Karnataka NewsBangalore News

ಗೃಹಜ್ಯೋತಿ ಯೋಜನೆ ಇದ್ರೂ ಸಹ ಕರೆಂಟ್ ಬಿಲ್ ಬಂತಾ? ಕೂಡಲೇ ಈ ರೀತಿ ಮಾಡಿ

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ (guarantee schemes) ಗಳನ್ನು ಘೋಷಿಸಿದ ನಂತರ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಿದೆ ಎನ್ನಬಹುದು.

ಮುಖ್ಯವಾಗಿ ಗೃಹಜ್ಯೋತಿ ಯೋಜನೆ (gruha jyothi scheme) ಯನ್ನು ತೆಗೆದುಕೊಂಡರೆ ಇಂದು ಹೆಚ್ಚುತ್ತಿರುವ ವಿದ್ಯುತ್ ಯೂನಿಟ್ ದರ (electricity unit rate) ದಲ್ಲಿ ಉಚಿತ ವಿದ್ಯುತ್ ವಿತರಣೆ ಮಾಡುತ್ತಿರುವುದು ನಿಜಕ್ಕೂ ದೊಡ್ಡ ವಿಷಯ, ಸಾಕಷ್ಟು ಕುಟುಂಬಗಳು ಇಂದು ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿವೆ

New rule to get free electricity for rent House beneficiaries

ಅಂದರೆ 200 ಯೂನಿಟ್ ಒಳಗೆ ಯಾರು ವಿದ್ಯುತ್ ಬಳಕೆ ಮಾಡುತ್ತಾರೋ ಅಂತವರಿಗೆ ಒಂದು ರೂಪಾಯಿ ಬಿಲ್ ಪಾವತಿ ಮಾಡದೆ ಇರುವ ರೀತಿಯಲ್ಲಿ ಸರ್ಕಾರ ಪ್ರಯೋಜನ ಒದಗಿಸುತ್ತಿದೆ.

ಈ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ! ಎಲ್ಲಾ ಕಂತಿನ ಸ್ಟೇಟಸ್ ತಿಳಿಯಲು ಇಲ್ಲಿದೆ ಲಿಂಕ್

ಆದರೆ ನಿಮಗೆಲ್ಲ ತಿಳಿದಿರುವಂತೆ ಬೇಸಿಗೆಯ ಬಿಸಿ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ, ವಾತಾವರಣದಲ್ಲಿ ತಾಪಮಾನ ಹೆಚ್ಚಳದಿಂದ ಮನೆಯಲ್ಲಿ ಕುಳಿತ ಪ್ರತಿಯೊಬ್ಬರು ಎಸಿ ಅಥವಾ ಫ್ಯಾನ್ ಹಾಗೂ ಕೂಲರ್ ಗಳು ಇಲ್ಲದೆ ಜೀವನ ನಡೆಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇವಲ ನಗರ ಭಾಗದಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲಿಯೂ ಕೂಡ ವಿದ್ಯುತ್ ಬಳಕೆ ಹೆಚ್ಚಾಗಿದೆ. ಇದೇ ರೀತಿ ವಿದ್ಯುತ್ ಅನ್ನು ಅಧಿಕವಾಗಿ ಬಳಕೆ ಮಾಡುತ್ತಿದ್ದರೆ ಮುಂದಿನ ತಿಂಗಳಿನಿಂದ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳಲು ಸಾಧ್ಯವಿಲ್ಲ.

ಹೌದು, ವಿದ್ಯುತ್ ಬಳಕೆ ಜಾಸ್ತಿ ಆಗುತ್ತಿದ್ದಂತೆ 200 ಯೂನಿಟ್ ಗಿಂತಲೂ ಹೆಚ್ಚಿಗೆ ವಿದ್ಯುತ್ ಬಳಕೆ ಆಗಬಹುದು ಇಂತಹ ಸಂದರ್ಭದಲ್ಲಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಮುಂದಿನ ತಿಂಗಳು ಕೂಡ ನೀವು ಉಚಿತ ವಿದ್ಯುತ್ ಬಳಕೆ ಪ್ರಯೋಜನ ಪಡೆದುಕೊಳ್ಳಬೇಕು ಎಂದಾದರೆ ಮೊದಲು ಈ ಕೆಲಸ ಮಾಡಿ.

ವಿದ್ಯುತ್ ಬಳಕೆ ನಿಯಂತ್ರಣ!

ಇದು ಬೇಸಿಗೆ ಆಗಿರುವುದರಿಂದ ಮನೆಯಲ್ಲಿ ಎಸಿ ಫ್ಯಾನ್ ಕೂಲರ್ ಮೊದಲದ ಎಲೆಕ್ಟ್ರಾನಿಕ್ ಡಿವೈಸ್ ಬಳಸುವುದು ಸಹಜ ಆದರೆ ಅನಗತ್ಯ ಸಮಯದಲ್ಲಿ ಯಾಕೆ ಬಳಕೆ ಮಾಡಬೇಕು ಎನ್ನುವುದನ್ನು ಮೊದಲು ಯೋಜನೆ ಮಾಡಿ ಆದಷ್ಟು ನೀವು ಈ ವಸ್ತುಗಳನ್ನು ಬಳಕೆ ಮಾಡದೇ ಇರುವಾಗ ಸ್ವಿಚ್ ಆಫ್ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಆನ್ಲೈನ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಿ ಹೊಸ ರೇಷನ್ ಕಾರ್ಡ್! ಸುಲಭ ವಿಧಾನ

Electricity billಸ್ಟ್ಯಾಂಡ್ ಬೈ ಮೂಡ್ ನಲ್ಲಿ ವಿದ್ಯುತ್ ಬಳಕೆ ಆಗುತ್ತೆ!

ಸಾಮಾನ್ಯವಾಗಿ ನಾವು ಟಿವಿ ನೋಡಿದ ನಂತರ ಅದರ ಡೈರೆಕ್ಟ್ ಸ್ವಿಚ್ ಆನ್ ಆಫ್ ಮಾಡುವ ಬದಲು ರಿಮೋಟ್ ನಲ್ಲಿ ಟಿವಿ ಆಫ್ ಮಾಡುತ್ತೇವೆ ಆಗ ಟಿವಿ ಸ್ಟ್ಯಾಂಡ್ ಬೈ ಮೂಡ್ ನಲ್ಲಿ ಇರುತ್ತದೆ. ಅದೇ ರೀತಿ ಯಾವುದಾದರೂ ಮೊಬೈಲ್ ಅಥವಾ ಲ್ಯಾಪ್ಟಾಪ್ ಚಾರ್ಜ್ ಮಾಡಿದ ನಂತರ ಚಾರ್ಜಿಂಗ್ ಸ್ವಿಚ್ ಆಫ್ ಮಾಡುವುದಿಲ್ಲ ಆಗಲು ಅದು ಸ್ಟ್ಯಾಂಡ್ ಬೈ ಮೂಡನಲ್ಲಿಯೇ ಇರುತ್ತದೆ. ಈ ಸ್ಟ್ಯಾಂಡ್ ಬೈ ಮೂಡ್ ನಲ್ಲಿಯೂ ಕೂಡ ವಿದ್ಯುತ್ ಬಳಕೆ ಆಗುತ್ತದೆ ಹಾಗಾಗಿ ನೀವು ಮಾಡುವಾಗ ನೇರವಾಗಿ ಟಿವಿ ಸ್ವಿಚ್ ಆಫ್ ಮಾಡಿದರೆ ವಿದ್ಯುತ್ ಬಿಲ್ ಉಳಿತಾಯ ಮಾಡಬಹುದು.

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಷ್ಟು ದಿನ ಹಣ ಬಾರದವರಿಗೆ ಹಣ ಜಮಾ

ಎಸಿ ಬಳಿಸುವಾಗ ಇದು ಗಮನದಲ್ಲಿ ಇರಲಿ!

ಸಾಮಾನ್ಯವಾಗಿ ಕಚೇರಿ ಅಥವಾ ಮನೆಯಲ್ಲಿ ಎಸಿ ಬಳಸಿದರೆ ದಿನದ 24 ಗಂಟೆಯೂ ಕೂಡ ಎಸಿ ಸ್ವಿಚ್ ಆನ್ ಆಗಿರುತ್ತದೆ. ಮಧ್ಯದಲ್ಲಿ ಕೆಲವೊಮ್ಮೆ ಮಾಡಲಾಗುತ್ತದೆ ಇಂತಹ ಸಂದರ್ಭದಲ್ಲಿ ನೀವು ಸ್ವಲ್ಪ ಸ್ಮಾರ್ಟ್ ಆಗಿ ಥಿಂಕ್ ಮಾಡಿದರೆ ವಿದ್ಯುತ್ ಉಳಿತಾಯ ಮಾಡಬಹುದು ಹೇಗೆ ಅಂತೀರಾ? ಒಮ್ಮೆ ಸಂಪೂರ್ಣ ಕೂಲ್ ಆದ ನಂತರ ಎಸಿ ಆಫ್ ಮಾಡಿದರೆ ಸಾಕಷ್ಟು ಸಮಯ ರೂಮ್ ತಣ್ಣಗೆ ಇರುತ್ತದೆ. ಇದರಿಂದ ನೀವು ವಿದ್ಯುತ್ ಉಳಿತಾಯ ಮಾಡಬಹುದು.

5 ಸ್ಟಾರ್ ಎಸಿ ಬೆಳಗ್ಗೆ ಮಾಡಿ!

ಇತ್ತೀಚಿನ ದಿನಗಳಲ್ಲಿ ಹೊಸ ಎಸಿ ಡಿವೈಎಸ್ ನೀವು ಖರೀದಿ ಮಾಡಿದರೆ ಅದರಲ್ಲಿ 5 ಸ್ಟಾರ್ ಇದ್ದರೆ ಅದು ಹೆಚ್ಚು ವಿದ್ಯುತ್ ಉಳಿತಾಯ ಮಾಡುತ್ತದೆ ನೀವು ಮೊದಲು 40% ನಷ್ಟು ವಿದ್ಯುತ್ ಖರ್ಚು ಮಾಡುತ್ತಿದ್ದರೆ, ಈಗ ಅದರಲ್ಲಿ ಇನ್ನೂ ಹತ್ತು ಪರ್ಸೆಂಟ್ ಉಳಿತಾಯ ಮಾಡಬಹುದು. ಹಾಗಾಗಿ ಫೈವ್ ಸ್ಟಾರ್ ರೇಟಿಂಗ್ ಇರುವಂತಹ ನೋಡಿ ಖರೀದಿ ಮಾಡಿ.

ಇಂತಹವರು ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಮಾಹಿತಿ

ಈ ರೀತಿಯಾಗಿ ಸಣ್ಣ ಪುಟ್ಟ ವಿಚಾರಗಳ ಬಗ್ಗೆಯೂ ಕೂಡ ನೀವು ಗಮನಹರಿಸಿ ಅನಗತ್ಯ ಸಮಯದಲ್ಲಿ ವಿದ್ಯುತ್ ಬಳಕೆ (Save Electricity) ಮಾಡುವುದನ್ನು ಕಡಿತಗೊಳಿಸಿದರೆ ಖಂಡಿತ ಉಚಿತ ವಿದ್ಯುತ್ ಪ್ರಯೋಜನ ಪಡೆದುಕೊಳ್ಳಬಹುದು

Even if there is Gruha Jyothi Yojana, Got the Electricity bill

Our Whatsapp Channel is Live Now 👇

Whatsapp Channel

Related Stories