ರೇಷನ್ ಕಾರ್ಡ್ ಅಪ್ಲೈ ಮಾಡುವುದಕ್ಕೆ ಇನ್ಮೇಲೆ ಈ ಹೊಸ ರೂಲ್ಸ್ ಪಾಲಿಸಲೇಬೇಕು ಎಂದ ಸರ್ಕಾರ! ಏನದು ಹೊಸ ನಿಯಮಗಳು?

ಈಗ ಸರ್ಕಾರವು 5 ಗ್ಯಾರಂಟಿ ಯೋಜೆನಗಳನ್ನು ಜಾರಿಗೆ ತಂದಿದೆ, ಇದಕ್ಕೆಲ್ಲಾ ಅಪ್ಲೈ ಮಾಡಲು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.

ರಾಜ್ಯದ ಜನತೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಆಗಾಗ ಹೊಸ ಬದಲಾವಣೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಈಗ ರಾಜ್ಯ ಸರ್ಕಾರವು ಜನರಿಗೆ ಹೊಸ ನಿಯಮ ತಂದಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕು ಎಂದರೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರಲೇಬೇಕು, ಆಗ ಮಾತ್ರ ಸರ್ಕಾರದ ಎಲ್ಲಾ ಸೌಲಭ್ಯಗಳು ಕೂಡ ನಿಮಗೆ ಸಿಗುತ್ತದೆ.

ಈಗ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು (Govt Schemes) ಜಾರಿಗೆ ತಂದಿದೆ, ಇದಕ್ಕೆಲ್ಲಾ ಅಪ್ಲೈ ಮಾಡಲು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.

ನಮ್ಮ ರಾಜ್ಯದಲ್ಲಿ ಸಾಕಷ್ಟು ಜನರು ಬಡವರು, ನಿರ್ಗತಿಕರು ಇದ್ದಾರೆ. ಅಂಥ ಕಷ್ಟದಲ್ಲಿರುವ ಜನರಿಗಾಗಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ವಿತರಿಸಲಾಗುತ್ತದೆ. ಬಿಪಿಎಲ್ ಕಾರ್ಡ್ ಕೊಡುವುದಕ್ಕೆ ಸರ್ಕಾರವು ಜನರಿಗೆ ಕೆಲವು ನಿಯಮಗಳನ್ನು ಹಾಕಿದೆ, ಕೆಲವು ಮಾನದಂಡಗಳನ್ನು ಕೂಡ ಇಟ್ಟಿದೆ.

ರೇಷನ್ ಕಾರ್ಡ್ ಅಪ್ಲೈ ಮಾಡುವುದಕ್ಕೆ ಇನ್ಮೇಲೆ ಈ ಹೊಸ ರೂಲ್ಸ್ ಪಾಲಿಸಲೇಬೇಕು ಎಂದ ಸರ್ಕಾರ! ಏನದು ಹೊಸ ನಿಯಮಗಳು? - Kannada News

ಕರ್ನಾಟಕ ಉಪ ಸಿಎಂ ಡಿಕೆ ಶಿವಕುಮಾರ್ ಅವರಿಗೆ 50 ಸಾವಿರ ದಂಡ, ಅಷ್ಟಕ್ಕೂ ಏನಾಯ್ತು ಗೊತ್ತಾ?

ಇದೆಲ್ಲವನ್ನು ಜನರು ಪಾಲಿಸಿದರೆ ಮಾತ್ರ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಕೊಡುವುದಕ್ಕೆ ಮುಖ್ಯವಾಗಿ ಆ ವ್ಯಕ್ತಿಯ ಕುಟುಂಬದ ವಾರ್ಷಿಕ ಆದಾಯವನ್ನು ಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಸರ್ಕಾರದಿಂದ ಜನರು ಬಿಪಿಎಲ್ ಕಾರ್ಡ್ ಪಡೆದರೆ, ಸರ್ಕಾರದ ಎಲ್ಲಾ ಪ್ರಯೋಜನಗಳು ಕೂಡ ಜನರಿಗೆ ಲಭ್ಯವಾಗುತ್ತದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು, ಸರ್ಕಾರದಿಂದ ಸಿಗುವ ಸಾಲಗಳು ಇದೆಲ್ಲವನ್ನು ಪಡೆಯಲು ಬಿಪಿಎಲ್ ಕಾರ್ಡ್ ಇರಲೇಬೇಕು.

ಜೊತೆಗೆ ಬಿಪಿಎಲ್ ಕಾರ್ಡ್ ಇಂದ ಆರೋಗ್ಯ ಸೌಲಭ್ಯಗಳು ಚಿಕಿತ್ಸೆಗಳು ಸಿಗುತ್ತದೆ ಎನ್ನುವುದು ಮತ್ತೊಂದು ವಿಶೇಷ. ಈ ವರ್ಷ ನಮ್ಮ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ಕಾರಣ ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಿಂತಿತ್ತು.

ಆದರೆ ಈಗ ಮತ್ತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ರೇಷನ್ ಕಾರ್ಡ್ ಬೇಕಿರುವವರು ಅಪ್ಲಿಕೇಶನ್ ಹಾಕಬಹುದು. ಎಂದಿನ ಹಾಗೆ ನಿಮಗೆ ಹತ್ತಿರ ಇರುವ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ರೇಷನ್ ಕಾರ್ಡ್ ಇರುವವರಿಗೆ ನಿಯಮ ಬದಲಾವಣೆ! ಇದು ಸರ್ಕಾರ ನೀಡುತ್ತಿರುವ ಕೊನೆಯ ಅವಕಾಶ

BPL Ration Cardಹಾಗೆಯೇ ಸರ್ಕಾರ ಈಗ ಬಿಪಿಎಲ್ ಕಾರ್ಡ್ ಗೆ ಅಪ್ಲೈ ಮಾಡುವುದಕ್ಕೆ 6 ಹೊಸ ನಿಯಮಗಳನ್ನು ತಂದಿದೆ. ಈ ಎಲ್ಲಾ ನಿಯಮಗಳನ್ನು ಪಾಲಿಸಿದ್ದರೆ ಮಾತ್ರ ಹೊಸ ರೇಷನ್ ಕಾರ್ಡ್ ಪಡೆಯಬಹುದಾಗಿದೆ. ಜನರು ಕೊಟ್ಟ ಮಾಹಿತಿಯನ್ನು ನಂಬಿ ರೇಷನ್ ಕಾರ್ಡ್ ಕೊಟ್ಟರೆ ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ.

ಇಂಥ ಸಾಕಷ್ಟು ದೂರುಗಳು ಕೂಡ ಸರ್ಕಾರಕ್ಕೆ ಬಂದಿದೆ. ಹಾಗಾಗಿ ತಪ್ಪು ಮಾಹಿತಿ ನೀಡಿ ರೇಷನ್ ಕಾರ್ಡ್ ಪಡೆದಿರುವವರ ಕಾರ್ಡ್ ಗಳನ್ನು ರದ್ದು ಮಾಡಲಿದೆ. ಹಾಗೆಯೇ ಹೊಸದಾಗಿ ರೇಷನ್ ಕಾರ್ಡ್ ಪಡೆಯುವವರಿಗೆ 6 ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬರುವುದಕ್ಕಿಂತ ಮೊದಲೇ ಹೊಸ ನಿಯಮ ತಂದ ಡಿಸಿಎಂ ಡಿಕೆಶಿ

1. ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಕುಟುಂಬದ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.

2. ರೈತರು ಬಿಪಿಎಲ್ ಕಾರ್ಡ್ ಪಡೆದರೆ, 3 ಹೆಕ್ಟರ್ ಗಿಂತ ಹೆಚ್ಚು ಭೂಮಿ ಇರಬಾರದು.

3. ವೈಯಕ್ತಿಕ ಬಳಕೆಗೆ ವೈಟ್ ಬೋರ್ಡ್ ಕಾರ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.

4. ನಗರ ಪ್ರದೇಶದಲ್ಲಿ ಇರುವವರಃ ಹತ್ತಿರ 1000 ಅಡಿಗಿಂತ ಜಾಸ್ತಿ ದೊಡ್ಡ ಮನೆ ಇರುವವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ.

5. ಟ್ಯಾಕ್ಸ್ ಕಟ್ಟುವ ಜನರಿಗೆ ಕೂಡ ರೇಷನ್ ಕಾರ್ಡ್ ಸಿಗುವುದಿಲ್ಲ.

6. ಸರ್ಕಾರದ ಕೆಲಸ ಮಾಡುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.

ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮಗೆ ರೇಷನ್ ಕಾರ್ಡ್ ಸಿಗುತ್ತದೆ.

Now these new rules have to be followed for applying ration card

Follow us On

FaceBook Google News

Now these new rules have to be followed for applying ration card