ನಿಮ್ಮ ಮನೆ, ಜಮೀನಿನ ಮೇಲೆ ಎಷ್ಟಿದೆ ಸಾಲ! ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ

agriculture loan : ಬ್ಯಾಂಕುಗಳಲ್ಲಿ ಕೃಷಿ ಸಾಲ (agriculture loan) ಪಡೆದುಕೊಳ್ಳುವುದು ಸಹಜ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಕೂಡ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ (Loan) ಒದಗಿಸುತ್ತಿದೆ

ಕೃಷಿ ಭೂಮಿಯನ್ನು ಹೊಂದಿರುವ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳಲು ಅಗತ್ಯ ಇರುವ ವಸ್ತುಗಳನ್ನು ಖರೀದಿ ಮಾಡುವುದಿರಬಹುದು ಅಥವಾ ಬಿತ್ತನೆ ಬೀಜ ರಸಗೊಬ್ಬರ ಮೊದಲಾದವುಗಳಿಗೆ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ

ಇದಕ್ಕಾಗಿ ಬ್ಯಾಂಕುಗಳಲ್ಲಿ ಕೃಷಿ ಸಾಲ (agriculture loan) ಪಡೆದುಕೊಳ್ಳುವುದು ಸಹಜ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಕೂಡ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ (Loan) ಒದಗಿಸುತ್ತಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಸಾಲ ಮಾಡಿ ತಮ್ಮ ಕೃಷಿ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ.

ಇನ್ನು ಕೃಷಿ ಭೂಮಿಗೆ ಸಂಬಂಧಪಟ್ಟ ಬೇರೆ ಯಾವುದೇ ಕೆಲಸ ಮಾಡುವುದಿದ್ದರೆ ಅಥವಾ ಆ ಭೂಮಿಯನ್ನು ಪರಭಾರೆ ಮಾಡುವುದಿದ್ದರೆ ಭೂಮಿಯ ಮೇಲೆ ಯಾವುದೇ ರೀತಿಯ ಸಾಲ ಇರಬಾರದು.

ನಿಮ್ಮ ಮನೆ, ಜಮೀನಿನ ಮೇಲೆ ಎಷ್ಟಿದೆ ಸಾಲ! ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ - Kannada News

ಈ ಜಿಲ್ಲೆಯ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ಸಿಗಲಿದೆ ಸಬ್ಸಿಡಿ! ನಿಮ್ಮ ಜಿಲ್ಲೆ ಇದ್ಯಾ ಚೆಕ್ ಮಾಡಿ

ಆದರೆ ಸಾಕಷ್ಟು ರೈತರು ತಮ್ಮ ಕೃಷಿ ಭೂಮಿಯ (agriculture Land) ಮೇಲೆ ಎಷ್ಟು ಸಾಲ ಇದೆ ಅಂತ ತಿಳಿದುಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಕೆಲವೊಮ್ಮೆ ಕೃಷಿ ಭೂಮಿ ಪೂರ್ವಜರ ಹೆಸರಿನಲ್ಲಿಯೇ ಇರುತ್ತದೆ ಆದರೆ ಇಂದಿನ ರೈತರು ಅದರಲ್ಲಿ ಕೆಲಸ ಮಾಡಿಕೊಂಡು ಬಂದಿರುತ್ತಾರೆ ಇಂತಹ ಸಂದರ್ಭದಲ್ಲಿ ಆ ಜಮೀನಿನ ಮೇಲೆ ಸಾಲ ಇದೆಯೋ ಇಲ್ಲವೋ ಎಂದು ತಿಳಿದಿರುವುದಿಲ್ಲ.

ಮೊಬೈಲ್ ನಲ್ಲೆ ತಿಳಿದುಕೊಳ್ಳಿ ಸಾಲದ ಮಾಹಿತಿ – Loan Details

ಹಾಗಂದ ಮಾತ್ರಕ್ಕೆ ನೀವು ನಿಮ್ಮ ಜಮೀನಿನ ಮೇಲೆ ಇರುವ ಸಾಲವನ್ನು (Loan) ತಿಳಿದುಕೊಳ್ಳಲು ಯಾವುದೇ ಕಂದಾಯ ಇಲಾಖೆ (revenue department) ಗೆ ಅಥವಾ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ.

ಡಿಜಿಟಲೀಕರಣ ಗೊಂಡಿರುವ ನಮ್ಮಲ್ಲಿ ಬಹುತೇಕ ಎಲ್ಲಾ ಮಾಹಿತಿಗಳನ್ನು ಕೂಡ ಆನ್ಲೈನ್ ಮೂಲಕವೇ ತಿಳಿದುಕೊಳ್ಳಲು ಸಾಧ್ಯ, ಹೀಗಾಗಿ ನಿಮ್ಮ ಪಹಣಿ ಬಗೆಗಿನ ಮಾಹಿತಿಯನ್ನು ಆನ್ಲೈನಲ್ಲಿ ಪಡೆಯಬಹುದು.

8ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಾರದೆ ಇರುವವರು ತಕ್ಷಣ ಈ ಕೆಲಸ ಮಾಡಿ!

Agriculture Loanಮೊಬೈಲ್ ನಲ್ಲಿ ಕೃಷಿ ಭೂಮಿಯ ಮೇಲೆ ಇರುವ ಸಾಲದ ಬಗ್ಗೆ ಮಾಹಿತಿ ಪಡೆಯಲು ಹೀಗೆ ಮಾಡಿ!

* ಮೊದಲಿಗೆ https://landrecords.karnataka.gov.in/Service2/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

* ಈಗ ಕಂದಾಯ ಇಲಾಖೆಯ ಭೂಮಿ ಆನ್ಲೈನ್ ವೆಬ್ಸೈಟ್ ನಲ್ಲಿ ಲ್ಯಾಂಡ್ ರೆಕಾರ್ಡ್ ಪುಟ ತೆರೆದುಕೊಳ್ಳುತ್ತದೆ.

* ಈಗ ನೀವು ನಿಮ್ಮ ಜಿಲ್ಲೆ, ಗ್ರಾಮ, ಹೋಬಳಿ, ಸರ್ವೆ ನಂಬರ್ ಮೊದಲಾದ ಮಾಹಿತಿಯನ್ನು ನೀಡಬೇಕು ನಂತರ ಗೋ ಎಂದು ಕ್ಲಿಕ್ ಮಾಡಿ.

* ಈಗ 2023 – 24ರ ವರ್ಷದ ಆಯ್ಕೆ ಮಾಡಿಕೊಂಡು Fetch details ಎನ್ನುವ ಆಯ್ಕೆಯನ್ನು ಪ್ರೆಸ್ ಮಾಡಿ.

* ಈಗ ನೀವು ಕೊಟ್ಟಿರುವ ಸರ್ವೆ ನಂಬರ ಆಧಾರದ ಮೇಲೆ ಆ ಸರ್ವೇ ನಂಬರ್ ಭೂಮಿಯ ಮಾಲೀಕ ಯಾರು ಅವರ ಹೆಸರು ಕಾಣಿಸುತ್ತದೆ.

* ಮುಂದೆ view ಏನು ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

* ಈಗ ನೀವು ಕೊಟ್ಟಿರುವ ಸರ್ವೆ ನಂಬರ್ ಭೂಮಿಯ ಮಾಲೀಕ ಮತ್ತು ಆ ಭೂಮಿಗೆ ಸಂಬಂಧಪಟ್ಟ ಎಲ್ಲಾ ವಿವರಗಳನ್ನು ಕಾಣಬಹುದು.

* ಇಲ್ಲಿ ಕೃಷಿ ಭೂಮಿಯ ವಿಸ್ತೀರ್ಣ ತಿಳಿಸುವುದು ಮಾತ್ರವಲ್ಲದೆ ಆ ಕೃಷಿ ಭೂಮಿಯ ಮೇಲೆ ಎಷ್ಟು ಸಾಲ ಇದೆ ಯಾವಾಗ ತೆಗೆದುಕೊಂಡಿದ್ದು ಪ್ರತಿಯೊಂದು ಮಾಹಿತಿಯೂ ಕೂಡ ಲಭ್ಯವಾಗುತ್ತದೆ.

ಹೊಸ ರೇಷನ್ ಕಾರ್ಡ್ ಫಲಾನುಭವಿಗಳ ಏಪ್ರಿಲ್ ತಿಂಗಳ ಲಿಸ್ಟ್ ಬಿಡುಗಡೆ! ಇಲ್ಲಿದೆ ಪಟ್ಟಿ

ಹಾಗಾಗಿ ನಿಮ್ಮ ಕೃಷಿ ಭೂಮಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದಿದ್ದರೆ ಸರ್ಕಾರದ ಈ ಅಧಿಕೃತ ವೆಬ್ಸೈಟ್ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳಿ.

How much is the loan on your house, Agriculture land, check online

Follow us On

FaceBook Google News