ ನಡೆಯುವುದು ಕೂಡ ಪಕ್ಕಾ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಈಗ ಸಾರಿಗೆ ಇಲಾಖೆ ನೌಕರರ ವರ್ಗಾವಣೆ ಬಗ್ಗೆ ಸರ್ಕಾರ ಹೊಸದೊಂದು ನಿರ್ಧಾರ ತೆಗೆದುಕೊಂಡಿದೆ..
ನಮ್ಮ ರಾಜ್ಯದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ (KSRTC Bus) ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಇದೊಂದು ಗುಡ್ ನ್ಯೂಸ್ ಆಗಿದೆ. 2023ರ ವರ್ಷದಲ್ಲಿ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಇದೀಗ ಅಪ್ಲಿಕೇಶನ್ ಹಾಕುವುದಕ್ಕೆ ಸಮಯ ನೀಡಲಾಗಿದ್ದು, ವಾಯುವ್ಯ ಸಾರಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಅವಕಾಶ ಆಗಿದೆ.
ಹೊಸ ಅಪ್ಡೇಟ್! ಇಂತಹ ಮಹಿಳೆಯರ ಖಾತೆಗೆ ಬರಲ್ಲ ಗೃಹಲಕ್ಷ್ಮಿ ಯೋಜನೆ ಹಣ, ಈಗ ಬಾರೀ ಕಟ್ಟುನಿಟ್ಟು
ಒಂದು ವೇಳೆ ನೀವು ವಾಯುವ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ನೀವು ಟ್ರಾನ್ಸ್ಫರ್ ಗಾಗಿ (Transfer) ಕಾಯುತ್ತಿದ್ದರೆ, ಇದು ನಿಮಗೆ ಶುಭಸುದ್ದಿ ಆಗಿದ್ದು, ಟ್ರಾನ್ಸ್ಫರ್ ಗಾಗಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ ಜಿಲ್ಲೆ ಈ ವಿಭಾಗದ ವಾಯುವ್ಯ ಸಾರಿಗೆ ನೌಕರರು ಟ್ರಾನ್ಸ್ಫರ್ ಗಾಗಿ ಅರ್ಜಿ ಸಲ್ಲಿಸಬಹುದು.
ಫ್ಯಾಮಿಲಿ, ಮಕ್ಕಳ ಓದು, ಆರೋಗ್ಯ ಮತ್ತು ಇನ್ನಿತರ ಪ್ರಮುಖ ಕಾರಣಕ್ಕೆ ಟ್ರಾನ್ಸ್ಫರ್ ಬೇಕು ಎಂದು ಬಯಸುತ್ತಿರುವವರಿಗೆ ಇದೊಂದು ಒಳ್ಳೆಯ ಅವಕಾಶ ಆಗಿದೆ. ಈ ಟ್ರಾನ್ಸ್ಫರ್ ಅಪ್ಲಿಕೇಶನ್ ಉಪಯೋಗವನ್ನು ಡ್ರೈವರ್ ಗಳು, ನಿರ್ವಾಹಕರು, ಡ್ರೈವರ್ ಕಮ್ ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು, ಆಡಳಿತ ಸಿಬ್ಬಂದಿಗಳು ಹೀಗೆ ಒಟ್ಟು 21,584 ನೌಕರರು ಇದ್ದಾರೆ, ಅವರು ಟ್ರಾನ್ಸ್ಫರ್ ಗಾಗಿ ಅರ್ಜಿ ಹಾಕಬಹುದು.
ರೇಷನ್ ಕಾರ್ಡ್ ಅಪ್ಡೇಟ್‌ಗೆ ನಾಳೆ ಸಂಜೆವರೆಗೂ ಗಡುವು! ಯಜಮಾನಿ ಹೆಸರು ಬದಲಾವಣೆಗೆ ಕೊನೆಯ ಅವಕಾಶ
ಟ್ರಾನ್ಸ್ಫರ್ ಗಾಗಿ ಒಂದು ವೇಳೆ ನೀವು ಮ್ಯಾನುವಲ್ ಆಗಿ ಅರ್ಜಿ ಸಲ್ಲಿಸಿದರು ಸಹ, ಮತ್ತೊಮ್ಮೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಟ್ರಾನ್ಸ್ಫರ್ ಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 4 ಆಗಿರುತ್ತದೆ. ಈ ದಿನದ ಒಳಗೆ ಸರಿಯಾದ ಕಾರಣ ನೀಡಿ ಟ್ರಾನ್ಸ್ಫರ್ ಗೆ ಅರ್ಜಿ ಸಲ್ಲಿಸಬೇಕು. ನೀವು ಕೊಡುವ ಕಾರಣ ಸೂಕ್ತವಾಗಿದೆ ಎನ್ನುವುದಾದರೆ, ನಿಮ್ಮ ಅರ್ಜಿಯನ್ನು ಪರಿಗಣಿಸಿ, ವರ್ಗಾವಣೆಗೆ ಅವಕಾಶ ಕೊಡಲಾಗುತ್ತದೆ. ಹಾಗಿದ್ದಮೇಲೆ ತಡಮಾಡದೆ ಇಂದೇ ವರ್ಗಾವಣೆಗೆ ಅರ್ಜಿ ಸಲ್ಲಿಸಿ..
After the free bus facility for women, there is Big news for the transport workers
Follow us On
Google News |