ಈ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ! ಎಲ್ಲಾ ಕಂತಿನ ಸ್ಟೇಟಸ್ ತಿಳಿಯಲು ಇಲ್ಲಿದೆ ಲಿಂಕ್
ಗೃಹಲಕ್ಷ್ಮಿ ಯೋಜನೆ ಮೂಲಕ ಸರ್ಕಾರ ಪ್ರತಿ ತಿಂಗಳು 2000 ಗಳನ್ನ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಜಮಾ ಮಾಡುತ್ತಿದೆ
ಕಳೆದ 8 ತಿಂಗಳುಗಳಿಂದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದಲ್ಲಾ ಒಂದು ಗ್ಯಾರಂಟಿ ಯೋಜನೆಗಳನ್ನ ಅನುಷ್ಠಾನಕ್ಕೆ ತರುತ್ತ ಬಂದಿದೆ. ಒಟ್ಟು ಐದು ಗ್ಯಾರಂಟಿ ಯೋಜನೆ (guarantee schemes) ಗಳು ಇಂದು ಸಾರ್ವಜನಿಕರಿಗೆ ಲಭ್ಯವಾಗಿದೆ. ಅವುಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಬಹಳ ಜನಪ್ರಿಯವಾಗಿದೆ.
ಮನೆಯಲ್ಲಿಯೇ ಕುಳಿತ ಗೃಹಿಣಿಯರು ಇಂದು ಪ್ರತಿ ತಿಂಗಳು ಸರ್ಕಾರದ ಕಡೆಯಿಂದ 2 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ, ಅಂದ್ರೆ ಸರ್ಕಾರ ಪ್ರತಿ ತಿಂಗಳು 2000 ಗಳನ್ನ ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ಜಮಾ ಮಾಡುತ್ತಿದೆ.
ಆನ್ಲೈನ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಿ ಹೊಸ ರೇಷನ್ ಕಾರ್ಡ್! ಸುಲಭ ವಿಧಾನ
ಇಲ್ಲಿಯವರೆಗೆ ಕೋಟ್ಯಾಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದು ಸುಮಾರು 90 ಪರ್ಸೆಂಟ್ ನಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿದೆ. ಆದರೆ ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಏಳರಿಂದ ಎಂಟು ಲಕ್ಷ ಮಹಿಳೆಯರ ಖಾತೆಗೆ ಸರಿಯಾಗಿ ಹಣ ವರ್ಗಾವಣೆ (Money Deposit) ಆಗುತ್ತಿಲ್ಲ.
ಹಣ ಬರಬೇಕು ಅಂದ್ರೆ ಏನು ಮಾಡಬೇಕು?
ಹಣ ಬರಬೇಕು ಅಂದ್ರೆ ಈಗಾಗಲೇ ಸರ್ಕಾರ ತಿಳಿಸಿರುವಂತೆ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಅಪ್ಡೇಟ್ (E-KYC update) ಮಾಡಿಸಬೇಕು. ಒಂದು ವೇಳೆ ಇದನ್ನ ಮಾಡಿಸುವುದು ಹೇಗೆ ಎನ್ನುವುದು ನಿಮಗೆ ತಿಳಿಯದೆ ಇದ್ದಲ್ಲಿ ಆಶಾ ಕಾರ್ಯಕರ್ತೆಯರ ಸಹಾಯವನ್ನ ಪಡೆದುಕೊಳ್ಳಿ ಅಥವಾ ಅಂಗನವಾಡಿ ಸಹಾಯಕಿಯರು ನಿಮ್ಮನ್ನು ಕರೆದುಕೊಂಡು ಹೋಗಿ ಸ್ವತಹ ತಾವೇ ನಿಂತು ಕೆವೈಸಿ ಅಪ್ಡೇಟ್ ಮಾಡಿಸಿ ಕೊಡಬೇಕು ಎಂದು ಸರ್ಕಾರ ಈಗಾಗಲೇ ತಿಳಿಸಿದೆ.
ಇದರ ಜೊತೆಗೆ ಆಧಾರ್ ಕಾರ್ಡ್ ಅಪ್ಡೇಟ್ ಕೂಡ ಬಹಳ ಮುಖ್ಯವಾಗಿದ್ದು 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿದ್ರೆ ತಕ್ಷಣ ಹೋಗಿ ಆಧಾರ್ ಕೇಂದ್ರದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ
ಸದ್ಯ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಸಂಪೂರ್ಣ ಉಚಿತವಾಗಿದೆ ಆದರೆ ಇನ್ನೂ ಎರಡು ತಿಂಗಳ ನಂತರ ನೀವು ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಸಿಕೊಳ್ಳುವುದಕ್ಕೆ ಸಾವಿರ ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಷ್ಟು ದಿನ ಹಣ ಬಾರದವರಿಗೆ ಹಣ ಜಮಾ
ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳುವುದು ಹೇಗೆ?
ಸಾಮಾನ್ಯವಾಗಿ ನಮ್ಮ ಖಾತೆಗೆ ಹಣ ಜಮಾ ಆದರೆ ಬ್ಯಾಂಕ್ನಿಂದ ಮೊಬೈಲ್ ಗೆ ಒಂದು ನೋಟಿಫಿಕೇಶನ್ ಬರುತ್ತದೆ. ಒಂದು ವೇಳೆ ನಿಮಗೆ ಈ ತಿಂಗಳಿನ ನೋಟಿಫಿಕೇಶನ್ ಬಂದಿಲ್ಲ ಎಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ಎಂದು ಅರ್ಥವಲ್ಲ ಅದನ್ನ ನೀವು ತಿಳಿದುಕೊಳ್ಳಲು ಬ್ಯಾಂಕಿಗೆ ಹೋಗಿ ನಿಮ್ಮ ಬ್ಯಾಂಕಿನ ಪಾಸ್ ಬುಕ್ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಅಥವಾ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ (Download) ಮಾಡಿಕೊಳ್ಳುವುದರ ಮೂಲಕ ಗೃಹಲಕ್ಷ್ಮಿ ಸ್ಟೇಟಸ್ ತಿಳಿದುಕೊಳ್ಳಬಹುದು.
ಇಂತಹವರು ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಮಾಹಿತಿ
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಡಿಬಿಟಿ ಕರ್ನಾಟಕ ಎನ್ನುವ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ.
* ಇದಾದ ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ Login ಮಾಡಿ.
* ಮೂರನೆಯ ಹಂತದಲ್ಲಿ ನಿಮಗೆ ನಾಲ್ಕು ಅಂಕೆಯ mPIN ಸೆಟ್ ಮಾಡಲು ಹೇಳಲಾಗುತ್ತದೆ. ನಾಲ್ಕು ಸಂಖ್ಯೆಗಳನ್ನು ಹಾಕಿ ಪಾಸ್ವರ್ಡ್ ಸೆಟ್ ಮಾಡಿ.
* ಈಗ ನೀವು ಅಪ್ಲಿಕೇಶನ್ ಗೆ ಪ್ರವೇಶಿಸುತ್ತೀರಿ. ಅಲ್ಲಿ ನಿಮಗೆ ನಾಲ್ಕು ಆಯ್ಕೆಗಳು ಕಾಣಿಸುತ್ತದೆ.
* ಅವುಗಳಲ್ಲಿ ಪಾವತಿ ಸ್ಥಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಗೃಹಲಕ್ಷ್ಮಿ ಯೋಜನೆ ಮಾತ್ರವಲ್ಲದೆ ಪಿಂಚಣಿ ಯೋಜನೆಗಳು ಅನ್ನಭಾಗ್ಯ ಯೋಜನೆ, ಮೊದಲಾದ ಯೋಜನೆಗಳ ಡಿಬಿಟಿ ಸ್ಥಿತಿ. ತಿಳಿದುಕೊಳ್ಳಲು ಇಲ್ಲಿ ಸಾಧ್ಯವಿದೆ. ಇಲ್ಲಿ ಗೃಹಲಕ್ಷ್ಮಿ ಎಂದು ಸೆಲೆಕ್ಟ್ ಮಾಡಿದರೆ ನಿಮಗೆ ಯಾವ ಕಂತಿನಲ್ಲಿ ಹಣ ಜಮಾ ಆಗಿದೆ ಯಾವ ಬ್ಯಾಂಕ್ ಗೆ ಹಣ ಜಮಾ ಆಗಿದೆ ಪ್ರತಿಯೊಂದು ವಿವರಗಳು ಸಿಗುತ್ತವೆ.
ಕೃಷಿ ಭೂಮಿ ಇಲ್ಲದ ರೈತರಿಗೆ ಭರ್ಜರಿ ಸುದ್ದಿ! ಅಕ್ರಮ ಸಕ್ರಮ ಯೋಜನೆ ಅಡಿ ಭೂಮಿ ಹಂಚಿಕೆ
Gruha Lakshmi money released, Here is the link to know the status of all months