15,000 ರೇಷನ್ ಕಾರ್ಡುಗಳು ಕ್ಯಾನ್ಸಲ್, ನಿಮ್ಮ ಕಾರ್ಡ್ ಸ್ಥಿತಿ ಏನಾಗಿದೆ? ಚೆಕ್ ಮಾಡಿ

ಬಡತನ ರೇಖೆಗಿಂತ ಕೆಳಗಿರುವವರಿಗೆ ಮತ್ತು ಕಡು ಬಡವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ವಿತರಣೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು.

ಇದರ ಅಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವವರು ಉಚಿತ ಅಥವಾ ಸಬ್ಸಿಡಿ ದರದಲ್ಲಿ ಪಡಿತರ ವಸ್ತುಗಳನ್ನ ಪಡೆದುಕೊಳ್ಳಲು ಸಹಾಯಕವಾಯಿತು. ಇದರ ಜೊತೆಗೆ ಸರ್ಕಾರದ ಇತರ ಯೋಜನೆಗಳ ಪ್ರಯೋಜನವನ್ನು ಕೂಡ ಸುಲಭವಾಗಿ ಪಡೆಯಬಹುದು.

ಆದರೆ ನಿಜವಾಗಿ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಕ್ತಾ ಇದೆಯಾ ಅಂತ ಕೇಳಿದ್ರೆ ಖಂಡಿತವಾಗಿಯೂ ಉತ್ತರ ಇಲ್ಲ ಎಂದೇ ಬರುತ್ತದೆ. ಯಾಕೆಂದರೆ ಉಳ್ಳವರು ಕೂಡ ರೇಷನ್ ಕಾರ್ಡ್ ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಇದರಿಂದಾಗಿ ನಿಜಕ್ಕೂ ಯಾರು ಫಲಾನುಭವಿಗಳು ಅವರಿಗೆ ಸರಿಯಾಗಿ ರೇಷನ್ ಕಾರ್ಡ್ ಸಿಗುತ್ತಿಲ್ಲ ಹಾಗೂ ಸರ್ಕಾರದ ಪ್ರಯೋಜನಗಳನ್ನ ಇಂಥವರು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ಗಮನಿಸಿರುವ ಸರ್ಕಾರ ಈಗ ಇಂಥವರ ರೇಷನ್ ಕಾರ್ಡ್ ಬಂದ್ ಮಾಡಲು ಹೊರಟಿದೆ.

ಗೃಹಜ್ಯೋತಿ ಯೋಜನೆಯ ಮತ್ತೊಂದು ಅಪ್ಡೇಟ್; ವಿದ್ಯುತ್ ದರ ಇನ್ನಷ್ಟು ಇಳಿಕೆ!

ಯಾರ ರೇಷನ್ ಕಾರ್ಡ್ ರದ್ದುಪಡಿಸಲಾಗುವುದು?

* ಹೆಚ್ಚು ಜಮೀನು ಹೊಂದಿದ್ದು ಅಕ್ರಮವಾಗಿ ಬಿಪಿಎಲ್ ಕಾರ್ಡ್ (BPL Card) ಹೊಂದಿದ್ರೆ ಅಂತವರ ಕಾರ್ಡ್ ರದ್ದು

* ಸರ್ಕಾರದ ಮಾನದಂಡಗಳನ್ನು ಗಮನಿಸದೇ ಬಿಪಿಎಲ್ ಕಾರ್ಡ್ ಹೊಂದಿದ್ರೆ ಅಂತವರ ಕಾರ್ಡ್ ರದ್ದು

* ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಹೊಂದಿದ್ದರೆ ಅಂತ ಕಾರ್ಡ್ ರದ್ದು

* ಕಳೆದ ಆರು ತಿಂಗಳಿನಿಂದ ಪಡಿತರ ವಸ್ತು ಪಡೆದುಕೊಳ್ಳದೆ ಕೇವಲ ಸರ್ಕಾರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಅಂತವರ ರೇಷನ್ ಕಾರ್ಡ್ ರದ್ದು.

* ಸರ್ಕಾರಿ ನೌಕರಿ ಹೊಂದಿದ್ದರೆ ಇನ್ಕಮ್ ಟ್ಯಾಕ್ಸ್ ಪೇಯರ್ ಆಗಿದ್ದರೆ ಅಂಥವರ ರೇಷನ್ ಕಾರ್ಡ್ ರದ್ದು

8ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ಕಾರಣಕ್ಕೆ ನಿಮ್ಮ ಖಾತೆಗೆ ಬರದೇ ಇರಬಹುದು

BPL Ration Cardರೇಷನ್ ಕಾರ್ಡ್ ರದ್ದುಪಡಿ ಬಗ್ಗೆ ತಿಳಿದುಕೊಳ್ಳುವುದು ಹೇಗೆ?

ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಸ್ಟೇಟಸ್ ನಲ್ಲಿ ರದ್ದುಪಡಿಸಲಾಗಿರುವ ಅಥವಾ ತಡೆಹಿಡಿಯಲಾಗಿರುವ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತಿದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಕಾಣುವ ಮೂರು ಲಿಂಕ್ಗಳಲ್ಲಿ ನಿಮ್ಮ ಜಿಲ್ಲೆಯ ಆದಾರದ ಮೇಲೆ ಆ ಲಿಂಕ್ ಮೇಲ್ಬಾಗದಲ್ಲಿ ಕ್ಲಿಕ್ ಮಾಡಿ.

ಈಗ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯೋ ಇಲ್ವೋ ಎನ್ನುವ ಮಾಹಿತಿ ತಿಳಿಯಬಹುದು.

8ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ಕಾರಣಕ್ಕೆ ನಿಮ್ಮ ಖಾತೆಗೆ ಬರದೇ ಇರಬಹುದು

ಹೊಸ ರೇಷನ್ ಕಾರ್ಡ್ ಪಡೆಯುವುದು ಹೇಗೆ?

https://kfcsc.karnataka.gov.in/english ಈ ಅಧಿಕೃತ ವೆಬ್ಸೈಟ್ನಲ್ಲಿ ನೀವು ನಿಮ್ಮ ಆದಾಯ ಮತ್ತು ಆಧಾರ್ ಕಾರ್ಡ್ ಮಾಹಿತಿ ನೀಡಿದರೆ ಅರ್ಜಿ ಸಲ್ಲಿಸಬಹುದು.

15,000 ration cards cancelled, Check what is your card status

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories