ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ! ಕೆಲವೇ ಕೆಲ ದಿನ ಮಾತ್ರ ಅವಕಾಶ

ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಕಾಯುತ್ತಿರುವವರಿಗೆ ಬಂದಿದೆ ನೋಡಿ ಹೊಸ ಅಪ್ಡೇಟ್.

ರೇಷನ್ ಕಾರ್ಡ್ (ration Card) ಎನ್ನುವುದು ನಮ್ಮ ರಾಜ್ಯದಲ್ಲಿ ಈಗಾಗಲೇ ಅತ್ಯಂತ ಪ್ರಮುಖ ಸರ್ಕಾರಿ ದಾಖಲೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕೆಂದ್ರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವಂತಹ ಬಹುತೇಕ ಎಲ್ಲಾ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಅಗತ್ಯವಿದೆ.

ಸದ್ಯದ ಮಟ್ಟಿಗೆ ರಾಜ್ಯದಲ್ಲಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹೆಚ್ಚಾಗುತ್ತಿದೆ, ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ (BPL Ration Card) ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಆದರೆ ಈಗಾಗಲೇ ಈ ಸೇವೆಯನ್ನು ಸ್ಥಗಿತಗೊಳಿಸಿರುವ ಕಾರಣದಿಂದಾಗಿ ಇದರ ಬಗ್ಗೆ ಹೊಸ ಅಪ್ಡೇಟ್ಗಾಗಿ ಕಾಯುತ್ತಿರುವಂತಹ ಜನರಿಗೆ ಇವತ್ತಿನ ಈ ಲೇಖನ ಸಾಕಷ್ಟು ಮಾಹಿತಿಯನ್ನು ಒದಗಿಸಲಿದೆ.

ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಇನ್ಮುಂದೆ ಸೌಲಭ್ಯ ಇಲ್ಲ

ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ! ಕೆಲವೇ ಕೆಲ ದಿನ ಮಾತ್ರ ಅವಕಾಶ - Kannada News

ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ

ಹೊಸದಾಗಿ ಪಡಿತರ ಚೀಟಿ ಮಾಡಿಸುವುದಕ್ಕಾಗಿ ಈಗಾಗಲೇ 2,95,986 ಹೊಸ ಅರ್ಜಿಗಳು ಬಂದಿದ್ದು ಇದನ್ನು ಆದಷ್ಟು ಶೀಘ್ರದಲ್ಲಿಯೇ ವಿಲೇವಾರಿ ಮಾಡಬೇಕು ಎನ್ನುವುದಾಗಿ ನಾಗರಿಕ ಆಹಾರ ಸರಬರಾಜು ಇಲಾಖೆ ಸಚಿವರಾಗಿರುವಂತಹ ಕೆಎಚ್ ಮುನಿಯಪ್ಪ (food minister KH muniyappa) ಆದೇಶ ನೀಡಿದ್ದಾರೆ.

ಮಾರ್ಚ್ 31ರ ಒಳಗೆ ಈ ಅರ್ಜಿಗಳನ್ನು ವಿಲೇವಾರಿ ಮಾಡಿ ಏಪ್ರಿಲ್ ಒಂದರಿಂದ ಪ್ರಾರಂಭಿಸಿ ಹೊಸ ಅರ್ಜಿಗಳಿಗೆ ಅವಕಾಶ ನೀಡಲಾಗುತ್ತಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಹೀಗಾಗಿ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವುದಕ್ಕಾಗಿ ನಿಮ್ಮ ಬಳಿ ಕೆಲವೊಂದು ಪ್ರಮುಖ ದಾಖಲೆಗಳು ಬೇಕಾಗಿರುತ್ತವೆ.

ಕೃಷಿಭಾಗ್ಯ ಯೋಜನೆ ಅಡಿ ಕೃಷಿ ಹೊಂಡ, ಪಂಪ್ ಸೆಟ್ ಸೇರಿದಂತೆ ಸಿಗಲಿದೆ ರೈತರಿಗೆ ಸಬ್ಸಿಡಿ; ಅರ್ಜಿ ಸಲ್ಲಿಸಿ

ಬೇಕಾಗಿರುವ ಪ್ರಮುಖ ದಾಖಲೆಗಳು (needed documents)

BPL Ration Card* ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಹಾಗಿಲ್ಲ ಹಾಗೂ ಅರ್ಜಿ ಸಲ್ಲಿಸುವಂತಹ ವ್ಯಕ್ತಿಗಳು ಕರ್ನಾಟಕದ ಕಾಯಂ ನಿವಾಸಿಗಳಾಗಿರಬೇಕು.

* ಹೊಸದಾಗಿ ಮದುವೆ ಆಗಿರುವಂತಹ ಜೋಡಿಗಳು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

* ಯಾರಿಗೆ ಯಾವ ರೀತಿಯ ರೇಷನ್ ಕಾರ್ಡ್ ನೀಡಬೇಕು ಎನ್ನುವುದನ್ನು ಅವರ ವಾರ್ಷಿಕ ಆದಾಯವನ್ನು ನೋಡಿ ನಿಗದಿಪಡಿಸಲಾಗುತ್ತದೆ. ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿಯೇ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

* ಬೇಕಾಗಿರುವಂತಹ ಡಾಕ್ಯುಮೆಂಟ್ ಗಳ ಬಗ್ಗೆ ಮಾತನಾಡುವುದಾದರೆ ಆಧಾರ್ ಕಾರ್ಡ್ ಜೊತೆಗೆ ಡ್ರೈವಿಂಗ್ ಲೈಸನ್ಸ್ ಬೇಕಾಗಿರುತ್ತದೆ.

* ಪಾಸ್ಪೋರ್ಟ್ ಸೈಜ್ನ ಫೋಟೋದ ಜೊತೆಗೆ ಸ್ವಯಂ ಘೋಷಿತ ಪ್ರಮಾಣ ಪತ್ರ ಬೇಕಾಗಿರುತ್ತದೆ.

* ಇನ್ಕಮ್ ಸರ್ಟಿಫಿಕೇಟ್ ಜೊತೆಗೆ ಮೊಬೈಲ್ ನಂಬರ್ ಬೇಕಾಗಿರುತ್ತದೆ.

* ಮನೆ ಸದಸ್ಯರ ಬಗ್ಗೆ ಮಾಹಿತಿ ನೀಡುವಂತಹ ಕೆಲವೊಂದು ದಾಖಲೆಗಳು ಕೂಡ ಈ ಸಂದರ್ಭದಲ್ಲಿ ಅವಶ್ಯಕತೆ ಇರುತ್ತದೆ.

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ತಿಂಗಳ ಪೆಂಡಿಂಗ್ ಹಣ ಜಮಾ!

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಏಪ್ರಿಲ್ 1ರಿಂದ ಪ್ರಾರಂಭಿಸಿ ಕೆಲವೊಂದು ನಿಗದಿತ ಸಮಯದ ಅವಧಿಯಲ್ಲಿ https://ahara.kar.nic.in ಈ ಅಧಿಕೃತ ವೆಬ್ಸೈಟ್ಗೆ ಹೋಗುವ ಮೂಲಕ ಪಡಿತರ ಚೀಟಿ, ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ ಗೆ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಬಿಪಿಎಲ್ ರೇಷನ್ ಕಾರ್ಡ್ ಮೂಲಕ ರಾಜ್ಯದ ಜನರಿಗೆ ಸರ್ಕಾರದಿಂದ ಸಿಗುವಂತಹ ಕೆಲವೊಂದು ಪ್ರಮುಖ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವ ಅವಕಾಶ ಸಿಗುತ್ತದೆ. ಏಪ್ರಿಲ್ 1ರಿಂದ ಅರ್ಹ ಆಗಿರುವಂತಹ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುತ್ತಿದೆ. ಅದಕ್ಕೆ ತಕ್ಕನಾಗಿರುವಂತಹ ಮಾನದಂಡಗಳನ್ನು ಹೊಂದಿರಬೇಕಾಗಿರುವುದು ಕೂಡ ಅತ್ಯಂತ ಅಗತ್ಯವಾಗಿರುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಬಿಟ್ಟುಹೋದ ಹೆಸರುಗಳನ್ನು ಸೇರಿಸಿಕೊಳ್ಳಿ

BPL Ration Card Application Submission

Follow us On

FaceBook Google News

BPL Ration Card Application Submission