ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಬಿಟ್ಟುಹೋದ ಹೆಸರುಗಳನ್ನು ಸೇರಿಸಿಕೊಳ್ಳಿ

ಪಡಿತರ ಚೀಟಿ ಲಿಸ್ಟ್ ನಿಂದ ನಿಮ್ಮ ಹೆಸರು ಮಿಸ್ ಆಗಿದ್ದರೆ ಈ ರೀತಿ ಸೇರಿಸಿ ಮತ್ತು ಉಚಿತ ಅಕ್ಕಿ ಗೋಧಿ ಪಡೆದುಕೊಳ್ಳಿ!

ಕಳೆದ ಮೂರು ವರ್ಷಗಳ ಹಿಂದೆ ಅಂದ್ರೆ 2020 ರಿಂದ ರೇಷನ್ ಕಾರ್ಡ್ (ration card) ಎನ್ನುವುದು ಬಹಳ ಮಹತ್ವವನ್ನ ಪಡೆದುಕೊಂಡಿದೆ ಎನ್ನಬಹುದು ಯಾಕೆಂದರೆ ದೇಶಾದ್ಯಂತ 2020ರಲ್ಲಿ ಕರೋನ ಎನ್ನುವ ಮಹಾಮಾರಿ ದೇಶವನ್ನು ಆವರಿಸಿ ಸಾಕಷ್ಟು ಸಾವು ನೋವು ನಷ್ಟಗಳನ್ನ ಮಾಡಿದೆ.

ಇಂತಹ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಅಥವಾ ತೀರ ಬಡವರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ ಅಕ್ಕಿ, ಗೋಧಿ ಮತ್ತಿತರ ಧಾನ್ಯಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿತು. ಹೀಗಾಗಿ ಈಗಲೂ ಕೂಡ ಸಾಕಷ್ಟು ಜನ ಉಚಿತವಾಗಿ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಹಣಕ್ಕೆ E-KYC ಕಡ್ಡಾಯ, ಈ ರೀತಿ ಮಾಡಿಕೊಳ್ಳಿ!

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ! ಬಿಟ್ಟುಹೋದ ಹೆಸರುಗಳನ್ನು ಸೇರಿಸಿಕೊಳ್ಳಿ - Kannada News

ಈಗಾಗಲೇ ಸಾಕಷ್ಟು ರೇಷನ್ ಕಾರ್ಡ್ ರದ್ದುಪಡಿ (ration card cancellation) ಕಾರ್ಯ ರಾಜ್ಯದಲ್ಲಿ ನಡೆಯುತ್ತಿದೆ, ರೇಷನ್ ಕಾರ್ಡ್ ನಲ್ಲಿನಿಮ್ಮ ಹೆಸರು ಇಲ್ಲದೆ ಇದ್ದರೆ ನೀವು ಮತ್ತೆ ನಿಮ್ಮ ಹೆಸರನ್ನು ಸೇರಿಸಿಕೊಳ್ಳುವ ಮೂಲಕ ಉಚಿತವಾಗಿ ರೇಷನ್ ಪಡೆದುಕೊಳ್ಳಲು ಸಾಧ್ಯ ಮಾಡಿಕೊಳ್ಳಬಹುದು, ಹೇಗೆ ಎಂಬುದನ್ನು ನೋಡೋಣ.

* ಮೊದಲು nfsa.gov.in/Default.aspx ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ರೇಷನ್ ಕಾರ್ಡ್ ವಿವರಗಳು ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

– ಈಗ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಮೊದಲಾದವುಗಳನ್ನು ಆಯ್ಕೆ ಮಾಡಿ ಮಾಹಿತಿ ನೀಡಬೇಕು.

– ಈಗ ಪಡಿತರ ಅಂಗಡಿಯ ಹೆಸರು ಅಂದರೆ ನ್ಯಾಯಬೆಲೆ ಅಂಗಡಿಯ ಹೆಸರು, ಅದರ ಮಾಲೀಕರ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರ (ಬಿಪಿಎಲ್, ಎಪಿಎಲ್) ಇವುಗಳನ್ನು ಆಯ್ಕೆ ಮಾಡಿ ಮಾಹಿತಿ ನೀಡಬೇಕು.

– ಈಗ ನಿಮ್ಮ ಮುಂದೆ ಒಂದು ಲಿಸ್ಟ್ ಕಾಣಿಸುತ್ತದೆ ಅದರಲ್ಲಿ ಪಡಿತರ ಚೀಟಿ ಹೊಂದಿರುವವರ ಹೆಸರು ಇರುತ್ತದೆ ಒಂದು ವೇಳೆ ನಿಮ್ಮ ಹೆಸರು ಇಲ್ಲದೆ ಇದ್ದರೆ ಅದಕ್ಕೆ ಕಾರಣವೂ ಕೂಡ ತಿಳಿದುಕೊಳ್ಳಬಹುದು.

ಈ ಜಿಲ್ಲೆಯ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಸಿಗಲಿದೆ ಸಬ್ಸಿಡಿ! ನಿಮ್ಮ ಜಿಲ್ಲೆ ಇದ್ಯಾ ಚೆಕ್ ಮಾಡಿ

BPL Ration Cardಪಡಿತರ ಚೀಟಿಯಲ್ಲಿ ಮತ್ತೆ ಹೆಸರು ಸೇರಿಸುವುದು ಹೇಗೆ?

ಇದನ್ನು ನೀವು ಆನ್ಲೈನ್ ನಲ್ಲಿ ಮಾಡಲು ಸಾಧ್ಯವಿಲ್ಲ ಇದಕ್ಕಾಗಿ ನೀವು ಹತ್ತಿರದ ಆಹಾರ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ. ನಂತರ ನಿಮ್ಮ ಹೆಸರು ಸೇರಿಸುವುದಕ್ಕೆ ಅಗತ್ಯ ಇರುವ ದಾಖಲೆಗಳ ನಕಲು ಪ್ರತಿ ನೀಡಿ ಅರ್ಜಿ ಭರ್ತಿ ಮಾಡಿ, ಬಳಿಕ ನಿಮ್ಮ ಹೆಸರನ್ನು ಆಡ್ ಮಾಡಲಾಗುವುದು.

8ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಾರದೆ ಇರುವವರು ತಕ್ಷಣ ಈ ಕೆಲಸ ಮಾಡಿ!

Do ration card correction, Add or Delete Family Members names

Follow us On

FaceBook Google News

Do ration card correction, Add or Delete Family Members names