ರೇಷನ್ ಕಾರ್ಡ್ ಅಪ್ಡೇಟ್‌ಗೆ ನಾಳೆ ಸಂಜೆವರೆಗೂ ಗಡುವು! ಯಜಮಾನಿ ಹೆಸರು ಬದಲಾವಣೆಗೆ ಕೊನೆಯ ಅವಕಾಶ

ರಾಜ್ಯದ ಜನರು ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ (BPL Ration Card) ಕಡ್ಡಾಯವಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದೆ ಹೋದರೆ ಯಾವ ಗ್ಯಾರಂಟಿ ಯೋಜನೆಯ (Govt Schemes) ಸೌಲಭ್ಯ ಕೂಡ ಸಿಗುವುದಿಲ್ಲ.

ಕೆಲವರ ಬಳಿ ಬಿಪಿಎಲ್ ಕಾರ್ಡ್ ಇದ್ದರು ಕೂಡ, ತಿದ್ದುಪಡಿ ಮಾಡಿಸದ ಕಾರಣ ಅವರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ಸಾಕಷ್ಟು ಜನರು ಬಿಪಿಎಲ್ ಕಾರ್ಡ್ ತಿದ್ದುಪಡಿ (Ration Card Corrections) ಮಾಡಿಸಲು ಕಾದು ಕುಳಿತಿದ್ದಾರೆ. ಅಂಥವರಿಗೆ ಈಗ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ.

ಆಹಾರ ಇಲಾಖೆಯು ಈಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ನೀಡಿದ್ದು, ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 10ರ ವರೆಗೆ ಬೆಳಗ್ಗೆ 10 ಗಂಟೆಯಿಂದ 6 ಗಂಟೆವರೆಗು ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ವರಮಹಾಲಕ್ಷ್ಮಿ ಹಬ್ಬಕ್ಕಿಂತ ಮೊದಲೇ ರೇಷನ್ ಕಾರ್ಡ್ ವಿಷಯಕ್ಕೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಖುಷಿಯಲ್ಲಿ ಜನತೆ

ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಈ ಕಚೇರಿಗಳಿಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು. ರೇಶನ್ ಕಾರ್ಡ್ ಅಪ್ಡೇಟ್ ಗಾಗಿ ಕಳೆದ ವಾರ ಸರ್ಕಾರ ಅನುಮತಿ ನೀಡಿತ್ತು, ಆದರೆ ಸರ್ವರ್ ಪ್ರಾಬ್ಲಮ್ ಇಂದಾಗಿ ಅಪ್ಡೇಟ್ ಕೆಲಸ ಸ್ಥಗಿತವಾಗಿತ್ತು. ಈಗ ನಾಳೆ ಸಂಜೆವರೆಗೂ ರೇಷನ್ ಕಾರ್ಡ್ ಅಪ್ಡೇಟ್ ಗೆ ಸಮಯ ನೀಡಲಾಗಿದೆ.

ಈ ಅಪ್ಡೇಟ್ ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಿಸಬಹುದು ಎಂದು ತಿಳಿಯುವುದಾದರೆ, ಮನೆಯ ಮುಖ್ಯಸ್ಥರ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸುವುದು (Add New Name) ಅಥವಾ ತೆಗೆಸುವುದು (Remove Name), ಫಲಾನುಭವಿಯ ಹೆಸರು ಬದಲಾವಣೆ, ಮನೆಯ ಯಜಮಾನಿಯ ಹೆಸರು ಬದಲಾವಣೆ.

BPL Ration Cardಒಂದು ವೇಳೆ ನೀವು ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಎಂದು ಕಾಯುತ್ತಿದ್ದರೆ, ಸರ್ಕಾರ ಕೊಟ್ಟಿರುವ ಈ ಸಮಯದಲ್ಲಿ (Deadline) ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ರೇಷನ್ ಕಾರ್ಡ್ ಇರುವವರು ಈ ರೀತಿ ಚೆಕ್ ಮಾಡಿಕೊಳ್ಳಿ

ಈಗ ಸರ್ಕಾರದ 4 ಯೋಜನೆಗಳು ಜಾರಿಗೆ ಬಂದಿವೆ, ಶಕ್ತಿ ಯೋಜನೆ (Shakti Scheme), ಗೃಹಲಕ್ಷ್ಮಿ ಯೋಜನೆ (Gruha Lakshmi Scheme), ಗೃಹಜ್ಯೋತಿ ಯೋಜನೆ (Gruha Jyothi Yojane), ಅನ್ನಭಾಗ್ಯ ಯೋಜನೆ (Annabhagya Yojana) 4 ಯೋಜನೆಗಳನ್ನು ಈಗ ಜಾರಿಗೆ ತರಲಾಗಿದ್ದು, ಈ ಎಲ್ಲಾ ಯೋಜನೆಗಳಿಗೆ ಅಪ್ಲೈ ಮಾಡಲು ರೇಷನ್ ಕಾರ್ಡ್ ಬೇಕೇ ಬೇಕು..

ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಹಾಗೂ ಹೊಸದಾಗಿ ರೇಶನ್ ಕಾರ್ಡ್ ಗೆ ಅಪ್ಲೈ (Apply New Ration Card) ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರ ಈಗ ತಿದ್ದುಪಡಿಗೆ ಅವಕಾಶ ನೀಡಿದ್ದು, ನೀವು ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ.

The deadline for ration card update was Extended

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories