ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್

ಇದೀಗ ಸರ್ಕಾರ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ. ಇದಕ್ಕೆ ನೀವು ಕೂಡ ಅರ್ಜಿ ಸಲ್ಲಿಸಬೇಕು ಎಂದಿದ್ದರೆ ಈ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ (ration card) ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಬೇಕು, ಆದರೆ ಎಲ್ಲರಿಗೂ ರೇಷನ್ ಕಾರ್ಡ್ ಸಿಗುತ್ತಾ ಅಂದ್ರೆ ಖಂಡಿತವಾಗಿಯೂ ಇಲ್ಲ.

ಸರ್ಕಾರ ಇದಕ್ಕಾಗಿ ಅದರದೇ ಆದ ಮಾನದಂಡಗಳನ್ನು, ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರ ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಬಹುದು.

ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು ಈ ಮೂಲಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಉಚಿತ ಪಡಿತರ ವಸ್ತುಗಳನ್ನು ಪಡೆಯಬಹುದು.

ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಡೀಟೇಲ್ಸ್ - Kannada News

ಇದೀಗ ಸರ್ಕಾರ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ. ಇದಕ್ಕೆ ನೀವು ಕೂಡ ಅರ್ಜಿ ಸಲ್ಲಿಸಬೇಕು ಎಂದಿದ್ದರೆ ಈ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

ಅನ್ನಭಾಗ್ಯ ಯೋಜನೆ ಹಣದ ಸ್ಟೇಟಸ್ ಚೆಕ್ ಮಾಡಲು ಹೊಸ ಡೈರೆಕ್ಟ್ ಲಿಂಕ್ ಇಲ್ಲಿದೆ

ಯಾರಿಗೆ ಸಿಗುತ್ತೆ ಹೊಸ ಪಡಿತರ ಚೀಟಿ! (Who can apply?)

ಪ್ರತ್ಯೇಕ ಮನೆ ಮಾಡಿ ವಾಸಿಸುವ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.

ಈಗಿರುವ ಮನೆಯಿಂದ ದೂರಾಗಿ ಬದುಕುವ ಜೋಡಿ, ಅರ್ಜಿ ಸಲ್ಲಿಸಬಹುದು

ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಬಡತನ ರೇಖೆಗಿಂತ ಕೆಳಗಿರಬೇಕು

ಯಾವುದೇ ಆದಾಯ ತೆರಿಗೆ ಪಾವತಿ ಮಾಡುವವರು ಅಥವಾ ಸರ್ಕಾರಿ ನೌಕರಿಯಲ್ಲಿ ಇರುವವರು ಪಡಿತರ ಚೀಟಿ ಪಡೆದುಕೊಳ್ಳುವಂತಿಲ್ಲ.

ನೀವು ಅರ್ಜಿ ಸಲ್ಲಿಸಿದ ನಂತರ ನೀವು ಎಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರು ಅಥವಾ ಬಿಪಿಎಲ್ ಕಾಡು ಪಡೆದುಕೊಳ್ಳಲು ಅರ್ಹರು ಎಂಬುದನ್ನು ಸರ್ಕಾರ ಪರಿಶೀಲಿಸಿ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡುತ್ತದೆ.

ಇಂತಹ ರೈತರ ಮಕ್ಕಳ ಖಾತೆಗೆ ಜಮಾ ಆಗುತ್ತದೆ 11,000 ರೂಪಾಯಿ, ತಕ್ಷಣ ಅಪ್ಲೈ ಮಾಡಿ

BPL Ration Cardಅರ್ಜಿ ಸಲ್ಲಿಸುವುದು ಹೇಗೆ?

ನೀವು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಮಾತ್ರವಲ್ಲ ಅದರ ಜೊತೆಗೆ ನಿಮ್ಮಲ್ಲಿ ಇರುವ ಪಡಿತರ ಚೀಟಿಯಲ್ಲಿ ಬೇಕಾದ ಅಗತ್ಯ ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬಹುದು.

ಕುಟುಂಬದ ಸದಸ್ಯರ ಹೆಸರು ಸೇರಿಸಿಕೊಳ್ಳುವದಿದ್ದರೆ ಅಥವಾ ಈಗಿರುವ ಹೆಸರನ್ನು ತೆಗೆದುಹಾಕುವದಿದ್ದರೆ ಆನ್ಲೈನ್ ಮೂಲಕ ಈ ಕೆಲಸ ಮಾಡಬಹುದು. ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಗೆ ಭೇಟಿ ನೀಡಿ. ಇಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅಥವಾ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ.

ಗೃಹಲಕ್ಷ್ಮಿ ಸ್ಟೇಟಸ್ ತಿಳಿಯಲು ಹೊಸ ಲಿಂಕ್ ಬಿಡುಗಡೆ! ಹಣ ಬಂತಾ ಚೆಕ್ ಮಾಡಿಕೊಳ್ಳಿ

ಬೇಕಾಗಿರುವ ಅಗತ್ಯ ದಾಖಲೆಗಳು!

ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್.
ಕುಟುಂಬದ ಮುಖ್ಯಸ್ಥನ ಬ್ಯಾಂಕ್ ಖಾತೆಯ ವಿವರ
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ವೋಟರ್ ಐಡಿ
ಪಾಸ್ಪೋರ್ಟ್ ಅಳತೆಯ ಫೋಟೋ
ಡ್ರೈವಿಂಗ್ ಲೈಸೆನ್ಸ್
ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.

ರೇಷನ್ ಕಾರ್ಡ್ ನಲ್ಲಿ ಮಿಸ್ ಆಗಿರೋ ಕುಟುಂಬ ಸದಸ್ಯರ ಹೆಸರು ಸೇರಿಸಿಕೊಳ್ಳಲು ಅವಕಾಶ!

ಇವಿಷ್ಟು ದಾಖಲೆಗಳ ನಕಲು ಪ್ರತಿ ನಿಮ್ಮ ಬಳಿ ಇದ್ದರೆ ಅದನ್ನ ತೆಗೆದುಕೊಂಡು ಹೋಗಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಆದರೆ ಆನ್ಲೈನ್ ಪೋರ್ಟಲ್ ಇಡೀ ದಿನ ಓಪನ್ ಆಗದೆ ಇರುವುದರಿಂದ ನೀವು ಸಾಕಷ್ಟು ಸಮಯ ಕಾಯ ಬೇಕಾಗಬಹುದು.

Allow to apply for new ration card only if these documents are available

Follow us On

FaceBook Google News

Allow to apply for new ration card only if these documents are available