ರೇಷನ್ ಕಾರ್ಡ್ ಇರುವವರಿಗೆ ನಿಯಮ ಬದಲಾವಣೆ! ಇದು ಸರ್ಕಾರ ನೀಡುತ್ತಿರುವ ಕೊನೆಯ ಅವಕಾಶ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಮನೆಯ ಮುಖ್ಯಸ್ಥೆ ಎಂದು ಇರಬೇಕಾಗುತ್ತದೆ. ಈ ತಿದ್ದುಪಡಿ ಮಾಡಲು ಆಗಸ್ಟ್ 16ರವರೆಗು ಸಮಯಕೊಡಲಾಗಿತ್ತು, ಆದರೆ ಈಗ ಆಗಸ್ಟ್ 21ರವರೆಗು ಸಮಯವನ್ನ ವಿಸ್ತರಿಸಲಾಗಿತ್ತು

Bengaluru, Karnataka, India
Edited By: Satish Raj Goravigere

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಎಲ್ಲಾ 5 ಗ್ಯಾರಂಟಿ ಯೋಜನೆಗಳ (GOVT Schemes) ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ (BPL Card) ಕಡ್ಡಾಯವಾಗಿದೆ. ಪ್ರಸ್ತುತ ರಾಜ್ಯ ಸರ್ಕಾರವು 3 ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಜಾರಿಗೆ ತರುತ್ತಿದೆ.

ಇದು ರಾಜ್ಯದಲ್ಲಿ ಮನೆ ನಡೆಸಿಕೊಂಡು ಹೋಗುವ ಮನೆಯ ಮುಖ್ಯಸ್ಥೆಗೆ ತಿಂಗಳಿಗೆ 2000 ಕೊಡುವ ಯೋಜನೆ ಆಗಿದ್ದು, ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದಾರೆ.

Date fixed for new ration card application, Update on Applying New Ration Card

ಆದರೆ ಯಾಕೋ ಈ ಯೋಜನೆಗೆ ಅರ್ಜಿ ಸಲ್ಲಿಸಲು ಹೆಂಗಸರಿಗೆ ರೇಷನ್ ಕಾರ್ಡ್ ಸಮಸ್ಯೆ ಎದುರಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಸಬೇಕು ಎಂದರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ (BPL Ration Card) ಮಹಿಳೆಯರ ಹೆಸರು ಮನೆಯ ಮುಖ್ಯಸ್ಥೆ ಎಂದು ಇರಬೇಕಾಗುತ್ತದೆ.

ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬರುವುದಕ್ಕಿಂತ ಮೊದಲೇ ಹೊಸ ನಿಯಮ ತಂದ ಡಿಸಿಎಂ ಡಿಕೆಶಿ

ಒಂದು ವೇಳೆ ಮನೆಯ ಯಜಮಾನರು ಇದ್ದರೆ, ಆ ಕಾರ್ಡ್ ಅನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದ ಸರ್ಕಾರ ಈ ತಿದ್ದುಪಡಿ ಮಾಡಲು ಜನರಿಗೆ ಅವಕಾಶ ಕೊಟ್ಟಿತ್ತು. ಇದಕ್ಕಾಗಿ ಅವಕಾಶವನ್ನು ಕೂಡ ನೀಡಿತ್ತು..

ಮೊದಲಿಗೆ ಈ ತಿದ್ದುಪಡಿ ಮಾಡಲು ಆಗಸ್ಟ್ 16ರವರೆಗು ಸಮಯಕೊಡಲಾಗಿತ್ತು, ಆದರೆ ಈಗ ಆಗಸ್ಟ್ 21ರವರೆಗು ಸಮಯವನ್ನ ವಿಸ್ತರಿಸಲಾಗಿತ್ತು. ಈ ದಿನದ ಒಳಗೆ ಜನರು ತಮಗೆ ಹತ್ತಿರ ಇರುವ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಇಲ್ಲಿಗೆಲ್ಲಾ ಹೋಗಿ ತಮ್ಮ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು ಎಂದು ಸರ್ಕಾರ ಮಾಹಿತಿ ನೀಡಿತ್ತು.

BPL Ration Cardರಾಜ್ಯದಲ್ಲಿ ಈಗ ಒಟ್ಟು 1.55 ಕೋಟಿ ಬಿಪಿಎಲ್ ರೇಷನ್ ಕಾರ್ಡ್ ಗಳಿವೆ, ಅವುಗಳ ಪೈಕಿ 1.22 ಕೋಟಿ ರೇಷನ್ ಕಾರ್ಡ್ ಗಳಲ್ಲಿ ಮನೆಯ ಮುಖ್ಯಸ್ಥರ ಹೆಸರು ಮನೆಯ ಯಜಮಾನಿಯ ಹೆಸರೇ ಇದ್ದು , ಇನ್ನುಳಿದ ರೇಷನ್ ಕಾರ್ಡ್ ಗಳಲ್ಲಿ ಮನೆಯ ಮುಖ್ಯಸ್ಥರ ಹೆಸರು ಮನೆಯ ಯಜಮಾನರ ಹೆಸರು ಇದ್ದು, ಅದನ್ನು ತಿದ್ದುಪಡಿ ಮಾಡಿ ಸರಿಪಡಿಸಲು ಸರ್ಕಾರ ಜನರಿಗೆ ಒಂದು ಅವಕಾಶ ನೀಡಿತ್ತು.

5 ಯೋಜನೆಗಳ ಜೊತೆಗೆ ಬಡವರಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ! ಹೊಸ ನಿರ್ಧಾರ

ಈ ಕೆಲಸಕ್ಕಾಗಿ ಜನರು ತಮ್ಮ ಹತ್ತಿರದ ಸೇವಾಕೇಂದ್ರಕ್ಕೆ ಹೋಗಿ, ತಿದ್ದುಪಡಿಗೆ ಅಪ್ಲಿಕೇಶನ್ ಪಡೆದು, ಅದನ್ನು ಫಿಲ್ ಮಾಡಿ, ಬೇಕಿರುವ ದಾಖಲೆಗಳನ್ನು ನೀಡಬೇಕು.

ಬಯೋಮೆಟ್ರಿಕ್ ಮಾಡಿ ಹಾಗೆಯೇ ಮೂಲಕ ದಾಖಲೆಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ, ಕಛೇರಿಯಿಂದ ಅಧಿಕೃತ ಸ್ವೀಕೃತಿ ಪಡೆಯಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಗೆ ಆಹಾರ ಇಲಾಖೆ ವತಿಯಿಂದ ಒಂದು SMS ಬರುತ್ತದೆ. ಬಳಿಕ ನೀವು ಸ್ವೀಕೃತಿ ಪತ್ರ ಪಡೆಯುತ್ತೀರಿ. ನಂತರ ಹೆಸರು ಚೇಂಜ್ ಮಾಡಿರುವ ರೇಷನ್ ಕಾರ್ಡ್ ಸಿಗುತ್ತದೆ. ನೀವು ಆನ್ಲೈನ್ ಮೂಲಕ ಈ ಬಗ್ಗೆ ಮಾಹಿತಿ ಪಡೆಯಲು https://ahara.kar.nic.in/ ಈ ಅಧಿಕೃತ ವೆಬ್ಸೈಟ್ ಚೆಕ್ ಮಾಡಬಹುದು.

ಈ ವೆಬ್ಸೈಟ್ ನಲ್ಲಿ ಇ ಸೇವೆಗಳು ಆಪ್ಶನ್ ಮೇಲೆ ಕ್ಲಿಕ್ ಮಾಡಿ, ಇದರಲ್ಲಿ ತಿದ್ದುಪಡಿ ಅಥವಾ ಹೊಸ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ನಂತರ ಜಿಲ್ಲೆಯನ್ನು ಆಯ್ಕೆ ಮಾಡಿ, ಕೇಳುವ ಮಾಹಿತಿಯನ್ನು ಹಾಕಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.. ನಂತರ ನಿಮ್ಮ ಫಾರ್ಮ್ ಸಬ್ಮಿಟ್ ಮಾಡಿ, ಬಳಿಕ ನಿಮಗೆ ರಿಜಿಸ್ಟರ್ ನಂಬರ್ ಸಿಗುತ್ತದೆ. ಈ ನಂಬರ್ ಇಂದ ನೀವು ಅಪ್ಲಿಕೇಶನ್ ಟ್ರ್ಯಾಕ್ ಮಾಡಬಹುದು. ಪ್ರಸ್ತುತ ರೇಷನ್ ಕಾರ್ಡ್ ಅಪ್ಡೇಟ್ ಮಾಡುವ ದಿನ ಮುಗಿದಿದೆ, ಮತ್ತೊಮ್ಮೆ ಏನಾದರೂ ದಿನಾಂಕವನ್ನು ಮುಂದೂಡುತ್ತಾ ಎಂದು ಕಾದು ನೋಡಬೇಕಿದೆ.

This is the last chance given by the government for the Correction of ration card