ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ರೇಷನ್ ಕಾರ್ಡ್ ಇರುವವರು ಈ ರೀತಿ ಚೆಕ್ ಮಾಡಿಕೊಳ್ಳಿ

ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ 5 ಕೆಜಿ ಅಕ್ಕಿ ನೀಡಿ, ಇನ್ನು 5ಕೆಜಿ ಅಕ್ಕಿಯ ಹಣವನ್ನು ಜನರ ಬ್ಯಾಂಕ್ ಖಾತೆಗೆ (Bank Account) ಹಾಕುವುದಾಗಿ ಸರ್ಕಾರ ಹೇಳಿತ್ತು. ಇದೀಗ ಜನರ ಖಾತೆಗೆ ಹಣ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.
ಆಹಾರ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಈ ವಿಚಾರದ ಬಗ್ಗೆ ಹೊಸ ಅಪ್ಡೇಟ್ (New Update) ನೀಡಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಅಕ್ಕಿ ಬದಲಿನ ಹಣವನ್ನು ರೇಷನ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ನಲ್ಲಿರುವ ಮುಖ್ಯಸ್ಥರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
10ನೇ ತರಗತಿ ಪಾಸ್ ಆಗಿದ್ರೆ ಸಾಕು, 30 ಸಾವಿರ ಸಂಬಳ ಸಿಗೋ ಸರ್ಕಾರಿ ಕೆಲಸ! ಇಂದೇ ಅರ್ಜಿ ಹಾಕಿ
ಬಿಪಿಎಲ್ ಕಾರ್ಡ್ (BPL Card) ಮತ್ತು ಅಂತ್ಯೋದಯ ಕಾರ್ಡ್ ನಲ್ಲಿ ಎಷ್ಟು ಸದಸ್ಯರ ಹೆಸರು ಇದೆಯೋ, ಅಷ್ಟು ಜನರಿಗೆ 1ಕೆಜಿಗೆ 34 ರೂಪಾಯಿ ಹಾಗೆ, 5 ಕೆಜಿಗೆ 170 ರೂಪಾಯಿಗಳನ್ನು ಒಬ್ಬ ವ್ಯಕ್ತಿಗೆ ಕೊಡಲಾಗುತ್ತದೆ. ಆಗಸ್ಟ್ ನಲ್ಲಿ ರೇಷನ್ ಬದಲಾಗಿ ಈ ಹಣವನ್ನು ನೀಡಲಾಗಿದೆ. ಈ ಅಪ್ಡೇಟ್ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
ಸರ್ಕಾರದ ಈ ಯೋಜನೆಯ ಹಣವು ಕೆಲವು ಜನರ ಬ್ಯಾಂಕ್ ಖಾತೆಗೆ (Bank Account) ಬಂದಿದೆ, ಇನ್ನು ಕೆಲವು ಜನರ ಬ್ಯಾಂಕ್ ಖಾತೆಗೆ ಬಂದಿಲ್ಲ. ಒಂದು ವೇಳೆ ಹಣ ಬಂದಿಲ್ಲ ಎಂದರೆ ನೀವು ಏನು ಮಾಡಬೇಕು? ಜುಲೈ ತಿಂಗಳ ಹಣ ನಿಮ್ಮ ಖಾತೆಗೆ ಬಂದಿಲ್ಲ ನೀವು ಯಾವ ಕೆಲಸ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಬರುತ್ತದೆ? ಈ ಬಗ್ಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ
ಉಚಿತ ಅಕ್ಕಿ ಸಿಗುತ್ತೆ ಎಂದುಕೊಂಡಿದ್ದವರಿಗೆ ಸರ್ಕಾರದಿಂದ ದೊಡ್ಡ ಶಾಕ್! ದಿಢೀರ್ ಬೆಲೆ ಏರಿಸಿದ ಸರ್ಕಾರ

ಆಗಸ್ಟ್ 23ರಿಂದ ರೇಶನ್ ಕಾರ್ಡ್ ಹೊಂದಿರುವ ಮುಖ್ಯಸ್ಥರ ಖಾತೆಗೆ ಹಣ ವರ್ಗಾವಣೆ ಕೆಲಸದ ಪ್ರಕ್ರಿಯೆ ಶುರುವಾಗುತ್ತದೆ ಎಂದು ತಿಳಿಸಿದ್ದಾರೆ. ನಿನ್ನೆ ಸಂಜೆ ಇಂದ ಹಣ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, ಹಣ ಪಡೆಯಲು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ರೇಷನ್ ಕಾರ್ಡ್ ಅಪ್ಲೈ ಮಾಡುವುದಕ್ಕೆ ಇನ್ಮೇಲೆ ಈ ಹೊಸ ರೂಲ್ಸ್ ಪಾಲಿಸಲೇಬೇಕು ಎಂದ ಸರ್ಕಾರ! ಏನದು ಹೊಸ ನಿಯಮಗಳು?
ನಿಮ್ಮ ರೇಷನ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್ ಲಿಂಕ್ (Aadhaar Card Link) ಆಗಿಲ್ಲದೆ ಇದ್ದರೆ, ಅಂಥವರ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ. ಈ ಕೆಲಸವನ್ನು ನೀವು ಮಾಡಿದರೆ ಸಾಕು, ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
Annabhagya Yojana money release for this month, Check Your Bank Account



