ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳುವುದಕ್ಕೆ ಇಲ್ಲಿದೆ ನೋಡಿ ಅರ್ಜಿ ಹಾಕುವ ವಿಧಾನ; ಬೇಗ ಅಪ್ಲೈ ಮಾಡಿ
ಸಾಮಾನ್ಯವಾಗಿ ಪಟ್ಟಣ ಭಾಗದಲ್ಲಿ ಇರುವಂತಹ ಮದುವೆಯಾಗಿರುವ ಮಹಿಳೆಯರು ಹೊರಗೆ ಹೋಗಿ ಕಚೇರಿಗಳಲ್ಲಿ ಕೆಲಸ ಮಾಡುತ್ತಾರೆ. ಆದರೆ ಹಳ್ಳಿ ಭಾಗದಲ್ಲಿ ಇರುವಂತಹ ಮದುವೆಯಾಗಿರುವಂತಹ ಮಹಿಳೆಯರು ಕಡಿಮೆ ವಿದ್ಯಾಭ್ಯಾಸ ಜೊತೆಗೆ ಕೌಶಲ್ಯ ತರಬೇತಿ ಕೊರತೆಯಿಂದಾಗಿ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇರುವುದು ಹೆಚ್ಚು.
ಇಂತಹ ಮಹಿಳೆಯರು ಕೂಡ ಸ್ವಾವಲಂಬನೆಯ ಜೀವನ ನಡೆಸಲು ಇದೀಗ ಉಚಿತ ಹೊಲಿಗೆ ಯಂತ್ರವನ್ನು (Free Sewing Machine) ವಿತರಣೆ ಮಾಡಲು ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂಥವರ ಖಾತೆಗೆ ಹಣ ಮಿಸ್ ಆಗೋದಿಲ್ಲ!
ಜಿಲ್ಲಾ ಪಂಚಾಯತ್ನಿಂದ ಉಚಿತವಾಗಿ ಸಿಗಲಿದೆ ಈ ಉಪಕರಣಗಳು
ಕೋಲಾರ ಹಾಗೂ ವಿಜಯಪುರ ಜಿಲ್ಲಾ ಪಂಚಾಯತ್ ವತಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಕೆಲಸವನ್ನು ಮಾಡುತ್ತಿರುವಂತಹ ಮಹಿಳೆಯರನ್ನ ಹೊರತುಪಡಿಸಿ ಬೇರೆ ಮಹಿಳೆಯರು ಹೊಲಿಗೆ ಯಂತ್ರ ಸೇರಿಸಿ ಇನ್ನು ಕೆಲವು ಉಪಕರಣಗಳನ್ನು ಕೇವಲ ಒಂದು ಅರ್ಜಿಯನ್ನು ಹಾಕುವ ಮೂಲಕ ಪಡೆದುಕೊಳ್ಳಬಹುದಾಗಿರುವಂತಹ ಯೋಜನೆ ಇದಾಗಿದೆ.
ಆನ್ಲೈನ್ ಮೂಲಕ ಈ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಬನ್ನಿ ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಹಾಗು ಇನ್ನಿತರ ಮಾಹಿತಿಗಳ ಬಗ್ಗೆ ಇಲ್ಲಿದೆ ಡೀಟೇಲ್ಸ್.
ಅರ್ಜಿ ಹಾಕೋದಕ್ಕೆ ಬೇಕಿರುವ ಡಾಕ್ಯುಮೆಂಟ್ಸ್ ಗಳು
* ಹೊಲಿಗೆ ಕೆಲಸವನ್ನು ಮಾಡೋದಕ್ಕೆ ತಿಳಿದಿದೆ ಅನ್ನೋದಕ್ಕಾಗಿ ಒಂದು ಸರ್ಟಿಫಿಕೇಟ್ ಬೇಕಾಗಿರುತ್ತದೆ.
* ರೇಷನ್ ಕಾರ್ಡ್ ಜೊತೆಗೆ ಗುರುತಿನ ಪತ್ರ ಆಗಿರುವಂತಹ ಆಧಾರ್ ಕಾರ್ಡ್ ಬೇಕಾಗಿರುತ್ತದೆ.
* ಇನ್ಕಮ್ ಸರ್ಟಿಫಿಕೇಟ್, ಜಾತಿ ಸರ್ಟಿಫಿಕೇಟ್, ಅಡ್ರೆಸ್ ಪ್ರೂಫ್ ಹಾಗೂ ಫೋಟೋ ಬೇಕಾಗಿರುತ್ತದೆ.
ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಕೇವಲ ಹೊಲಿಗೆ ಯಂತ್ರವನ್ನು ಬಳಸುವಂತಹ ವ್ಯಕ್ತಿಗಳು ಅಥವಾ ಮಹಿಳೆಯರು ಮಾತ್ರವಲ್ಲದೆ, ಕ್ಷೌರಿಕ ಹಾಗೂ ಧೋಬಿ ಕೆಲಸವನ್ನು ಮಾಡುವಂತಹ ವ್ಯಕ್ತಿಗಳು ಕೂಡ ತಮ್ಮ ಉಪಕರಣಗಳನ್ನು ಉಚಿತವಾಗಿ ಈ ಯೋಜನೆಯನ್ನು ಬಳಸಿಕೊಳ್ಳುವ ಮೂಲಕ ಪಡೆದುಕೊಳ್ಳಬಹುದಾಗಿದೆ. ಆದರೆ ಇವರು ಅಥವಾ ಇವರ ಕುಟುಂಬಸ್ಥರು ಯಾವುದೇ ರೀತಿಯಲ್ಲಿ ಸರ್ಕಾರಿ ಕೆಲಸದಲ್ಲಿ ಇರಬಾರದು.
ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವಂತಹ ಕುಟುಂಬದಿಂದ ಇವರು ಇರಬೇಕು ಹಾಗೂ 18 ರಿಂದ 55 ವರ್ಷದ ವಯಸ್ಸಿನ ನಡುವೆ ಇರುವವರು ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಅನ್ನಭಾಗ್ಯ ಯೋಜನೆ ಹಣದ ಸ್ಟೇಟಸ್ ಚೆಕ್ ಮಾಡಲು ಹೊಸ ಡೈರೆಕ್ಟ್ ಲಿಂಕ್ ಇಲ್ಲಿದೆ
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
https://vijayapura.nic.in/ಇಲ್ಲಿ ಹೋಗಿ ವಿಜಯಪುರ ಹಾಗೂ ಕೋಲಾರ ಜಿಲ್ಲಾ ಪಂಚಾಯಿತಿಗೆ ಸಂಬಂಧಪಟ್ಟವರು ಯೋಜನೆಗೆ ಅರ್ಜಿ ಸಲ್ಲಿಸಿ ಬೇಕಾಗಿರುವಂತಹ ಮಾಹಿತಿಗಳನ್ನು ಮತ್ತು ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಿ ಜಿಲ್ಲಾ ಪಂಚಾಯಿತಿಗೆ ಒದಗಿಸಬಹುದಾಗಿದೆ.
ಈ ಮೂಲಕ ಬೇಕಾಗಿರುವಂತಹ ಹೊಲಿಗೆ ಯಂತ್ರ ಸೇರಿದಂತೆ ಬೇರೆ ಬೇರೆ ಉಪಕರಣಗಳನ್ನು ನಿಮ್ಮ ಕೆಲಸಕ್ಕೆ ಸಂಬಂಧಪಟ್ಟಂತಹ ಸರ್ಟಿಫಿಕೇಟ್ ಗಳನ್ನು ನೀಡುವ ಮೂಲಕ ಪಡೆದುಕೊಳ್ಳಬಹುದು.
ಈ ಮೂಲಕ ಗ್ರಾಮೀಣ ಭಾಗದಲ್ಲಿ ಇರುವಂತಹ ವ್ಯಕ್ತಿಗಳಿಗೆ ಅಥವಾ ಮಹಿಳೆಯರಿಗೆ ಕೆಲಸ ಮಾಡುವುದಕ್ಕೆ ಅನುಕೂಲವಾಗುವಂತೆ ಉಪಕರಣಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಗೃಹಲಕ್ಷ್ಮಿ ಸ್ಟೇಟಸ್ ತಿಳಿಯಲು ಹೊಸ ಲಿಂಕ್ ಬಿಡುಗಡೆ! ಹಣ ಬಂತಾ ಚೆಕ್ ಮಾಡಿಕೊಳ್ಳಿ
Apply for Free Sewing Machine, Here is complete details to apply