8ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಾರದೆ ಇರುವವರು ತಕ್ಷಣ ಈ ಕೆಲಸ ಮಾಡಿ!
ಎಂಟನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ, ಹಣ ಬಾರದೆ ಇರುವವರು ತಕ್ಷಣ ಇದೊಂದು ಕೆಲಸ ಮಾಡಿದರೆ ಖಾತೆಗೆ ಮಿಸ್ ಆಗದೆ ಹಣ ಬರುತ್ತೆ!
ಇಂದು ಲಕ್ಷಾಂತರ ಹೆಣ್ಣು ಮಕ್ಕಳು ಮನೆಯಲ್ಲಿ ಗಂಡಂದಿರ ಮುಂದೆ ಪ್ರತಿ ತಿಂಗಳು ಹಣಕ್ಕಾಗಿ ಕೈ ಚಾಚುವ ಪರಿಸ್ಥಿತಿ ಇಲ್ಲ ಎನ್ನಬಹುದು. ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯನ್ನು ಯಾವಾಗ ರಾಜ್ಯ ಸರ್ಕಾರ ಬಿಡುಗಡೆ ಮಾಡಿತೋ ಅಂದಿನಿಂದ ಮಹಿಳೆಯರ ಆರ್ಥಿಕ ಪರಿಸ್ಥಿತಿ ತಕ್ಕ ಮಟ್ಟಿಗೆ ಸುಧಾರಣೆ ಆಗಲು ಆರಂಭವಾಗಿದೆ ಎಂದರೆ ಅತಿಶೋಕ್ತಿ ಅಲ್ಲ.
ಹೌದು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಅತಿ ಹೆಚ್ಚು ಅನುದಾನ ಪಡೆದುಕೊಂಡಿರುವ ಯೋಜನೆ, ಗೃಹಲಕ್ಷ್ಮಿ ಯೋಜನೆ ಆಗಿದೆ, ಪ್ರತಿ ತಿಂಗಳು 2000ಗಳನ್ನು 1.20 ಮಹಿಳೆಯರು ಪಡೆದುಕೊಳ್ಳುವುದು ಅಂದ್ರೆ ಸಣ್ಣ ವಿಚಾರವೇನು ಅಲ್ಲ.
ಹೊಸ ರೇಷನ್ ಕಾರ್ಡ್ ಫಲಾನುಭವಿಗಳ ಏಪ್ರಿಲ್ ತಿಂಗಳ ಲಿಸ್ಟ್ ಬಿಡುಗಡೆ! ಇಲ್ಲಿದೆ ಪಟ್ಟಿ
ಇಂದು ಅದೆಷ್ಟೋ ಮಹಿಳೆಯರು ತಮ್ಮ ಸಣ್ಣಪುಟ್ಟ ಖರ್ಚುಗಳಿಗಾಗಿ ಮನೆಯ ನಿರ್ವಹಣೆಗಾಗಿ ಸರ್ಕಾರ ನೀಡುವ ಈ 2,000ಗಳನ್ನು ವರದಾನ ಎಂದೇ ಭಾವಿಸಿದ್ದಾರೆ. ಅಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಆರಂಭಿಸಲಾಯಿತು, ಇಲ್ಲಿಯವರೆಗೆ 8 ಕಂತಿನ ಮೂಲಕ ಹಣ ಬಿಡುಗಡೆ ಮಾಡಲಾಗಿದ್ದು ಸಾಕಷ್ಟು ಮಹಿಳೆಯರ ಖಾತೆಗೆ (Bank Account) 16,000 ಬಂದು ತಲುಪಿದೆ.
ಈ ಕಾರಣಕ್ಕೆ ನಿಮ್ಮ ಖಾತೆಗೆ ಹಣ ಬಾರದೆ ಇರಬಹುದು!
ಮುಖ್ಯವಾಗಿ ರೇಷನ್ ಕಾರ್ಡ್ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಯ ಹೆಸರಿನಲ್ಲೇ ಇರಬೇಕು. ಅಷ್ಟೇ ಅಲ್ಲದೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಎಲ್ಲವೂ ಕೂಡ ಒಂದಕ್ಕೊಂದು ಮ್ಯಾಚ್ ಆಗಬೇಕು. ಒಂದು ವೇಳೆ ನಿಮ್ಮ ಹೆಸರು ವಿಳಾಸ ವ್ಯತ್ಯಾಸವಾಗಿದ್ದರೆ ಅಂತಹ ಸಂದರ್ಭದಲ್ಲಿ ಹಣ ಬಾರದೆ ಇರುವ ಸಾಧ್ಯತೆ ಇರುತ್ತದೆ.
ಗೃಹಲಕ್ಷ್ಮಿ ಯೋಜನೆ 8ನೇ ಕಂತಿನ ಹಣ ಬಿಡುಗಡೆ ಬಗ್ಗೆ ಸರ್ಕಾರದ ಬಿಗ್ ಅಪ್ಡೇಟ್!
ಇನ್ನು ಎರಡನೆಯದಾಗಿ ನಿಮ್ಮ ಆಧಾರ್ ಕಾರ್ಡ್ ಆಗಿರಲಿ ಬ್ಯಾಂಕ್ ಅಕೌಂಟ್ ಆಗಿರಲಿ ಆಕ್ಟಿವ್ ಆಗಿರುವುದು ಬಹಳ ಮುಖ್ಯ. ಜೊತೆಗೆ ಈಕೆ ವೈ ಸಿ ಅಪ್ಡೇಟ್ ಹಾಗೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬೇಕು. ಒಂದು ವೇಳೆ ಈ ಕೆಲಸ ಆಗದೆ ಇದ್ದರೆ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಖಾತೆಗೆ ಸಂಬಂಧಪಟ್ಟ ಈಕೆ ವೈ ಸಿ ಅಪ್ಡೇಟ್ ಮಾಡಿಸಿಕೊಳ್ಳಿ.
ಮೂರನೆಯದಾಗಿ ತಾಂತ್ರಿಕ ದೋಷಗಳು ಕೂಡ ಕಾರಣವಾಗಿರಬಹುದು. ಸರ್ಕಾರ ಈಗಾಗಲೇ ತಿಳಿಸಿರುವಂತೆ ಇದು ಸಂಪೂರ್ಣ ಡಿಜಿಟಲ್ ಆಗಿರುವ ಹಣ ಡಿ ಬಿ ಟಿ ಮಾಡುವ ಪ್ರಕ್ರಿಯೆ ಆಗಿದೆ. ಹಾಗಾಗಿ ಕೋಟ್ಯಂತರ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡುವಾಗ ಯಾವುದಾದರು ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ.
15,000 ರೇಷನ್ ಕಾರ್ಡುಗಳು ಕ್ಯಾನ್ಸಲ್, ನಿಮ್ಮ ಕಾರ್ಡ್ ಸ್ಥಿತಿ ಏನಾಗಿದೆ? ಚೆಕ್ ಮಾಡಿ
ಸರ್ವರ್ ಸಮಸ್ಯೆಯಿಂದಾಗಿ ಕೆಲವು ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Deposit) ಆಗದೆ ಇರುವ ಸಾಧ್ಯತೆ ಇದೆ. ಆದ್ರೆ ಶೀಘ್ರದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಹೊಸದಾಗಿ ಅರ್ಜಿ ಸಲ್ಲಿಸಿ!
ಕೆಲವು ಸಲ ನೀವು ಈ ಹಿಂದೆ ಸಲ್ಲಿಸಿದ ಅರ್ಜಿ ಸರ್ಕಾರಕ್ಕೆ ಸಲ್ಲಿಕೆ ಆಗದೆ ಇರುವ ಕಾರಣಕ್ಕು ನಿಮಗೆ ಹಣ ವರ್ಗಾವಣೆ ಆಗದೆ ಇರಬಹುದು. ಹಾಗಾಗಿ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಈ ರೀತಿ ಮಾಡುವುದರಿಂದ ತಪ್ಪದೇ ನಿಮ್ಮ ಖಾತೆಗೆ ಮುಂದಿನ ತಿಂಗಳಿನಿಂದಾದರು ಹಣ ವರ್ಗಾವಣೆ ಆಗುತ್ತದೆ.
ಗೃಹಜ್ಯೋತಿ ಯೋಜನೆಯ ಮತ್ತೊಂದು ಅಪ್ಡೇಟ್; ವಿದ್ಯುತ್ ದರ ಇನ್ನಷ್ಟು ಇಳಿಕೆ!
Do This, Those who did not get 8th installment of the Gruha Lakshmi Yojana Money