8ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ! ಈ ಕಾರಣಕ್ಕೆ ನಿಮ್ಮ ಖಾತೆಗೆ ಬರದೇ ಇರಬಹುದು

ಮನೆಯಲ್ಲಿ ಕುಳಿತು ಅಡುಗೆ ಕೆಲಸ ಮಾಡಿಕೊಂಡು ಸಂಸಾರ ನೋಡಿಕೊಂಡು ಜೀವನ ಸಾಗಿಸುತ್ತಿರುವ ಮಹಿಳೆಯರಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ನಿಜಕ್ಕೂ ಬಹಳ ಸಹಾಯಕಾರಿಯಾಗಿದೆ ಎಂದು ಹೇಳಬಹುದು.
ಸಾಮಾನ್ಯವಾಗಿ ಮನೆಯಲ್ಲಿ ಇರುವ ಮಹಿಳೆಯರಿಗೆ ಖರ್ಚಿಗೆ ಹಣ ಬೇಕು ಅಂದ್ರೆ ಅದನ್ನು ಪಡೆದುಕೊಳ್ಳುವುದು ಕಷ್ಟ, ಅದರಲ್ಲೂ ಬಡವರ ಮನೆಯಲ್ಲಂತೂ ಇದು ಅಸಾಧ್ಯ ಎಂದೇ ಹೇಳಬಹುದು
ಅಂತಹ ಪರಿಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2000 ಗಳನ್ನ ಮನೆ ಖರ್ಚಿಗಾಗಿ ಅಥವಾ ಮಹಿಳೆಯರ ವೈಯಕ್ತಿಕ ಖರ್ಚಿಗಾಗಿ ಸರ್ಕಾರ ಉಚಿತವಾಗಿ ನೀಡುತ್ತಿದೆ. ಇದರಿಂದ ಸಾಕಷ್ಟು ಮಹಿಳೆಯರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎನ್ನಬಹುದು.
ಇಂಥವರು ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದು; ಮಹತ್ವದ ಸೂಚನೆ!
ಪ್ರತಿ ತಿಂಗಳು 2000ಗಳಂತೆ ಇಲ್ಲಿಯವರೆಗೆ ಏಳು ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, 14,000 ಮಹಿಳೆಯರ ಖಾತೆ (Bank Account) ತಲುಪಿವೆ. ಇದೀಗ 8ನೇ ಕಂತಿನ ಹಣವು ಕೂಡ ಬಿಡುಗಡೆ ಆಗಿದ್ದು ಈಗಾಗಲೇ ಸುಮಾರು 20 ಲಕ್ಷದಷ್ಟು ಮಹಿಳೆಯರ ಖಾತೆಯನ್ನು ತಲುಪಿದೆ. ಹಂತ ಹಂತವಾಗಿ ಏಪ್ರಿಲ್ ಮೊದಲ ವಾರದಲ್ಲಿ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ 8ನೇ ಕಂತಿನ ಹಣ ಜಮಾ ಆಗಲಿದೆ.
ಹಣ ಬರಬೇಕು ಅಂದ್ರೆ ಈ ಕೆಲಸ ಕಡ್ಡಾಯ!
ಗೃಹಲಕ್ಷ್ಮಿ ಹಣವನ್ನು ಸಲಾ ಅನುಭವಿಗಳ ಖಾತೆಗೆ DBT ಮಾಡುವುದು ಒಂದು ಆಟೋಮ್ಯಾಟಿಕ್ ಆಗಿರುವ ಪ್ರಕ್ರಿಯೆ ಆಗಿದ್ದು ನೀವು ನಿಮ್ಮ ದಾಖಲೆಗಳನ್ನು ಆರಂಭದಲ್ಲಿಯೇ ಸರಿಯಾಗಿ ಕೊಟ್ಟಿದ್ದಾರೆ ಮಿಸ್ ಆಗದೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಹಾಗಾಗಿ ಈ ಕೆಳಗಿನ ಕೆಲಸಗಳು ಆಗಿದ್ಯೋ ಇಲ್ವೋ ಎಂದು ಚೆಕ್ ಮಾಡಿ ಒಂದು ವೇಳೆ ಆಗದಿದ್ದರೆ ತಕ್ಷಣ ಆ ಕೆಲಸ ಮಾಡಿಸಿಕೊಳ್ಳಿ.
* ನೇರವಾಗಿ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಗೆ ಪಿಕೆ ವೈ ಸಿ ಅಪ್ಡೇಟ್ ಆಗಿದ್ಯಾ ಅಂತ ಕೇಳಿ ತಿಳಿದುಕೊಳ್ಳಿ.
* ಆಧಾರ್ ಕಾರ್ಡ್ ಅಪ್ಡೇಟ್ ಆಗಿದ್ದು ಅದು ನಿಮ್ಮ ಖಾತೆಗೆ ಲಿಂಕ್ ಆಗಿರಬೇಕು. ನೀವು 10 ವರ್ಷ ಹಳೆಯದಾಗಿರುವ ಆಧಾರ್ ಕಾರ್ಡ್ ಬಳಕೆ ಮಾಡುತ್ತಿದ್ದು ಅದನ್ನು ಮಾಡಿಕೊಳ್ಳದಿದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಜೂನ್ 14 2024 ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವಿದೆ.
* ಈಕೆ ವೈ ಸಿ (E-KYC) ಮಾಡಿಸಿದ ನಂತರ ನಿಮ್ಮ ಖಾತೆಗೆ ಹಣ ಬಾರದೇ ಇದ್ದರೆ ತಕ್ಷಣ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಗೆ NPCI mapping ಮಾಡಿಸಿಕೊಳ್ಳಿ.
ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ! ಖಾತೆ ಚೆಕ್ ಮಾಡಿ
ಅತ್ತೆ ಇಲ್ಲದಿದ್ರೆ ಸೊಸೆ ಖಾತೆಗೆ ಹಣ ಜಮಾ ಆಗುತ್ತೆ!
ಗೃಹಲಕ್ಷ್ಮಿ ಯೋಜನೆಯ ಪ್ರಮುಖ ರೂಲ್ಸ್ ಇದು. ಮನೆಯ ಹಿರಿಯ ಮಹಿಳಾ ಸದಸ್ಯರಿಗೆ ಯೋಜನೆಯ ಹಣ ಜಮಾ ಮಾಡಲಾಗುವುದು ಹಾಗೂ ಅವರ ಹೆಸರಿನಲ್ಲಿ ಅಪ್ಲಿಕೇಶನ್ ಹಾಕಬೇಕಿತ್ತು. ಕೆಲವೊಂದು ಕಡೆ ಅರ್ಜಿ ಸಲ್ಲಿಸಿದ ನಂತರ ಹಿರಿಯ ಮಹಿಳೆ ಮರಣ ಹೊಂದಿದ್ದು, ಅವರ ಖಾತೆಗೆ ಹಣ ಜಮಾ ಆಗಿದೆ, ಆದರೆ ಇದನ್ನು ಅವರ ಮನೆಯವರು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದನ್ನು ಗಮನಿಸಿರುವ ಸರ್ಕಾರ ಇದೀಗ ಮನೆಯ ಹಿರಿಯ ಮಹಿಳಾ ಸದಸ್ಯೆ ಮರಣ ಹೊಂದಿದ್ದರೆ, ಎರಡನೇ ಮಹಿಳಾ ಸದಸ್ಸೆ (ಸಾಮಾನ್ಯವಾಗಿ ಸೊಸೆ) ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಮಾಡಲು ನಿರ್ಧರಿಸಿದೆ. ಇದಕ್ಕೆ ಸರ್ಕಾರದ ಡೇಟಾಬೇಸ್‌ನಲ್ಲಿ ನೀವು ನಿಮ್ಮ ಹೊಸ ಖಾತೆಯನ್ನು ಅಪ್ಡೇಟ್ ಮಾಡಿಸಬೇಕು.
ಹೊಸ ಪಡಿತರ ಚೀಟಿ ಪಡೆಯಲು ಬಯಸುವವರಿಗೆ ಇನ್ಮುಂದೆ ಸರ್ಕಾರದ ಹೊಸ ನಿಯಮ!
ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ!
ಕರ್ನಾಟಕ ಸರ್ಕಾರ DBT Karnataka ಇನ್ನ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದು ನೀವು ನಿಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ಅಪ್ಲಿಕೇಶನ್ ಗೆ ಪ್ರವೇಶ ಪಡೆಯಿರಿ. ಬಳಿಕ ಪಾಸ್ವರ್ಡ್ ಸೆಟ್ ಮಾಡಿ . ಈ ಅಪ್ಲಿಕೇಶನ್ ನಲ್ಲಿ ನಿಮ್ಮ ಪೇಮೆಂಟ್ ಸ್ಟೇಟಸ್ ತಿಳಿದುಕೊಳ್ಳಬಹುದು.
ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ವರ್ಗಾವಣೆ ಆಗಲ್ಲ! ಬಿಗ್ ಅಪ್ಡೇಟ್
8th installment of Gruha lakshmi money released, Check Bank account
ಅತ್ತೆ ಇಲ್ಲದಿದ್ರೆ ಸೊಸೆ ಖಾತೆಗೆ ಹಣ ಜಮಾ ಆಗುತ್ತೆ!



