ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ತಪ್ಪದೇ ಈ ಕೆಲಸ ಮಾಡಿ! ಹೊಸ ಅಪ್ಡೇಟ್
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಎರಡು ಸಾವಿರ ರೂಪಾಯಿಗಳು ತಾವು ಅರ್ಜಿ ಹಾಕಿದರೂ ಕೂಡ ಖಾತೆಗೆ (Bank Account) ಬರುತ್ತಿಲ್ಲ ಅಂತ ಸಾಕಷ್ಟು ಮಹಿಳೆಯರು ನಿರಾಶೆಗೆ ಒಳಗಾಗಿದ್ದಾರೆ.
ಆದರೆ ನೀವು ಹೀಗೆ ಯೋಚನೆ ಮಾಡುತ್ತಿದ್ದರೆ ಆಗಲ್ಲ ಅದರ ಬದಲು ನಾವು ಈಗ ಹೇಳುವ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳಿ ಇದರಿಂದ ತಪ್ಪದೆ ಮುಂದಿನ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಸರ್ಕಾರ ಮಹಿಳೆಯರಿಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ ಅದರ ಆಧಾರದ ಮೇಲೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಖಾತೆಗೆ ಮುಂದಿನ ತಿಂಗಳಿನಿಂದ ಹಣ ನೇರವಾಗಿ ವರ್ಗಾವಣೆ (Money Deposit) ಆಗಲಿದೆ.
ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಖಡಕ್ ನಿರ್ಧಾರ
ಬ್ಯಾಂಕ್ ಖಾತೆಯನ್ನು ಪರಿಶೀಲಿಸುವ ಕೆಲಸ ಮಾಡಿ!
ನಿಮಗೆ ಈಗಾಗಲೇ ತಿಳಿದಿರುವಂತೆ ಈಕೆ ವೈ ಸಿ ಅಪ್ಡೇಟ್ (E-KYC update) ಆಗುವುದು, ಎನ್ ಪಿ ಸಿ ಐ ಮ್ಯಾಪಿಂಗ್ (NPCI mapping) ಆಗುವುದು, ಆಧಾರ್ ಸೀಡಿಂಗ್ (Aadhaar seeding) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಒಂದು ವೇಳೆ ನಿಮಗೆ ಈಗಾಗಲೇ ಹಣ ಬರುತ್ತಿದ್ದರೆ ಅಥವಾ ಮೊದಲ ಒಂದೆರಡು ಕಂತಿನ ಹಣ ಬಂದಿದ್ದರೆ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಇಲ್ಲವಾದರೆ ಬ್ಯಾಂಕ್ ಗೆ ಹೋಗಿ ಬ್ಯಾಂಕ್ ಸಿಬ್ಬಂದಿಗಳ ಬಳಿ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎನ್ನುವ ವಿಚಾರವನ್ನು ತಿಳಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಅಪ್ಡೇಟ್ ಮಾಡಿಸಿ.
ಇನ್ನು ರೇಶನ್ ಕಾರ್ಡ್ ಗೂ ಕೂಡ ಆಧಾರ್ ಕಾರ್ಡ್ ಲಿಂಕ್ (ration card Aadhar card link) ಆಗಿರಬೇಕು. ಹಾಗೆ ಒಂದು ವೇಳೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುದಿದ್ದರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿರುವುದು ಕೂಡ ಅಷ್ಟೇ ಮುಖ್ಯ. 10 ವರ್ಷದ ಹಳೆಯ ಆಧಾರ್ ಕಾರ್ಡ್ ನಿಮ್ಮ ಬಳಿ ಇದ್ದರೆ ತಕ್ಷಣ ಅದನ್ನು ಅಪ್ಡೇಟ್ ಮಾಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಗೆ ಸರ್ಕಾರದಿಂದ ಹಣ ಜಮಾ ಆಗುತ್ತದೆ.
ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ! ನಿಮ್ಮ ಖಾತೆಗೂ ಜಮಾ ಆಗಿದೆ ನೋಡಿಕೊಳ್ಳಿ
ಇವರನ್ನ ಭೇಟಿ ಆಗಿದ್ದೀರಾ?
ಹೌದು, ನಿಮ್ಮ ಖಾತೆಗೆ ಅರ್ಜಿ ಸಲ್ಲಿಸಿದ ನಂತರವೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಾದರೆ ತಕ್ಷಣ ಹತ್ತಿರದ ಸಿಡಿಪಿಓ ಕಚೇರಿಗೆ (visit CDPO office) ಭೇಟಿ ನೀಡಿ ಅಲ್ಲಿರುವ ಅಧಿಕಾರಿಗಳಿಗೆ ನೀವು ಅರ್ಜಿ ಸಲ್ಲಿಸಿದ ದೃಢೀಕರಣ ಪತ್ರ ಮತ್ತು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ವಿವರಗಳನ್ನು ತೋರಿಸಿ ಯಾವ ಸಮಸ್ಯೆ ಇದೆ ಮತ್ತು ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳಿ.
2 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಬಿಗ್ ಅಪ್ಡೇಟ್! ಹೊಸ ಘೋಷಣೆ
ಇದರ ಹೊರತಾಗಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರು ನಿಮ್ಮ ಮನೆ ಬಾಗಿಲಿಗೆ ಬಂದು ಸಮಸ್ಯೆಗಳನ್ನು ಈಗಾಗಲೇ ಕೇಳಿರಬಹುದು ಅಥವಾ ಇನ್ನೂ ಮುಂದೆ ನಿಮ್ಮ ಮನೆಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಕೂಡ ಬರಬಹುದು..
ಅಂತಹ ಸಂದರ್ಭದಲ್ಲಿ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಅದರ ವಿವರಣೆಯನ್ನು ನೀಡಿ. ಅವರ ಮಾರ್ಗದರ್ಶನದಲ್ಲಿ ನೀವು ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವಂತೆ ಮಾಡಿಕೊಳ್ಳಬಹುದು..
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಇಂದು ಬಹುತೇಕ ಯಶಸ್ವಿಯಾಗಿದೆ. ಸುಮಾರು 1.17 ಕೋಟಿಗೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಗೃಹಲಕ್ಷ್ಮಿ ಹಣ ಬಾರದೆ ಇರುವವರಿಗೆ ಸಿಹಿ ಸುದ್ದಿ, ಎಲ್ಲರಿಗೂ ತಪ್ಪದೇ ಹಣ ಜಮಾ! ಇಲ್ಲಿದೆ ಮಾಹಿತಿ
2024 25 ನೇ ಸಾಲಿನಲ್ಲಿ 28 ಸಾವಿರ ಕೋಟಿಗೂ ಅಧಿಕ ಹಣವನ್ನು ಗೃಹಲಕ್ಷ್ಮಿ ಯೋಜನೆಗಾಗಿ ಸರ್ಕಾರ ಮೀಸಲಿಟ್ಟಿದೆ. ಸದ್ಯ ಲೋಕಸಭಾ ಚುನಾವಣೆ ಕೂಡ ಹತ್ತಿರದಲ್ಲಿ ಇದ್ದು ಈ ಯೋಜನೆಯ ಪ್ರಯೋಜನ ಅರ್ಜಿ ಸಲ್ಲಿಸಿದ ಪ್ರತಿ ಮಹಿಳೆಗೂ ತಲುಪಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.
Do this to get 8th installment of Gruha lakshmi scheme Money
Our Whatsapp Channel is Live Now 👇