ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್!

ಹೊಸ ರೇಷನ್ ಕಾರ್ಡ್ ಗಾಗಿ ನೀವು ಅಪ್ಲೈ ಮಾಡಿದ್ರೆ, ಅದರ ಸ್ಥಿತಿಗತಿಯನ್ನು ನೀವು ಮೊಬೈಲ್ ನಲ್ಲಿ ಆನ್ಲೈನ್ ಮೂಲಕವೇ ಪರಿಶೀಲಿಸಿಕೊಳ್ಳಬಹುದು

ಕೇಂದ್ರ ಸರ್ಕಾರ (Central government) ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಪಡಿತರ ವಸ್ತುಗಳನ್ನ ವಿತರಣೆ ಮಾಡಲು ಹಾಗೂ ಸರ್ಕಾರದ ಇತರ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ (ration card) ವಿತರಣೆ ಮಾಡಿದೆ.

ಈ ಮೂಲಕ ಬಿಪಿಎಲ್ ಕಾರ್ಡ್ ಮತ್ತು AAY ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಸರ್ಕಾರಿ ಸೌಲಭ್ಯಗಳು ಸಿಗುತ್ತದೆ.

ಇಂತಹವರಿಗೆ ಸಿಗದೇ ಇರಬಹುದು ಉಚಿತ ವಿದ್ಯುತ್! ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್

ಮೊಬೈಲ್ ನಲ್ಲಿಯೇ ಸುಲಭವಾಗಿ ಚೆಕ್ ಮಾಡಿಕೊಳ್ಳಿ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್! - Kannada News

ಹೊಸ ರೇಷನ್ ಕಾರ್ಡ್ ವಿತರಣೆ!

ಕಳೆದ ಎರಡರಿಂದ ಮೂರು ವರ್ಷಗಳ ಕಾಲ ವಿತರಣೆ ಮಾಡದೆ ಹಾಗೆ ಬಿದ್ದಿದ್ದ ರೇಷನ್ ಕಾರ್ಡ್ ಅರ್ಜಿಗಳನ್ನ ಈಗ ಪರಿಶೀಲನೆ ಮಾಡಲು ಸರ್ಕಾರ ಮುಂದಾಗಿದೆ. ಕಳೆದ ಕೆಲವು ವಾರಗಳ ಹಿಂದೆ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (food minister K.H. muniyappa) ಅವರು ಹೊಸ ರೇಷನ್ ಕಾರ್ಡ್ ವಿತರಣೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು.

“ಈಗಾಗಲೇ 75% ನಷ್ಟು ಅರ್ಜಿ ಗಳ ಪರಿಶೀಲನೆ ನಡೆದಿದೆ. ಮಾರ್ಚ್ 31.2024ರ ಒಳಗೆ ಈ ಕೆಲಸವನ್ನು ಮುಗಿಸಿ ಹೊಸ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಅದರಂತೆ ಏಪ್ರಿಲ್ 1 2024 ರಿಂದ ನೀವು ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲಿ ಹೊಸ ಪಡಿತರ ಕಾರ್ಡ್ ಪಡೆದುಕೊಳ್ಳಬಹುದು.

ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ತಿಳಿದುಕೊಳ್ಳಿ! (Check your ration card status)

ಈಗಾಗಲೇ ರಾಜ್ಯ ಸರ್ಕಾರ ಕೆಲವರ ರೇಷನ್ ಕಾರ್ಡ್ ರದ್ದುಪಡಿ ಮಾಡಿದೆ. ಇನ್ನು ಹೊಸ ರೇಷನ್ ಕಾರ್ಡ್ ಗಾಗಿ ನೀವು ಅಪ್ಲೈ ಮಾಡಿದ್ರೆ, ಅದರ ಸ್ಥಿತಿಗತಿಯನ್ನು ನೀವು ಮೊಬೈಲ್ ನಲ್ಲಿ ಆನ್ಲೈನ್ ಮೂಲಕವೇ ಪರಿಶೀಲಿಸಿಕೊಳ್ಳಬಹುದು. ಹೇಗೆ ಚೆಕ್ ಮಾಡುವುದು ನೋಡೋಣ.

ಸಿಹಿ ಸುದ್ದಿ! ಇಂತಹ ರೈತರಿಗೆ ಸರ್ಕಾರದಿಂದ ಭೂಮಿ ಹಂಚಿಕೆ, ಸಿಗಲಿದೆ ಹಕ್ಕು ಪತ್ರ

BPL Ration Card* https://ahara.kar.nic.in/Home/EServices ಮೊದಲು ಆಹಾರ ಇಲಾಖೆಯ ಈ ಅಧಿಕಾರದ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

* ಈ ಸರ್ವಿಸ್ ವಿಭಾಗ ಕಾಣಿಸುತ್ತದೆ ಎಡಭಾಗದಲ್ಲಿ ಕಾಣಿಸುವ ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿ.

* ಇ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ

* New/ existing ರೇಷನ್ ಕಾರ್ಡ್ ಅನ್ನು ಮಾಹಿತಿ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

* ಈಗ ನಿಮ್ಮ ಜಿಲ್ಲೆಗಳನ್ನು ಹೊಂದಿರುವ ಮೂರು ಲಿಂಕ್ ಗಳನ್ನು ಕಾಣಬಹುದು. ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ. ಅದರ ಮೇಲ್ಭಾಗದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

* ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ತಾಲೂಕು ಗ್ರಾಮ ಮೊದಲಾದ ವಿವರಗಳನ್ನು ನೀಡಿದರೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ತಿಳಿದುಕೊಳ್ಳಬಹುದು.

ಗೃಹಲಕ್ಷ್ಮಿ 8ನೇ ಕಂತಿನ ಬಿಗ್ ಅಪ್ಡೇಟ್; ಈ ಮಹಿಳೆಯರಿಗೆ ಹಣ ಜಮಾ ಆಗೋದು ಡೌಟ್

ಇಂದು ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ನೀವಿನ್ನು ರೇಷನ್ ಕಾರ್ಡ್ ಹೊಂದಿಲ್ಲದೆ ಇದ್ದರೆ ಏಪ್ರಿಲ್ ಒಂದರಿಂದ ಅರ್ಜಿ ಸಲ್ಲಿಸಬಹುದು ಹಾಗೂ ಇದಕ್ಕಾಗಿ ಕೆಲವು ಪ್ರಮುಖ ದಾಖಲೆಗಳಾಗಿರುವ ಕುಟುಂಬದ ಸದಸ್ಯರ ವಿವರ, ಆಧಾರ್ ಕಾರ್ಡ್ ವಿಳಾಸ ಪುರಾವೆ, ಮೊದಲಾದವುಗಳನ್ನು ಸಿದ್ಧಪಡಿಸಿಕೊಳ್ಳಿ.

ಅಪ್ಲೈ ಮಾಡಿದ ಎಲ್ಲರಿಗೂ ಸಿಗಲ್ಲ ರೇಷನ್ ಕಾರ್ಡ್, ಇಂತವರಿಗೆ ಮಾತ್ರ ಹೊಸ ಕಾರ್ಡ್

Check your ration card status on mobile Online

Follow us On

FaceBook Google News

Check your ration card status on mobile Online