ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ! ಇಷ್ಟು ದಿನ ಹಣ ಬಾರದವರಿಗೆ ಹಣ ಜಮಾ
ಇದೀಗ ಇಲ್ಲಿಯವರೆಗೆ ಯಾರ ಖಾತೆಗೆ (Bank Account) ಹಣ ಜಮಾ ಆಗಿಲ್ಲವೋ ಅವರಿಗೆ ಹಣ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ
ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಅಡಿಯಲ್ಲಿ ಕೋಟ್ಯಂತರ ಮಹಿಳೆಯರು ಪ್ರಯೋಜನ ಪಡೆದುಕೊಳ್ಳುತ್ತಿದ್ದು ಈ ಯೋಜನೆಯ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉಚಿತವಾಗಿ 2000 ಗೃಹಿಣಿಯರಿಗೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಸುಲಭವಾಗಿ ತಮ್ಮ ಮನೆ ಖರ್ಚನ್ನು ಅಥವಾ ವೈಯಕ್ತಿಕ ಖರ್ಚನ್ನು ನಿಭಾಯಿಸಲು ಮಹಿಳೆಯರಿಗೆ ಸಾಧ್ಯವಾಗುತ್ತಿದೆ.
ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗಾಗಿ ಕೋಟ್ಯಂತರ ರೂಪಾಯಿಗಳನ್ನು ಮೀಸಲಿಟ್ಟಿದೆ. 2024 – 25ನೇ ಸಾಲಿನಲ್ಲಿ 28 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದು ರಾಜ್ಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಇದೀಗ ಇಲ್ಲಿಯವರೆಗೆ ಯಾರ ಖಾತೆಗೆ (Bank Account) ಹಣ ಜಮಾ ಆಗಿಲ್ಲವೋ ಅವರಿಗೆ ಹಣ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಹಾಗೂ ಪೆಂಡಿಂಗ್ ಇರುವ ಹಣ ಕೆಲವು ಮಹಿಳೆಯರ ಖಾತೆಗೆ ಜಮಾ ಆಗಿದೆ.
ಇಂತಹವರು ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಮಾಹಿತಿ
ಪೆಂಡಿಂಗ್ ಇರುವ ಹಣ ಜಮಾ
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಬಾರದೆ ಇರುವುದಕ್ಕೆ ಬೇಸರಗೊಂಡಿದ್ದರು. ಆದರೆ ಕೆಲವು ಪ್ರಮುಖ ಬದಲಾವಣೆಗಳನ್ನು ನಿಮ್ಮ ಖಾತೆಯಲ್ಲಿ ತರುವುದರ ಮೂಲಕ ಪೆಂಡಿಂಗ್ ಇರುವ ಹಣವನ್ನು ಪಡೆದುಕೊಳ್ಳಬಹುದು ಇದಕ್ಕೆ ಸಾಕ್ಷಿಯಾಗಿ ಹುಬ್ಬಳ್ಳಿಯ ಮಹಿಳೆ ಒಬ್ಬಳ ಖಾತೆಗೆ ಜನವರಿ ತಿಂಗಳಿನಲ್ಲಿ, ಮೂರು ಕಂತಿನ ಹಣ ಎರಡೇ ದಿನಗಳಲ್ಲಿ ಜಮಾ ಆಗಿತ್ತು. ಹಾಗೆ ನಿಮ್ಮ ಖಾತೆಗೂ ಪೆಂಡಿಂಗ್ ಇರುವ ಹಣ ಬರಬೇಕು ಅಂದ್ರೆ ತಕ್ಷಣ ಈ ಕೆಲಸ ಮಾಡಿ.
ಅಂಚೆ ಕಚೇರಿಯಲ್ಲಿ ಖಾತೆ ತೆರೆಯಿರಿ
ಮೊದಲನೆಯದಾಗಿ ನಿಮ್ಮ ಬ್ಯಾಂಕ್ ನಲ್ಲಿ ಇರುವ ಖಾತೆ ಬಹಳ ಹಳೆಯದಾಗಿರಬಹುದು. ಮತ್ತು ಆಕ್ಟಿವ್ ಇಲ್ಲದೆ ಇರಬಹುದು. ಅಂತಹ ಸಂದರ್ಭದಲ್ಲಿ ನೀವು ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ನಿಮ್ಮ ಒಂದು ಹೊಸ ಖಾತೆಯನ್ನು ಓಪನ್ ಮಾಡಿ ಇದರಿಂದ ಸರ್ಕಾರ ನೇರವಾಗಿ ಪೋಸ್ಟ್ ಆಫೀಸ್ ಖಾತೆಗೆ ಹಣವನ್ನು ಜಮಾ ಮಾಡುತ್ತದೆ
ಕೃಷಿ ಭೂಮಿ ಇಲ್ಲದ ರೈತರಿಗೆ ಭರ್ಜರಿ ಸುದ್ದಿ! ಅಕ್ರಮ ಸಕ್ರಮ ಯೋಜನೆ ಅಡಿ ಭೂಮಿ ಹಂಚಿಕೆ
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ
ನೀವು ಬಳಸುತ್ತಿರುವ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಆಗಿದ್ದರೆ ನೀವು ಆಧಾರ್ ಕಾರ್ಡ್ ಲಿಂಕ್ ರೇಷನ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಉಳಿದ ಅಪ್ಡೇಟ್ ಮಾಡಿಸುವುದಕ್ಕಾಗಿ ನೀವು ಮೊದಲು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾಗುತ್ತದೆ. ಜೂನ್ 14, 2024 ರವರೆಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಅವಕಾಶ ಇದೆ. ಅದರ ನಂತರದ ದಿನಗಳಲ್ಲಿ ನೀವು ಅಪ್ಡೇಟ್ ಮಾಡಿಸಲು ಹಣವನ್ನು ಪೇ ಮಾಡಬೇಕಾಗುತ್ತೆ.
ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ತಪ್ಪದೇ ಈ ಕೆಲಸ ಮಾಡಿ! ಹೊಸ ಅಪ್ಡೇಟ್
ಎಂಟನೇ ಕಂತಿನ ಹಣವು ಜಮಾ ಆಗಿದೆ ಖಾತೆ ಚೆಕ್ ಮಾಡಿ
ರಾಜ್ಯ ಸರ್ಕಾರ ಈಗಾಗಲೇ ಎಂಟನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು ಸಾಕಷ್ಟು ಮಹಿಳೆಯರ ಖಾತೆಗೆ 16,000 ರೂಪಾಯಿಗಳು ಜಮಾ ಆಗಿವೆ. ಈಗಾಗಲೇ ಎಂಟನೇ ಕಂತಿನ ಹಣವನ್ನು ಕೂಡ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಈ ತಿಂಗಳ ಕೊನೆಯ ವಾರದ ಒಳಗೆ ಈ ಹಣ ಪ್ರತಿಯೊಬ್ಬರ ಖಾತೆಗೂ ತಲುಪಲಿದೆ. ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ವೋ ಎಂದು ಚೆಕ್ ಮಾಡಿಕೊಳ್ಳಲು ನಿಮ್ಮ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಅಪ್ಡೇಟ್ ಮಾಡಿಸಿ ಅಥವಾ DBT Karnataka ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ DBT ಸ್ಟೇಟಸ್ ತಿಳಿದುಕೊಳ್ಳಿ.
ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಖಡಕ್ ನಿರ್ಧಾರ
Gruha Lakshmi Yojana Pending Money Released, Money deposited for all