ಕೃಷಿ ಭೂಮಿ ಇಲ್ಲದ ರೈತರಿಗೆ ಭರ್ಜರಿ ಸುದ್ದಿ! ಅಕ್ರಮ ಸಕ್ರಮ ಯೋಜನೆ ಅಡಿ ಭೂಮಿ ಹಂಚಿಕೆ
ರಾಜ್ಯದಲ್ಲಿ ಇಲ್ಲಿಯವರೆಗೆ ನಿರ್ಗತಿಕರು ಅಥವಾ ಬಡವರು ಸರ್ಕಾರಿ ಜಮೀನಿನಲ್ಲಿ (Government Land), ಮನೆ ನಿರ್ಮಾಣ ಮಾಡಿಕೊಂಡು ಅಥವಾ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಇಂಥವರು ಸಾಕಷ್ಟು ವರ್ಷಗಳಿಂದ ಒಂದೇ ಕಡೆ ನೆಲೆಯೂರಿದ್ದು, ಅವರಿಗೆ ತಮ್ಮ ಜಾಗದ ಹಕ್ಕು ಪತ್ರ ಸಿಕ್ಕಿಲ್ಲ.
ಕಂದಾಯ ಇಲಾಖೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಸರ್ಕಾರದ ಭೂಮಿ ಒತ್ತುವರಿ ಮಾಡಿಕೊಂಡಿರುವ ಕೃಷಿ (Agriculture) ಕಾರ್ಮಿಕರಿಗೆ ಅವರು ಇರುವ ಜಾಗವನ್ನು ಅವರ ಹೆಸರಿಗೆ ಪಹಣಿ ಮಾಡಿಕೊಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ತಪ್ಪದೇ ಈ ಕೆಲಸ ಮಾಡಿ! ಹೊಸ ಅಪ್ಡೇಟ್
ಕಂದಾಯ ಸಚಿವರಿಂದ ಸಿಕ್ತು ಮಹತ್ವದ ಸೂಚನೆ!
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಂದಾಯ ಇಲಾಖೆಯಲ್ಲಿ ಸಾಕಷ್ಟು ನಿಯಮಗಳ ಬದಲಾವಣೆಗಳನ್ನು ಮಾಡಲಾಗಿದೆ. ಇದೀಗ ಅಕ್ರಮ ಸಕ್ರಮದ ಬಗ್ಗೆ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ಒದಗಿಸಿದ್ದಾರೆ.
ಅವರು ತಿಳಿಸಿರುವ ಮಾಹಿತಿಯ ಪ್ರಕಾರ, ಅಕ್ರಮ ಸಕ್ರಮ ಕಲಂ 50, 53, 57ರ ಅಡಿಯಲ್ಲಿ ಸಲ್ಲಿಕೆ ಆಗಿರುವ ಎಲ್ಲಾ ಅರ್ಜಿಗಳನ್ನು ತಕ್ಷಣ ಪರಿಶೀಲಿಸಿ ವಿಲೇವಾರಿ ಮಾಡಬೇಕು. ನಂತರ ಅರ್ಹ ಫಲಾನುಭವಿಗಳಿಗೆ ಪಹಣಿ ಪತ್ರ ಅಥವಾ ಹಕ್ಕುಪತ್ರ ನೀಡಬೇಕು.
ಈ ಸಮಯದಲ್ಲಿ ಯಾವುದೇ ಜಾತಿ ಧರ್ಮ ಹಾಗೂ ಮತ್ತಿತರ ವಿಷಯಗಳನ್ನು ಅಡ್ಡ ತರದೆ ಪ್ರಮಾಣಿಕವಾಗಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಪ್ರತಿ ಜಿಲ್ಲೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ! ನಿಮ್ಮ ಖಾತೆಗೂ ಜಮಾ ಆಗಿದೆ ನೋಡಿಕೊಳ್ಳಿ
ಇ – ಹಕ್ಕು ಪತ್ರ ವಿತರಣೆ!
ಇದೀಗ ಭೂ ಸಾಗುವಳಿ ಪ್ರಮಾಣ ಪತ್ರ ಪಡೆದುಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಅದರ ಬದಲು ಸರ್ಕಾರದ ಸಾಫ್ಟ್ವೇರ್ ಮೂಲಕ ಆನ್ಲೈನ್ನಲ್ಲಿಯೇ ಬಗೆರ್ ಹುಕುಂ ಯೋಜನೆಯ ಅಡಿಯಲ್ಲಿ ಇ ಸಾಗುವಳಿ ಪತ್ರ ವಿತರಣೆ ಮಾಡಲಾಗುವುದು.
ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಖಡಕ್ ನಿರ್ಧಾರ
ಹಾಗೂ ಇನ್ನೂ ಕೇವಲ ಆರು ತಿಂಗಳ ಒಳಗೆ ಈ ವಿಲೇವಾರಿ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಇಷ್ಟು ವರ್ಷಗಳಿಂದ ಅರ್ಜಿ ಸಲ್ಲಿಸಿ ಸ್ವಂತ ಜಮೀನು (Own Property) ಮಾಡಿಕೊಳ್ಳಲು ಸಾಧ್ಯವಾಗದೇ ಇರುವವರು ಈಗ ಹಕ್ಕುಪತ್ರ ಪಡೆದುಕೊಳ್ಳಲು ಸಾಧ್ಯವಿದೆ.
Great news for farmers who do not have agricultural land
Our Whatsapp Channel is Live Now 👇