ಇಂತಹವರು ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೇರೆ ಪ್ರಮುಖದ ಡಾಕ್ಯುಮೆಂಟ್ಗಳ ರೀತಿಯಲ್ಲಿ ರೇಷನ್ ಕಾರ್ಡ್ (Ration Card) ಕೂಡ ಅತ್ಯಂತ ಪ್ರಮುಖವಾಗಿದೆ. ಅದರಲ್ಲಿ ವಿಶೇಷವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಕೆಲವೊಂದು ಪ್ರಮುಖ ಯೋಜನೆಗಳ ಕಾರಣದಿಂದಾಗಿ ರೇಷನ್ ಕಾರ್ಡ್ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಗೃಹಲಕ್ಷ್ಮಿ (Gruha Lakshmi Scheme) ಹಾಗೂ ಅನ್ನಭಾಗ್ಯ ಯೋಜನೆಗೆ (Annabhagya Yojana) ನಿಮ್ಮ ರೇಷನ್ ಕಾರ್ಡ್ (Ration Card) ಎನ್ನುವುದು ಪ್ರಮುಖವಾಗಿ ಬೇಕಾಗಿರುತ್ತದೆ. ಈ ಗ್ಯಾರಂಟಿ ಯೋಜನೆಗಳನ್ನು ಪಡೆದುಕೊಳ್ಳಬೇಕು ಅಂದರೆ ರೇಷನ್ ಕಾರ್ಡ್ ಬೇಕಾಗಿರುತ್ತದೆ.
ಕೃಷಿ ಭೂಮಿ ಇಲ್ಲದ ರೈತರಿಗೆ ಭರ್ಜರಿ ಸುದ್ದಿ! ಅಕ್ರಮ ಸಕ್ರಮ ಯೋಜನೆ ಅಡಿ ಭೂಮಿ ಹಂಚಿಕೆ
ರೇಷನ್ ಕಾರ್ಡ್ ಬಗ್ಗೆ ಸರ್ಕಾರದ ನಿಲುವು
ಈಗಾಗಲೇ ಸಲ್ಲಿಕೆ ಆಗಿರುವಂತಹ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಅವುಗಳನ್ನು ವಿತರಣೆ ಮಾಡುವಂತಹ ಕೆಲಸವನ್ನು ಏಪ್ರಿಲ್ 1ರಿಂದ ಮಾಡಲಾಗುತ್ತದೆ ಎನ್ನಲಾಗಿತ್ತು. ಏಪ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿದೆ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವಂತಹ ಜನರಿಗೂ ಕೂಡ ಏಪ್ರಿಲ್ ಒಂದರಿಂದ ಅವಕಾಶ ಮಾಡಿಕೊಳ್ಳಲಾಗಿದೆ ಎನ್ನುವಂತಹ ಮಾಹಿತಿಯನ್ನು ಸರ್ಕಾರ ಹೇಳಿಕೊಂಡಿದೆ.
ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಈ ಅರ್ಹತೆಗಳು ಇರಬೇಕು
* ಕರ್ನಾಟಕದ ಕಾಯಂ ನಿವಾಸಿಗಳಾಗಿರಬೇಕು ಹಾಗೂ ಬಡತನದ ರೇಖೆಗಿಂತ ಕೆಳಗಿರುವವರಿಗೆ ಅಂದರೆ ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಇರುವವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ.
* ಹೊಸದಾಗಿ ಮದುವೆಯಾಗಿ ಹೊಸ ಮನೆಯಲ್ಲಿ ವಾಸವಾಗಿರುವಂತಹ ನವ ಜೋಡಿಗಳಿಗೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವ ಅರ್ಹತೆ ಇದೆ.
* ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರಿಗೆ ಮತ್ತೆ ರೇಷನ್ ಕಾರ್ಡ್ ಹೊಂದುವಂತಹ ಅವಕಾಶ ಇಲ್ಲ.
* ಅರ್ಹತೆಯ ಮಾನದಂಡವನ್ನು ಮೀರಿ ಇರುವಂತಹ ಜನರಿಗೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಹತೆ ಇರುವುದಿಲ್ಲ ಹಾಗೂ ಸರ್ಕಾರಿ ನೌಕರರು ಕೂಡ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಹಾಕುವ ಹಾಗಿಲ್ಲ.
ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ತಪ್ಪದೇ ಈ ಕೆಲಸ ಮಾಡಿ! ಹೊಸ ಅಪ್ಡೇಟ್
ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು
* ಇನ್ಕಮ್ ಸರ್ಟಿಫಿಕೇಟ್ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್.
* ಬಯೋಮೆಟ್ರಿಕ್ ಡಾಕ್ಯುಮೆಂಟ್ಸ್ ಹಾಗೂ ಅಡ್ರೆಸ್ ಪ್ರೂಫ್.
* ನಿಮ್ಮ ಜಾತಿ ಪ್ರಮಾಣ ಪತ್ರ ಸೇರಿದಂತೆ ಕೆಲವೊಂದು ಪ್ರಮುಖ ದಾಖಲೆ ಪತ್ರಗಳನ್ನು ಹಿಡಿದುಕೊಂಡು ನೀವು ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಖಡಕ್ ನಿರ್ಧಾರ
ರಾಜ್ಯ ಸರ್ಕಾರ ತಿಳಿಸಿರುವ ಹಾಗೆ ಏಪ್ರಿಲ್ ಒಂದರಿಂದ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಕೂಡ ಅರ್ಜಿ ಸಲ್ಲಿಸುವಂತಹ ಅವಕಾಶವನ್ನು ನೀಡಿದೆ. ಹೀಗಾಗಿ ಅಗತ್ಯ ದಾಖಲೆಗಳನ್ನು ನಿಮ್ಮ ಜೊತೆ ಹಿಡಿದುಕೊಂಡು ಸೇವಾ ಕೇಂದ್ರಗಳಿಗೆ ಹೋಗುವ ಮೂಲಕ ಅಧಿಕೃತವಾಗಿ ಅರ್ಜಿ ಸಲ್ಲಿಸಿ ನಿಮ್ಮ ರೇಷನ್ ಕಾರ್ಡ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ರೇಷನ್ ಕಾರ್ಡ್ ಪಡೆದುಕೊಳ್ಳಬೇಕು ಎನ್ನುವಂತಹ ಸಾಕಷ್ಟು ಜನರ ಸಮಸ್ಯೆ ಈ ರೀತಿ ಇನ್ಮುಂದೆ ಪರಿಹಾರಗೊಳ್ಳಲಿದೆ.
ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ! ನಿಮ್ಮ ಖಾತೆಗೂ ಜಮಾ ಆಗಿದೆ ನೋಡಿಕೊಳ್ಳಿ
Only such people are allowed to apply for a new ration card