Karnataka NewsBangalore News

ರೇಷನ್ ಕಾರ್ಡ್ ನಲ್ಲಿ ಮಿಸ್ ಆಗಿರೋ ಕುಟುಂಬ ಸದಸ್ಯರ ಹೆಸರು ಸೇರಿಸಿಕೊಳ್ಳಲು ಅವಕಾಶ!

ರೇಷನ್ ಕಾರ್ಡ್ (ration card) ಸಿಕ್ಕಾಪಟ್ಟೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ನೀವು ಕೂಡ ರೇಷನ್ ಕಾರ್ಡ್ ಹೊಂದಿದ್ದರೆ, ಅದರಲ್ಲಿ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರು ಸೇರ್ಪಡೆ ಆಗಿದ್ಯಾ ಎಂಬುದನ್ನು ಚೆಕ್ ಮಾಡಿ.

ಇಲ್ಲವಾದರೆ ಸರ್ಕಾರದಿಂದ ಬಿಡುಗಡೆ ಆಗುವ ಯೋಜನೆಗಳಿಂದ ವಂಚಿತರಾಗುತ್ತೀರಿ. ಉದಾಹರಣೆಗೆ ಅನ್ನಭಾಗ್ಯ ಯೋಜನೆ (AnnaBhagya scheme) ಯ ಅಡಿಯಲ್ಲಿ ರಾಜ್ಯ ಸರ್ಕಾರ ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲು ಹಣವನ್ನು ಬಿಪಿಎಲ್ ಕಾರ್ಡ್ (BPL Ration card) ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರಿಗೂ ನೀಡುತ್ತಿದೆ

BPL Ration Card

ಒಂದು ವೇಳೆ ನಿಮ್ಮ ಹೆಸರು ರೇಷನ್ ಕಾರ್ಡ್ ನಲ್ಲಿ ಇಲ್ಲವಾದರೆ ಈ ಹಣ ನಿಮಗೆ ಸಿಗುವುದಿಲ್ಲ. ಹಾಗಾದ್ರೆ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸುವುದು ಹೇಗೆ ಎನ್ನುವುದನ್ನು ನೋಡೋಣ.

ಏಪ್ರಿಲ್ ತಿಂಗಳ ಅನ್ನಭಾಗ್ಯ ಯೋಜನೆಯ 680 ರೂ. ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದ ಸರ್ಕಾರ

ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ಅರ್ಜಿಗಳ ವಿಲೇವಾರಿ ಜೊತೆಗೆ, ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಅದರಲ್ಲಿ ಅಗತ್ಯ ಇರುವ ತಿದ್ದುಪಡಿ (ration card correction) ಮಾಡಿಕೊಳ್ಳಲು ಕೂಡ ಸರ್ಕಾರ ಅವಕಾಶ ನೀಡಿದೆ

ಅಂದರೆ ಮನೆಯಲ್ಲಿ ಇರುವ ಸದಸ್ಯರ ಹೆಸರು ಸೇರ್ಪಡೆ ಮಾಡುವುದು ಅಥವಾ ಯಾವುದೇ ಸದಸ್ಯ ಕುಟುಂಬದಿಂದ ಬೇರೆ ಆಗಿದ್ದರೆ ಅಥವಾ ಮರಣ ಹೊಂದಿದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆಯುವುದು, ಹೆಸರಿನಲ್ಲಿ ತಿದ್ದುಪಡಿ, ಅಡ್ರೆಸ್ ಬದಲಾವಣೆ ಮೊದಲಾದವುಗಳನ್ನು ಮಾಡಿ ಕೊಳ್ಳಲು ಅವಕಾಶವಿದೆ.

ಗೃಹಜ್ಯೋತಿ ಯೋಜನೆ ಇದ್ರೂ ಸಹ ಕರೆಂಟ್ ಬಿಲ್ ಬಂತಾ? ಕೂಡಲೇ ಈ ರೀತಿ ಮಾಡಿ

BPL Ration Cardಆನ್ಲೈನಲ್ಲಿ ಮಾಡಿಕೊಳ್ಳಿ ರೇಷನ್ ಕಾರ್ಡ್ ತಿದ್ದುಪಡಿ

* ಮೊದಲು ಸರ್ಕಾರದ ಈ ಅಧಿಕೃತ ವೆಬ್ಸೈಟ್ https://nfsa.gov.in/Default.aspx ಮೇಲೆ ಕ್ಲಿಕ್ ಮಾಡಿ

* ರೇಷನ್ ಕಾರ್ಡ್ ವಿವರ ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

* ಈಗ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಮೊದಲಾದವುಗಳನ್ನು ಆಯ್ಕೆ ಮಾಡಿ ಭರ್ತಿ ಮಾಡಬೇಕು.

* ಈಗ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿ ಮತ್ತು ಅದರ ಮಾಲೀಕರ ಹೆಸರು ಆಯ್ಕೆ ಮಾಡಬೇಕು. ಜೊತೆಗೆ ಪಡಿತರ ಚೀಟಿ ಟೈಪ್ ಯಾವುದು ಎಂಬುದನ್ನು ಆಯ್ಕೆ ಮಾಡಬೇಕು.

* ಈಗ ನಿಮ್ಮ ಪಡಿತರ ಸಂಖ್ಯೆಯನ್ನು ನಮೂದಿಸಿ.

* ಒಂದು ಲಿಸ್ಟ್ ತೆಗೆದುಕೊಳ್ಳುತ್ತದೆ. ಅದರಲ್ಲಿ ಪಡಿತರ ಚೀಟಿಯ ಸಂಪೂರ್ಣ ವಿವರ ಇರುತ್ತದೆ. ಒಂದು ವೇಳೆ ಸದಸ್ಯರ ಹೆಸರು ಅದರಲ್ಲಿ ಕಾಣದಿದ್ದರೆ ಆಹಾರ ಇಲಾಖೆಯ ಕಚೇರಿಗೆ ಭೇಟಿ ನೀಡಿ ಹೆಸರು ಸೇರಿಸಿಕೊಳ್ಳಲು ಅವಕಾಶ ಇದೆ.

ಈ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ! ಎಲ್ಲಾ ಕಂತಿನ ಸ್ಟೇಟಸ್ ತಿಳಿಯಲು ಇಲ್ಲಿದೆ ಲಿಂಕ್

ಆನ್ಲೈನ್ ನಲ್ಲಿ ನೀವು ರೇಷನ್ ಕಾರ್ಡ್ ಹೆಸರು ಮಿಸ್ ಆಗಿದ್ದರೆ ಸೇರಿಸಿಕೊಳ್ಳಲು ಅವಕಾಶ ಇಲ್ಲ ಇದಕ್ಕಾಗಿ ಹತ್ತಿರದ ಆಹಾರ ಇಲಾಖೆ ಕಚೇರಿ ಅಥವಾ ಸೇವಾ ಕೇಂದ್ರಕ್ಕೆ ಹೋಗಿ ದಾಖಲೆಗಳನ್ನು ನೀಡಿ ಹೆಸರು ಸೇರಿಸಬಹುದು. ಇದಕ್ಕೆ ಸದಸ್ಯರ ಆಧಾರ್ ಕಾರ್ಡ್ ವಿಳಾಸ ಪುರಾವೆ ಅಗತ್ಯವಿರುತ್ತದೆ.

Opportunity to include the name of family members in the ration card

Our Whatsapp Channel is Live Now 👇

Whatsapp Channel

Related Stories