ರೇಷನ್ ಕಾರ್ಡ್ ಸಿಗದೆ ಇದ್ದವರಿಗೆ ಸರ್ಕಾರದಿಂದ ಹೊಸ ನಿರ್ಧಾರ! ಕಾರ್ಡ್ ಪಡೆಯೋದು ಈಗ ಇನ್ನಷ್ಟು ಸುಲಭ

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಸಾಕಷ್ಟು ಒಳ್ಳೆಯ ಕೆಲಸ ಮತ್ತು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ರಾಜ್ಯದ ಜನತೆಗೆ ಅನುಕೂಲ ಆಗುವ ಹಾಗೆ, 5 ಗ್ಯಾರಂಟಿ ಯೋಜೆನಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಒಂದು ಅನ್ನಭಾಗ್ಯ ಯೋಜನೆ ಆಗಿದೆ.
ಈ ಯೋಜನೆಯ ಮೂಲಕ ಅಂತ್ಯೋದಯ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಸದಸ್ಯರಿಗೆ 10ಕೆಜಿ ಅಕ್ಕಿ ಕೊಡುವ ನಿರ್ಧಾರ ಮಾಡಲಾಗಿತ್ತು. ಆದರೆ 10ಕೆಜಿ ಅಕ್ಕಿ ಕೊಡಲು ಸಾಧ್ಯ ಆಗದ ಕಾರಣ 5ಕೆಜಿ ಅಕ್ಕಿ ಕೊಟ್ಟು, ಇನ್ನು 5ಕೆಜಿ ಅಕ್ಕಿಯ ಬದಲು 170 ರೂಪಾಯಿ ಹಣ ಕೊಡುವ ನಿರ್ಧಾರವನ್ನು ಸರ್ಕಾರ ಮಾಡಿದೆ.
ಇದರ ಬೆನ್ನಲ್ಲೇ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೆ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಮತ್ತು ಸದಸ್ಯರ ಹೆಸರನ್ನು ಸೇರಿಸಲು ಬರುತ್ತಿರುವ ಜನರ ಸಂಖ್ಯೆ ಜಾಸ್ತಿ ಆಗುತ್ತಿದೆ.
ಗೃಹಜ್ಯೋತಿ ಯೋಜನೆಯ ಫ್ರೀ ವಿದ್ಯುತ್ ಪಡೆಯುತ್ತಿರುವವರಿಗೆ ಸರ್ಕಾರದಿಂದ ಹೊಸ ರೂಲ್ಸ್!
ಈ ಪ್ರಕ್ರಿಯೆಗಳು ಆನ್ಲೈನ್ ಮೂಲಕ ನಡೆಯುತ್ತಿದ್ದರು ಕೂಡ, ರೇಷನ್ ಕಾರ್ಡ್ ಗಾಗಿ ಕಚೇರಿಗೆ ಅಲೆದಾಡುವುದು, ಅಲ್ಲಿ ಹೆಚ್ಚಿನ ಜನರಿಂದ ಕ್ಯೂ ಆಗುವುದು ಇದೆಲ್ಲವೂ ಜಾಸ್ತಿ ಆಗಿದೆ..
ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿರುವುದರಿಂದ ರಾಜ್ಯ ಸರ್ಕಾರವು ಜನರಿಗಾಗಿ ಹೊಸ ಕ್ರಮವನ್ನು ಜಾರಿಗೆ ತರಲು ಮುಂದಾಗಿದೆ. ಇದರಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಕೆಲಸಗಳು ಸುಲಭವಾಗಿ ಆಗಲಿದೆ.
ಇನ್ನುಮುಂದೆ ರೇಷನ್ ಕಾರ್ಡ್ ಕೆಲಸಕ್ಕೆ ಸಂಬಂಧಿಸಿದ ಹಾಗೆ ಪ್ರತ್ಯೇಕವಾಗಿ ಒಂದು ಹೊಸ ಆಫೀಸ್ ಶುರು ಮಾಡಬೇಕು ಎನ್ನುವ ಚರ್ಚೆ ನಡೆಯುತ್ತಿದೆ ಎಂದು ಆಹಾರ ಇಲಾಖೆಯ ಸಚಿವರಾದ ಕೆಎಂ ಮುನಿಯಪ್ಪ ಅವರು ತಿಳಿಸಿದ್ದಾರೆ..

ತಾಲ್ಲೂಕು ಮಟ್ಟದಲ್ಲಿ ಎಲ್ಲಾ ಕಡೆ ಪ್ರತ್ಯೇಕ ಕಚೇರಿ ಶುರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಮತ್ತೊಂದು ವಿಚಾರ ಏನು ಎಂದರೆ, ಸರ್ಕಾರದಿಂದ ಜನರಿಗಾಗಿ ಆಹಾರ ವಿತರಣೆ ನಡೆಯುತ್ತದೆ, ಆದರೆ ಹಲವು ಕಡೆ ಸರ್ಕಾರದಿಂದ ಸಿಗುವ ಆಹಾರ ಪದಾರ್ಥಗಳನ್ನು ಸ್ಟೋರ್ ಮಾಡಿ ಇಡುವುದಕ್ಕೆ ಗೋದಾಮು ಇಲ್ಲ..
ಈ ಕಾರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಆಹಾರದ ಸಂಸ್ಕರಣೆ ಮಾಡಲು ತಾಲ್ಲೂಕು ಮಟ್ಟದಲ್ಲಿ ಗೋದಾಮು ನಿರ್ಮಾಣ ಮಾಡಲಾಗುವುದು ಎಂದು ಕೂಡ ತಿಳಿಸಿದ್ದಾರೆ.
ರೇಷನ್ ಕಾರ್ಡ್ ಬಗ್ಗೆ ಸರ್ಕಾರದಿಂದ ಮತ್ತೊಂದು ಮುಖ್ಯ ಘೋಷಣೆ! ಧಿಡೀರ್ ನಿರ್ಧಾರಕ್ಕೆ ಜನತೆಯೇ ಶಾಕ್
ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಹೊಸ ಕಚೇರಿ ಶುರು ಮಾಡಿ, ಅದಕ್ಕಾಗಿ ಅಧಿಕಾರಿಗಳು ಮತ್ತು ಡೇಟಾ ಎಂಟ್ರಿ, ಆಹಾರ ನಿರೀಕ್ಷಕರು, ಸಹಾಯಕ ನಿರ್ದೇಶಕರು ಮತ್ತು ಅಗತ್ಯವಿರುವ ಬೇರೆ ಸಿಬ್ಬಂದಿಗಳ ನೇಮಕ ಕೂಡ ಮಾಡಲಾಗುತ್ತದೆ ಎಂದು ಕೂಡ ತಿಳಿಸಿದ್ದಾರೆ.
ಆಹಾರ ಇಲಾಖೆ ಮತ್ತು ಸರ್ಕಾರದ ಈ ನಿರ್ಧಾರದಿಂದ ನಿರುದ್ಯೋಗಿಗಳಾಗಿರುವ ಸಾಕಷ್ಟು ಜನರಿಗೆ ಕೆಲಸ ಸಿಗುತ್ತದೆ, ಜೊತೆಗೆ ಜನರಿಗೂ ಕೂಡ ರೇಶನ್ ಕಾರ್ಡ್ ಪಡೆಯಲು ಮತ್ತು ಅದಕ್ಕೆ ಸಂಬಂಧಿಸಿದ ಹಾಗೆ ಕೆಲಸಗಳನ್ನು ಮಾಡಿಸಿಕೊಳ್ಳಲು ಸುಲಭ ಆಗುತ್ತದೆ.
A new decision from the government for those who did not get a ration card



