ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಬಿಡುಗಡೆ! ಖಾತೆ ಚೆಕ್ ಮಾಡಿ
ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇದುವರೆಗೆ ಯಾರಿಗೆ ಹಣ ಸಂದಾಯ ಆಗಿಲ್ಲವೋ ಅವರಿಗೂ ಕೂಡ ಪೆಂಡಿಂಗ್ ಇರುವ ಹಣ ಜಮಾ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ.
ಮಹಿಳೆಯರ ಸಬಲೀಕರಣಕ್ಕಾಗಿ ಆರಂಭಿಸಲಾಗಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಇಂದು ಬಹುತೇಕ ಸಕ್ಸಸ್ ಆಗಿದೆ ಎನ್ನಬಹುದು. ಅಂದರೆ ಶೇಕಡಾ 90ರಷ್ಟು ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ ಆಗಿದೆ.
ಆದಾಗ್ಯೂ ಸುಮಾರು 10% ನಷ್ಟು ಮಹಿಳೆಯರು ಅಂದರೆ 8 ಲಕ್ಷಕ್ಕೂ ಅಧಿಕ ಮಹಿಳೆಯರು ತಮ್ಮ ಖಾತೆಗೆ ಹಣವನ್ನು ಪಡೆದುಕೊಂಡಿಲ್ಲ ಎಂದು ಸರ್ಕಾರವನ್ನು ದೂರಿದ್ದಾರೆ. ಆದರೆ ನಿಮ್ಮ ಖಾತೆಯಲ್ಲಿ ಈ ರೀತಿಯ ಸಮಸ್ಯೆ ಇದೆಯಾ ಎನ್ನುವುದನ್ನು ಮೊದಲು ಚೆಕ್ ಮಾಡಿ ಒಂದು ವೇಳೆ ಅಂತಹ ಸಮಸ್ಯೆ ಇದ್ದರೆ ಖಂಡಿತ ಅದನ್ನು ಬೇಗ ಸರಿಪಡಿಸಿಕೊಳ್ಳಿ ತಪ್ಪದೇ ನಿಮ್ಮ ಖಾತೆಗೆ ಹಣ ಜಮಾ ಆಗಲು (Money Deposit) ಆರಂಭವಾಗುತ್ತದೆ.
ಹೊಸ ಪಡಿತರ ಚೀಟಿ ಪಡೆಯಲು ಬಯಸುವವರಿಗೆ ಇನ್ಮುಂದೆ ಸರ್ಕಾರದ ಹೊಸ ನಿಯಮ!
ಈ ಸಮಸ್ಯೆಗಳು ಇರಬಹುದು ಚೆಕ್ ಮಾಡಿ!
* ಮಹಿಳೆಯರ ಬ್ಯಾಂಕ್ ಖಾತೆಯ ಹೆಸರು ರೇಷನ್ ಕಾರ್ಡ್ ಖಾತೆಯ ಹೆಸರು ಮ್ಯಾಚ್ ಆಗದೇ ಇರಬಹುದು.
* ಬ್ಯಾಂಕ ಖಾತೆ ಇದ್ದರೂ ಅದು ಬಹಳ ಹಳೆಯ ಖಾತೆಯಾಗಿದ್ದು ಆಕ್ಟಿವ್ ಇಲ್ಲದೆ ಇರಬಹುದು.
* ಈ ಕೆವೈಸಿ ಅಪ್ಡೇಟ್ ಆಗದೇ ಇರಬಹುದು.
* ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇರಬಹುದು (ಜೂನ್ 14 ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಕೊನೆಯ ದಿನಾಂಕವಾಗಿದ್ದು ಅಷ್ಟರಲ್ಲಿ ಮಾಡಿಸಿಕೊಳ್ಳಿ ಇಲ್ಲವಾದರೆ ಮುಂದೆ ಅಪ್ಡೇಟ್ ಮಾಡಿಸಿಕೊಳ್ಳಲು ಸಾವಿರ ರೂಪಾಯಿ ಹಣ ಪಾವತಿಸಬೇಕಾಗುತ್ತದೆ)
* NPCI mapping ಆಗದೆ ಇರಬಹುದು.
* ತಾಂತ್ರಿಕ ದೋಷಗಳು ಕಾರಣ ಆಗಿರಬಹುದು.
ಅನ್ನಭಾಗ್ಯ ಯೋಜನೆ ಹಣ ಇಂತಹವರಿಗೆ ವರ್ಗಾವಣೆ ಆಗಲ್ಲ! ಬಿಗ್ ಅಪ್ಡೇಟ್
ಈ ಎಲ್ಲಾ ಸಮಸ್ಯೆಗಳು ನಿಮ್ಮ ಖಾತೆಯಲ್ಲಿ ಇದ್ದರೆ ಖಂಡಿತವಾಗಿಯೂ ಹಣ ಜಮಾ ಆಗುವುದಿಲ್ಲ, ಹಾಗಾಗಿ ನೀವು ಇದಕ್ಕೆ ಪರಿಹಾರ ಕಂಡು ಹಿಡಿದುಕೊಳ್ಳಲು ಹತ್ತಿರದ ಸಿಡಿಪಿಓ ಕಚೇರಿಗೆ ಭೇಟಿ ನೀಡಿ ನಿಮ್ಮ ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಒಂದು ವೇಳೆ ನೀವು ಅರ್ಜಿ ಸಲ್ಲಿಸಿದ್ದೆ ಸರಿ ಆಗದೆ ಇದ್ದರೆ ಮತ್ತೆ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣಕ್ಕೆ ಕಡ್ಡಾಯ ರೂಲ್ಸ್ ಜಾರಿ! ಬಿಗ್ ಅಪ್ಡೇಟ್
8ನೇ ಕಂತಿನ ಹಣ ಜಮಾ ನಿಮ್ಮ ಖಾತೆ ಚೆಕ್ ಮಾಡಿ!
ಮಹಿಳೆಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮಾರ್ಚ್ ತಿಂಗಳಿನಲ್ಲಿ ಎರಡು ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಏಳನೇ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿತ್ತು, ಮಾರ್ಚ್ 2ನೇ ವಾರದಿಂದ ಏಳನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿತ್ತು.
ಈಗ ಮಾರ್ಚ್ 30ನೇ ತಾರೀಕಿನಂದು ಎಂಟನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 20 ಲಕ್ಷ ಮಹಿಳೆಯರ ಖಾತೆಗೆ ಈ ಹಣ ಜಮಾ ಆಗಿದೆ ಎಂದು ವರದಿಯಾಗಿದೆ. ಹಾಗಾಗಿ ಏಪ್ರಿಲ್ ಮೊದಲ ವಾರದಲ್ಲಿ 8ನೇ ಕಂತಿನ ಹಣ ನಿಮ್ಮ ಖಾತೆಗೂ ಬರಬಹುದು.
ನಿಮ್ಮ ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದ್ಯಾ ಇಲ್ವಾ ಚೆಕ್ ಮಾಡಬಹುದು. ಇದಕ್ಕಾಗಿ ನೀವು ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ.
ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್!
ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದಕ್ಕೆ ನಾಲ್ಕು ಅಂಕಿಯ ಪಿನ್ ಸಂಖ್ಯೆಯನ್ನು ಹಾಕಬೇಕು. ನಂತರ ಹೊಸ ಪುಟ ತೆರೆದುಕೊಳ್ಳುತ್ತೆ. ಅಲ್ಲಿ ನಿಮಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು ನಿಮ್ಮ ಗೃಹಲಕ್ಷ್ಮಿ ಹಣ ಅಥವಾ ಯಾವುದೇ ಯೋಜನೆಯ ಹಣ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಲು ಸಾಧ್ಯವಿದೆ.
Gruha Lakshmi Scheme 8th Installment money release for this district