ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್ ಗೆ ಬರುವುದಕ್ಕಿಂತ ಮೊದಲೇ ಹೊಸ ನಿಯಮ ತಂದ ಡಿಸಿಎಂ ಡಿಕೆಶಿ
ಸರ್ಕಾರದ ಕಡೆಯಿಂದ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊಸ ಹೊಸ ಅಪ್ಡೇಟ್ ಗಳು ಸಿಗುತ್ತಲೇ ಇದೆ. ಇದೀಗ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ನಮ್ಮ ರಾಜ್ಯದ ಮಹಿಳಾಮಣಿಯರಿಗೆ ತಂದಿರುವ ಯೋಜನೆ ಗೃಹಲಕ್ಷ್ಮಿ (Gruha Lakshmi Yojana). ಈ ಯೋಜನೆಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2000 ಕೊಡುವ ನಿರ್ಧಾರವನ್ನು ಸರ್ಕಾರ ಮಾಡಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿ, ಲಕ್ಷಾಂತರ ಹೆಣ್ಣುಮಕ್ಕಳು ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಸಲ್ಲಿಸಿದ್ದು, ಬ್ಯಾಂಕ್ ಅಕೌಂಟ್ ಗೆ (Bank Account) ₹2000 ಬರೋದು ಯಾವಾಗ ಎಂದು ಕಾದು ಕುಳಿತಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಶುರುವಾಗುವ ಸಾಧ್ಯತೆ ಇದೆ.
ಈ ವೇಳೆ ಸರ್ಕಾರದ ಕಡೆಯಿಂದ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊಸ ಹೊಸ ಅಪ್ಡೇಟ್ ಗಳು (New Updates) ಸಿಗುತ್ತಲೇ ಇದೆ. ಇದೀಗ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೊಸ ಅಪ್ಡೇಟ್ ಒಂದನ್ನು ನೀಡಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಿ, ಫಲ ಸಿಗುವ ಎಲ್ಲಾ ಮಹಿಳೆಯರಿಗೂ ಕೂಡ QR ಕೋಡ್ ಇರುವಂಥ ಒಂದು ಸ್ಮಾರ್ಟ್ ಕಾರ್ಡ್ ಅನ್ನು ಕೊಡಲಾಗುತ್ತದೆ ಎಂದು ಹೇಳಿದ್ದಾರೆ.
5 ಯೋಜನೆಗಳ ಜೊತೆಗೆ ಬಡವರಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ! ಹೊಸ ನಿರ್ಧಾರ
ಕೆಪಿಸಿಸಿ ಆಫೀಸ್ ನಲ್ಲಿ ಕಾಂಗ್ರೆಸ್ ನ ದಿವಂಗತ ಹಿರಿಯ ನಾಯಕರಾದ ರಾಜೀವ್ ಗಾಂಧಿ ಮತ್ತು ದಿವಂಗತ ದೇವರಾಜ್ ಅರಸ್ ಅವರ ಹುಟ್ಟುಹಬ್ಬದ ಆಚರಣೆ ವೇಳೆ ಈ ವಿಚಾರ ತಿಳಿಸಿದ್ದಾರೆ.
ಒಂದು ಪಿಂಕ್ ಕಲರ್ ನ ಸ್ಮಾರ್ಟ್ ಕಾರ್ಡ್ ತೋರಿಸಿದ ಡಿಕೆಶಿ ಅವರು, ಆ ಕಾರ್ಡ್ ನ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿರುವ ಅವರ ಫೋಟೋ ಇರುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಆ ಸ್ಮಾರ್ಟ್ ಕಾರ್ಡ್ ನಲ್ಲಿ ಒಂದು QR ಕೋಡ್ ಕೂಡ ಇರುತ್ತದೆ ಎಂದು ಹೇಳಿದ್ದು, QR ಕೋಡ್ ಸ್ಕ್ಯಾನ್ ಮಾಡಿದರೆ ಮಹಿಳೆಯರಿಗೆ ಅವರಿಗೆ ₹2000 ಹಣ ಬಿಡುಗಡೆ ಆಗೋದು ಯಾವಾಗ ಎಂದು ಮಾಹಿತಿ ನೀಡುತ್ತದೆ ಎಂದು ಸ್ಮಾರ್ಟ್ ಕಾರ್ಡ್ ಬಗ್ಗೆ ತಿಳಿಸಿದ್ದಾರೆ.
ರೇಷನ್ ಕಾರ್ಡ್ ಸಿಗದೆ ಇದ್ದವರಿಗೆ ಸರ್ಕಾರದಿಂದ ಹೊಸ ನಿರ್ಧಾರ! ಕಾರ್ಡ್ ಪಡೆಯೋದು ಈಗ ಇನ್ನಷ್ಟು ಸುಲಭ
ಶಕ್ತಿ ಯೋಜನೆಯಲ್ಲಿ ಸ್ಮಾರ್ಟ್ ಕಾರ್ಡ್ ಬಂದ ನಂತರ ಮಹಿಳೆಯರು ಬಸ್ ಒಳಗೆ ಹೋಗುವಾಗ ಸ್ಮಾರ್ಟ್ ಕಾರ್ಡ್ ಅನ್ನು ಸ್ವೈಪ್ ಮಾಡಬೇಕಾಗುತ್ತದೆ, ಈ ರೀತಿಯಾಗಿ ಸರಿಯಾದ ಮಾಹಿತಿ ಸರ್ಕಾರಕ್ಕೆ ಸಿಗಲಿದ್ದು, ಸರ್ಕಾರ ಸಾರಿಗೆ ಇಲಾಖೆಗೆ ಎಷ್ಟು ಹಣ ಕೊಡಬೇಕು ಎಂದು ನಿರ್ಧರಿಸಿ ಬಿಡುಗಡೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.
ಸರ್ಕಾರಕ್ಕೆ ಸುಳ್ಳು ಮಾಹಿತಿ ಸಿಗುವುದಿಲ್ಲ, ಎಲ್ಲವೂ ಸರಿಯಾಗಿ ಇರುತ್ತದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಬಹುತೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ, ಯುವನಿಧಿ ಯೋಜನೆ ಈ ವರ್ಷಾಂತ್ಯದಲ್ಲಿ ಜಾರಿಗೆ ಬರುವ ಸೂಚನೆ ಇದೆ.
The new rule is before Gruha Lakshmi Yojana money reaches the bank account
Follow us On
Google News |