ಗೃಹಲಕ್ಷ್ಮಿ ಹಣ ಬಾರದೆ ಇರುವವರಿಗೆ ಸಿಹಿ ಸುದ್ದಿ, ಎಲ್ಲರಿಗೂ ತಪ್ಪದೇ ಹಣ ಜಮಾ! ಇಲ್ಲಿದೆ ಮಾಹಿತಿ
ನಿಮಗೆ ಮುಂದಿನ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಅಂದರೆ 8ನೇ ಕಂತಿನ (8th installment) ಹಣ ತಪ್ಪದೆ ಖಾತೆಗೆ ವರ್ಗಾವಣೆ (Money Deposit) ಆಗಲಿದೆ.
ಸಾಕಷ್ಟು ಜನ ಗೃಹಲಕ್ಷ್ಮಿ (Gruha lakshmi scheme) ಯೋಜನೆಯ ಹಣವನ್ನು ಪಡೆದುಕೊಂಡು ಖುಷಿಯಲ್ಲಿ ಇದ್ದರೆ, ಇನ್ನು ಸಾಕಷ್ಟು ಮಹಿಳೆಯರು ತಮ್ಮ ಖಾತೆಗೆ (Bank Account) ಹಣ ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಸರ್ಕಾರಕ್ಕೆ ಎಲ್ಲಾ ಫಲಾನುಭವಿ ಮಹಿಳೆಯರಿಗೆ 2000 ಬಿಡುಗಡೆ ಮಾಡುವುದು ದೊಡ್ಡ ಸವಾಲಾಗಿದೆ. ಮಹಿಳೆಯರು ಹೇಳುವಂತೆ ನಮ್ಮ ಅರ್ಜಿ ಸಲ್ಲಿಕೆ ಸರಿಯಾಗಿಯೇ ಆಗಿದೆ ಜೊತೆಗೆ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇವೆ ಆದರೂ ಹಣ ಮಾತ್ರ ಬರುತ್ತಿಲ್ಲ…
ಇದಕ್ಕೆ ಸರ್ಕಾರ ಈಗ ಪರಿಹಾರ ಸೂಚಿಸಿದ್ದು ಈ ಕೆಲವು ಪ್ರಮುಖ ಕೆಲಸಗಳನ್ನು ನೀವು ಮಾಡಿಕೊಂಡರೆ ನಿಮಗೆ ಮುಂದಿನ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಅಂದರೆ 8ನೇ ಕಂತಿನ (8th installment) ಹಣ ತಪ್ಪದೆ ಖಾತೆಗೆ ವರ್ಗಾವಣೆ (Money Deposit) ಆಗಲಿದೆ.
ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ! ಕೆಲವೇ ಕೆಲ ದಿನ ಮಾತ್ರ ಅವಕಾಶ
– ಬ್ಯಾಂಕ್ ಗೆ ಹೋಗಿ ಈಕೆವೈಸಿ ಅಪ್ಡೇಟ್ (E-KYC update) ಮಾಡಿಸಿಕೊಳ್ಳಬೇಕು.
– ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರುವಂತೆ ನೋಡಿಕೊಳ್ಳಬೇಕು ಒಂದುವೇಳೆ ಆಕ್ಟಿವ್ ಆಗಿರದೆ ಇದ್ದರೆ ಅದಕ್ಕೆ ಮಿನಿಮಮ್ ಬ್ಯಾಲೆನ್ಸ್ ಅನ್ನು ಹಾಕಿ ಆಕ್ಟಿವ್ ಆಗುವಂತೆ ಮಾಡಿಕೊಳ್ಳಿ.
– ಇನ್ನು NPCI mapping ಕೂಡ ಕಡ್ಡಾಯವಾಗಿದ್ದು ತಪ್ಪದೇ ಆ ಕೆಲಸವನ್ನು ಬ್ಯಾಂಕ್ ನಲ್ಲಿ ಮಾಡಿಸಿಕೊಳ್ಳಿ.
– ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಬಹಳ ಮುಖ್ಯವಾದ ವಿಚಾರ ಜೂನ್ 14, 2024ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಗೆ ಅವಕಾಶ ನೀಡಲಾಗಿದೆ. ನಿಮ್ಮ ಬಳಿ ಇರುವ ಆಧಾರ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ ತಕ್ಷಣ ಅದನ್ನು ಅಪ್ಡೇಟ್ ಮಾಡಿಸಿಕೊಂಡು ನಂತರ ಬ್ಯಾಂಕ್ ನಲ್ಲಿ ಕೆವೈಸಿ ಮೊದಲಾದ ಅಪ್ಡೇಟ್ ಮಾಡಬಹುದು.
– ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರಬಹುದು ಕೂಡ ಕಡ್ಡಾಯ.
ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಇನ್ಮುಂದೆ ಸೌಲಭ್ಯ ಇಲ್ಲ
ಇಷ್ಟೆಲ್ಲ ಮಾಡಿದ್ರು ಹಣ ಬರುತ್ತಿಲ್ಲವಾ? ಹಾಗಾದ್ರೆ ಇಲ್ಲಿದೆ ಪರಿಹಾರ
ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ನಿಮ್ಮ ಅರ್ಜಿ ದಾಖಲೆಗಳ ಜೊತೆಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ ಈ ದಾಖಲೆಗಳನ್ನು ತೆಗೆದುಕೊಂಡು ಸಿಡಿಪಿಓ (CDPO) ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮಗೆ ಯಾವ ಕಾರಣಕ್ಕೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ ಎಂಬುದನ್ನು ಚೆಕ್ ಮಾಡಿ ತಿಳಿಸಲಾಗುವುದು.
ಇನ್ನು ಎರಡನೆಯದಾಗಿ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೂ ಕೂಡ ಕೆಲವು ತಾಂತ್ರಿಕ ದೋಷಗಳಿಂದಾಗಿ ನಿಮ್ಮ ಅರ್ಜಿ ಸಲ್ಲಿಕೆ ಆಗದೆ ಇರಬಹುದು ಅಂತಹ ಸಂದರ್ಭದಲ್ಲಿ ನೀವು ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ರೀತಿ ಕೆಲವು ಪ್ರಮುಖ ಬದಲಾವಣೆಗಳನ್ನು ನೀವು ನಿಮ್ಮ ಖಾತೆಗೆ ಸಂಬಂಧಪಟ್ಟಂತೆ ಮಾಡಿಕೊಂಡರೆ ಮುಂದಿನ ತಿಂಗಳಿನಿಂದ ಯಾವುದೇ ಕಾರಣಕ್ಕೂ ಮಿಸ್ ಆಗದೆ ನಿಮ್ಮ ಖಾತೆಗೆ ಹಣ ಡಿಬಿಟಿ ಆಗುತ್ತದೆ.
ಕೃಷಿಭಾಗ್ಯ ಯೋಜನೆ ಅಡಿ ಕೃಷಿ ಹೊಂಡ, ಪಂಪ್ ಸೆಟ್ ಸೇರಿದಂತೆ ಸಿಗಲಿದೆ ರೈತರಿಗೆ ಸಬ್ಸಿಡಿ; ಅರ್ಜಿ ಸಲ್ಲಿಸಿ
8ನೇ ಕಂತಿನ ಹಣ ಬಿಡುಗಡೆ!
ಉಳಿದ ಎಲ್ಲಾ ಕಂತುಗಳಿಗಿಂತಲೂ ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಬಹಳ ಬೇಗ ಮಹಿಳೆಯರ ಖಾತೆ ತಲುಪಿದೆ ಎನ್ನಬಹುದು. ಏಪ್ರಿಲ್ ತಿಂಗಳ ಆರಂಭದಲ್ಲಿಯೇ 8ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, ಹಂತ ಹಂತವಾಗಿ ಪ್ರತಿ ಜಿಲ್ಲೆಗೂ ಹಣ ವರ್ಗಾವಣೆ ಮಾಡಲಾಗುತ್ತದೆ. ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ ಏಪ್ರಿಲ್ ಎರಡನೇ ವಾರದ ಅಂತ್ಯದ ಒಳಗೆ ಎಂಟನೇ ಕಂತಿನ ಹಣ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ.
ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ತಿಂಗಳ ಪೆಂಡಿಂಗ್ ಹಣ ಜಮಾ!
ಹೊಸ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed to documents for apply)
ಮಹಿಳೆಯರ ಹೆಸರಿನಲ್ಲಿ ರೇಷನ್ ಕಾರ್ಡ್ ಇರಬೇಕು
ಆಧಾರ್ ಕಾರ್ಡ್ ಕೊಡಬೇಕು
ಪಾಸ್ ಪೋರ್ಟ್ ಅಳತೆಯ ಫೋಟೋ
ಬ್ಯಾಂಕ್ ಖಾತೆಯ ವಿವರ. ಈ ಮೊದಲಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನೀವು ಹತ್ತಿರದ ಸೇವಾ ಕೇಂದ್ರಗಳಲ್ಲಿ ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
Gruha Lakshmi Yojana money deposit for all without fail