ರಾಜ್ಯ ಸರ್ಕಾರ ಕರ್ನಾಟಕದ ಜನರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದೆ, ಆ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruha Jyothi Scheme) ಕೂಡ ಒಂದು. ಗೃಹಜ್ಯೋತಿ ಯೋಜನೆಯ ಮೂಲಕ ರಾಜ್ಯದಲ್ಲಿರುವ ಎಲ್ಲಾ ಜನರ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ (Free Electricity) ಕೊಡುವುದಾಗಿದೆ.
ಈ ಯೋಜನೆಗೆ ಈಗಾಗಲೇ ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದಾರೆ. ಲಕ್ಷಾಂತರ ಜನರು ಜೀರೋ ಬಿಲ್ ಸೌಲಭ್ಯವನ್ನು (Zero Electric Bill) ಕೂಡ ಈಗಾಗಲೇ ಪಡೆಯುತ್ತಿದ್ದಾರೆ. 51 ಲಕ್ಷಕ್ಕಿಂತ ಹೆಚ್ಚು ಜನ ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ದಾರೆ.
ಇದರಿಂದ ಈ ವೇಳೆ ಜನರು ವಿದ್ಯುತ್ ಅನ್ನು ನಿಯಮಿತವಾಗಿ ಉಪಯೋಗ ಮಾಡಬೇಕಾದ ಅಗತ್ಯವಿದೆ. ಪ್ರಸ್ತುತ ಸಿಕ್ಕಿರುವ ಮಾಹಿತಿ ಪ್ರಕಾರ ಮೊಬೈಲ್ ಫೋನ್ ಗಳಿಗೆ ಪ್ರೀಪೇಯ್ಡ್ ಕರೆನ್ಸಿ ರೀಚಾರ್ಜ್ (Electricity Free Paid Recharge) ಮಾಡುವ ಹಾಗೆ ಎಲೆಕ್ಟ್ರಿಕ್ ಮೀಟರ್ ಗಳಿಗೂ ಕರೆನ್ಸಿ ರೀತಿಯ ಯೋಜನೆ ತರಲು ಸರ್ಕಾರ ಮುಂದಾಗಿದೆ.
ಇದು ಸರ್ಕಾರದ ಕೆಲಸ ಸುಲಭ ಆಗುವ ಹಾಗೆ ಮಾಡುತ್ತದೆ. ಇದು ನಿಜವೇ ಆಗಿದ್ದು, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು, ಜನರಿಗಾಗಿ ಈ ಹೊಸ ಯೋಜನೆ ಜಾರಿಗೆ ತಂದಿದೆ..
ಪ್ರೀಪೇಯ್ಡ್ ಎಲೆಕ್ಟ್ರಿಕ್ ಸ್ಮಾರ್ಟ್ ಮೀಟರ್ ಗಳನ್ನು ಜನರ ಮನೆಗಳಿಗೆ ಅಳವಡಿಸುವ ಹೊಸ ಪ್ಲಾನ್ ಮಾಡಿದೆ ಸರ್ಕಾರ.. ಈ ಸ್ಮಾರ್ಟ್ ಮೀಟರ್ ಇಂದ ಪ್ರತಿ ತಿಂಗಳ ವಿದ್ಯುತ್ ನಿರ್ವಹಣೆ ಇನ್ನು ಸುಲಭ ಆಗುತ್ತದೆ.
ಈ ಸ್ಮಾರ್ಟ್ ಮೀಟರ್ ಅನ್ನು ಜನರ ಸ್ಮಾರ್ಟ್ ಫೋನ್ ಗೆ ಲಿಂಕ್ ಮಾಡಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯ ಎಲೆಕ್ಟ್ರಿಸಿಟಿ ಖಾಲಿ ಆದಾಗ, ನೀವು ತಕ್ಷಣವೇ ರೀಚಾರ್ಜ್ ಮಾಡಿಕೊಳ್ಳಬಹುದು. ವಿದ್ಯುತ್ ಎಷ್ಟು ಖರ್ಚಾಗುತ್ತಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತದೆ.
ರೇಷನ್ ಕಾರ್ಡ್ ಬಗ್ಗೆ ಸರ್ಕಾರದಿಂದ ಮತ್ತೊಂದು ಮುಖ್ಯ ಘೋಷಣೆ! ಧಿಡೀರ್ ನಿರ್ಧಾರಕ್ಕೆ ಜನತೆಯೇ ಶಾಕ್
ಇಲ್ಲಿ ಗ್ರಾಹಕರು ಎಷ್ಟು ಆವರೇಜ್ ವಿದ್ಯುತ್ ನೀಡುತ್ತಾರೋ ಅದಕ್ಕಿಂತ ಜಾಸ್ತಿ ಬಳಸಿದರೆ, ಹೆಚ್ಚು ಶುಲ್ಕ ಪಾವತಿ ಮಾಡಬೇಕಾಗುತ್ತದೆ. 200 ಯೂನಿಟ್ ಉಚಿತ ಎಲೆಕ್ಟ್ರಿಸಿಟಿ ಸಿಗಲಿದ್ದು, ಅದಕ್ಕಿಂತ ಜಾಸ್ತಿ ಬಳಕೆ ಮಾಡಿದರೆ, ಹಣ ಪಾವತಿ ಮಾಡಬೇಕಾಗುತ್ತದೆ.
ಈ ಮೂಲಕ ವಿದ್ಯುತ್ ಅನ್ನು ಅತಿಯಾಗಿ ಬೇಕಾಬಿಟ್ಟಿ ಬಳಸುವುದು ಕೂಡ ಕಡಿಮೆ ಆಗುತ್ತದೆ. ಇದರ ಅರ್ಥ ವಿದ್ಯುತ್ ಉಚಿತವಾಗಿ ಸಿಗುತ್ತದೆ ಎಂದು ಬೇಕಾಬಿಟ್ಟಿ ಖರ್ಚು ಮಾಡದೆ ಹಿತಮಿತವಾಗಿ ಬಳಸಿ ಎನ್ನುವುದಾಗಿದೆ.
New rules from the government for those who are getting free electricity of Gruha Jyothi Scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.