ಕರ್ನಾಟಕ ಉಪ ಸಿಎಂ ಡಿಕೆ ಶಿವಕುಮಾರ್ ಅವರಿಗೆ 50 ಸಾವಿರ ದಂಡ, ಅಷ್ಟಕ್ಕೂ ಏನಾಯ್ತು ಗೊತ್ತಾ?
ಅನಧಿಕೃತ ಬ್ಯಾನರ್ ಹಾಕಿದ್ದಕ್ಕೆ ಡಿಕೆ ಶಿವಕುಮಾರ್ ಅವರಿಗೆ ಬಿಬಿಎಂಪಿ ಈ ದಂಡ ವಿಧಿಸಿದೆ. ಮಾಜಿ ಸಿಎಂ ದೇವರಾಜ್ ಅರಸು ಅವರ ಹುಟ್ಟುಹಬ್ಬದ ಅಂಗವಾಗಿ ಬ್ಯಾನರ್ ಹಾಕಲಾಗಿತ್ತು.
ಅನಧಿಕೃತ ಬ್ಯಾನರ್ ಹಾಕಿದ್ದಕ್ಕೆ ಡಿಕೆ ಶಿವಕುಮಾರ್ ಅವರಿಗೆ ಬಿಬಿಎಂಪಿ ಈ ದಂಡ ವಿಧಿಸಿದೆ. ಮಾಜಿ ಸಿಎಂ ದೇವರಾಜ್ ಅರಸು ಅವರ ಹುಟ್ಟುಹಬ್ಬದ ಅಂಗವಾಗಿ ಬ್ಯಾನರ್ ಹಾಕಲಾಗಿತ್ತು.
Bangalore : ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 50,000 ರೂಪಾಯಿ ದಂಡ ವಿಧಿಸಿದೆ. ಅನಧಿಕೃತ ಬ್ಯಾನರ್ (Banner) ಹಾಕಿದ್ದಕ್ಕೆ ಡಿಕೆ ಶಿವಕುಮಾರ್ ಗೆ ಬಿಬಿಎಂಪಿ ಈ ದಂಡ ವಿಧಿಸಿದೆ.
ಹೈಕೋರ್ಟ್ ಆದೇಶದಂತೆ ನಗರದಲ್ಲಿ ಅನಧಿಕೃತವಾಗಿ ಹಾಕಿರುವ ಬ್ಯಾನರ್‌ಗಳಿಗೆ (Banner) ದಂಡ ವಿಧಿಸುವ ಪ್ರಕ್ರಿಯೆಯನ್ನು ಬಿಬಿಎಂಪಿ ಮುಂದುವರಿಸಿದ್ದು, ಕರ್ನಾಟಕ ಕಾಂಗ್ರೆಸ್ (KPCC) ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅನಧಿಕೃತ ಬ್ಯಾನರ್‌ಗಳನ್ನು ಹಾಕಿದ್ದಾರೆ ಎಂಬ ಆರೋಪ ಹೊರಿಸಿದ್ದಾರೆ.
ರೇಷನ್ ಕಾರ್ಡ್ ಇರುವವರಿಗೆ ನಿಯಮ ಬದಲಾವಣೆ! ಇದು ಸರ್ಕಾರ ನೀಡುತ್ತಿರುವ ಕೊನೆಯ ಅವಕಾಶ
ಬೆಂಗಳೂರಿನ ವಸಂತನಗರದ (Bengaluru Vasanth Nagar) ಮಿಲ್ಲರ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಎದುರು ಮಾಜಿ ಸಿಎಂ ದೇವರಾಜ್ ಅರಸು ಅವರ ಹುಟ್ಟುಹಬ್ಬದ ಅಂಗವಾಗಿ ಬ್ಯಾನರ್ ಹಾಕಲಾಗಿತ್ತು. ಈ ಬ್ಯಾನರ್ ನಲ್ಲಿ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಹಿಂದುಳಿದ ವರ್ಗಗಳ ಎಲ್ಲ ಪದಾಧಿಕಾರಿಗಳ ಚಿತ್ರವಿತ್ತು.
ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬರುವುದಕ್ಕಿಂತ ಮೊದಲೇ ಹೊಸ ನಿಯಮ ತಂದ ಡಿಸಿಎಂ ಡಿಕೆಶಿ
ನಿಯಮ ಉಲ್ಲಂಘಿಸುವವರಿಗೆ 50 ಸಾವಿರ ದಂಡ ವಿಧಿಸಲಾಗುವುದು ಎಂದು ಹೈಕೋರ್ಟ್ ಈ ಹಿಂದೆ ಎಚ್ಚರಿಕೆ ನೀಡಿದೆ. ಇದೀಗ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಪಕ್ಷ ಹಾಕಿದ್ದ ಬ್ಯಾನರ್ ಗೆ ದಂಡ ವಿಧಿಸಲಾಗಿದೆ.
Karnataka Deputy CM DK Shivakumar Fined Rs 50000
BBMP has imposed this fine on DK Shivakumar for putting up unauthorized banners. The banner was put up as part of the birthday celebrations of former CM Devraj Arasu.
Follow us On
Google News |