ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಹಣಕ್ಕೆ E-KYC ಕಡ್ಡಾಯ, ಈ ರೀತಿ ಮಾಡಿಕೊಳ್ಳಿ!
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಅವುಗಳ ಪ್ರಯೋಜನವನ್ನು ಫಲಾನುಭವಿಗಳು ಪಡೆದುಕೊಳ್ಳಲು ಅದಕ್ಕೆ ಅಗತ್ಯ ಇರುವ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ.
ನೀವು ನೀಡುವ ದಾಖಲೆ (documents) ಸರಿಯಾಗಿ ಇಲ್ಲದೆ ಇದ್ದರೆ ಅಥವಾ ಅದಕ್ಕೆ ಸರಿಯಾದ ಅಪ್ಡೇಟ್ ಆಗದೆ ಇದ್ದರೆ ಅಂತ ಸಂದರ್ಭದಲ್ಲಿ ನಿಮಗೆ ಯಾವುದೇ ಯೋಜನೆಗೂ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಗೃಹಲಕ್ಷ್ಮಿ ಯೋಜನೆ ಅಥವಾ ಅನ್ನಭಾಗ್ಯ ಯೋಜನೆಯಂತಹ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಈ ಒಂದು ಪ್ರಮುಖ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು.
ನಿಮ್ಮ ಮನೆ, ಜಮೀನಿನ ಮೇಲೆ ಎಷ್ಟಿದೆ ಸಾಲ! ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ
ಈ ಕೆ ವೈ ಸಿ ಕಡ್ಡಾಯ! (E-KYC mandatory)
ಸರ್ಕಾರ ಈಗಾಗಲೇ ತಿಳಿಸಿರುವಂತೆ ನೀವು ನಿಮ್ಮ ಬ್ಯಾಂಕ್ ಖಾತೆಗೆ (bank account) ಈ ಕೆ ವೈ ಸಿ ಮಾಡಿಸಿಕೊಳ್ಳದೆ ಇದ್ದರೆ ನಿಮಗೆ ಸರ್ಕಾರದ ಉಚಿತ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ.
ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಸರ್ಕಾರ ಈ ಯೋಜನೆಗಳ ಹಣವನ್ನು ಡಿಬಿಟಿ ಮಾಡುತ್ತದೆ. ಆದರೆ ನಿಮ್ಮ ಬ್ಯಾಂಕ್ ಖಾತೆ (Bank Account) ಅಪ್ಡೇಟ್ ಆಗದೆ ಇದ್ದಲ್ಲಿ ನಿಮ್ಮ ಖಾತೆಗೆ ಆಟೋಮ್ಯಾಟಿಕ್ ಆಗಿ ಹಣ ಬರಲು ಸಾಧ್ಯವಿಲ್ಲ. ಹಾಗಾದ್ರೆ ನಿಮ್ಮ ಖಾತೆಗೆ ಈಕೆ ವೈ ಸಿ ಮಾಡಿಸಿಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.
ಈ ಜಿಲ್ಲೆಯ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಸಿಗಲಿದೆ ಸಬ್ಸಿಡಿ! ನಿಮ್ಮ ಜಿಲ್ಲೆ ಇದ್ಯಾ ಚೆಕ್ ಮಾಡಿ
ಈ ರೀತಿ ಈಕೆ ವೈಸಿ ಮಾಡಿಸಿಕೊಳ್ಳಿ
* ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡಿ.
* ಈ ಸರ್ವಿಸ್ ವಿಭಾಗದಲ್ಲಿ ಮೇಲ್ಭಾಗದಲ್ಲಿ ಕಾಣುವ ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿ.
* ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
* link with UID ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ
* ಲಿಂಕಿಂಗ್ ವಿಥ್ ಆರ್ ಸಿ ಮೆಂಬರ್ (linking with RC member) ಎನ್ನುವ ಆಯ್ಕೆ ಮೇಲೆ ಟ್ಯಾಪ್ ಮಾಡಿ.
* ಈಗ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಬೇಕು ನಂತರ ಪಡಿತರ ಚೀಟಿ ವಿವರ ಕಾಣಿಸುತ್ತದೆ ಇಲ್ಲಿ ಎಲ್ಲಾ ಕುಟುಂಬದ ಸದಸ್ಯರಿಗೂ ಈಕೆ ವೈ ಸಿ ಆಗಿದೆಯೋ ಇಲ್ಲವೋ ಎನ್ನುವ ಮಾಹಿತಿ ಇರುತ್ತದೆ. ಒಂದು ವೇಳೆ ಆಗದೆ ಇದ್ದಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಸುಲಭವಾಗಿ ಕ್ಷಣಮಾತ್ರದಲ್ಲಿ ಈಕೆ ವೈಸಿ ಮಾಡಿಕೊಳ್ಳಬಹುದು.
8ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಾರದೆ ಇರುವವರು ತಕ್ಷಣ ಈ ಕೆಲಸ ಮಾಡಿ!
ಇನ್ನು ನೀವು ಆಹಾರ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿಯೂ ಕೂಡ ಈಕೆ ವೈ ಸಿ ಅಪ್ಡೇಟ್ ಮಾಡಿಸಿಕೊಳ್ಳಬಹುದು. ಇಂದು ಎಲ್ಲಾ ಹಣಕಾಸಿನ ವ್ಯವಹಾರಗಳು ಡಿಜಿಟಲ್ ಆಗಿಯೇ ಮಾಡಿಕೊಳ್ಳಲಾಗುತ್ತದೆ.
ಈ ಹಿನ್ನೆಲೆಯಲ್ಲಿ ನೀವು ಬಹಳ ಮುಖ್ಯವಾಗಿರುವ ಈಕೆ ವೈ ಸಿ ಮಾಡಿಸಿಕೊಳ್ಳಬೇಕು ಈ ರೀತಿ ಮಾಡಿಕೊಂಡಾಗ ಮಾತ್ರ ನಿಮ್ಮ ಖಾತೆಗೆ ನೇರವಾಗಿ ಸರ್ಕಾರದ ಉಚಿತ ಯೋಜನೆಯ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ.
E-KYC is mandatory for Gruaha Lakshmi and Annabhagya Scheme money