ಭಾರತ ಕೃಷಿಯನ್ನ ನೆಚ್ಚಿಕೊಂಡಿರುವ ರಾಷ್ಟ್ರ. ಇಲ್ಲಿ ಕೋಟ್ಯಾಂತರ ರೈತರು ಕೃಷಿ ಚಟುವಟಿಕೆ (agriculture activities) ಗಳಲ್ಲಿ ತೊಡಗಿಕೊಂಡಿದ್ದಾರೆ ಆದರೆ ಸ್ವಂತ ಜಮೀನು (Own Property) ಹೊಂದಿರುವ ರೈತರ ಸಂಖ್ಯೆ ಕಡಿಮೆ ಎನ್ನಬಹುದು
ಸಾಕಷ್ಟು ಜನ ಸರ್ಕಾರಿ ಭೂಮಿಯಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ, ಹಾಗಾಗಿ ಇವರೆಲ್ಲರೂ ಕೃಷಿಕರೇ ಆಗಿದ್ದರು ಕೂಡ ಅವರ ಹೆಸರಿನಲ್ಲಿ ಮಾತ್ರ ಜಮೀನು ಇರುವುದಿಲ್ಲ.
ಸಾಮಾನ್ಯವಾಗಿ ಸರ್ಕಾರಿ ಭೂಮಿ (government land) ಯಲ್ಲಿ ಇರುವ ರೈತರು ಕೆಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸಿಕೊಂಡು ಬಂದರೆ ಆ ಭೂಮಿಯನ್ನು ಸರ್ಕಾರ ಅವರಿಗೆ ಬಿಟ್ಟುಕೊಡುತ್ತದೆ.
ನಿಮ್ಮ ರೇಷನ್ ಕಾರ್ಡ್ E-KYC ಆಗಿದೆಯಾ ಇಲ್ವಾ? ಈ ರೀತಿ ಸುಲಭವಾಗಿ ಚೆಕ್ ಮಾಡಿಕೊಳ್ಳಿ
ಆದರೆ ಕೃಷಿಕರು ಮತ್ತು ಅರಣ್ಯ ಇಲಾಖೆ (Forest department) ಯ ನಡುವೆ ಯಾವಾಗಲೂ ಜಟಾಪಟಿ ನಡೆಯುತ್ತಲೇ ಇರುತ್ತದೆ. ಇದಕ್ಕೆ ಕಾರಣ ಅರಣ್ಯ ಪ್ರದೇಶ ಎಂದು ಘೋಷಿಸಲಾಗಿರುವ ಪ್ರದೇಶದ ಅಂಚಿನಲ್ಲಿ ಕೃಷಿ ಚಟುವಟಿಕೆಯಲ್ಲಿ ಸಾಕಷ್ಟು ರೈತರು ತೊಡಗಿಕೊಂಡಿದ್ದಾರೆ.
ಹಾಗಾಗಿ ಈ ಭೂಮಿ ಕಂದಾಯ ಇಲಾಖೆ (revenue department) ಗೆ ಸೇರುತ್ತದೆಯೋ ಅಥವಾ ಅರಣ್ಯ ಇಲಾಖೆಗೋ ಎನ್ನುವ ಗೊಂದಲ ಇರುತ್ತದೆ. ಕಂದಾಯ ಇಲಾಖೆಗೆ ಸೇರಿದ ಭೂಮಿ ಆಗಿದ್ದರೆ ಅದನ್ನು ರೈತರಿಗೆ ಒದಗಿಸುವ ಬಗ್ಗೆ ಕಂದಾಯ ಇಲಾಖೆ ಯೋಚನೆ ಮಾಡಿದೆ.
ಜಂಟಿ ಸರ್ವೆ ಮಾಡಲು ಮುಂದಾದ ಸರ್ಕಾರ! (Joint survey)
ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ನಡುವೆ ಜಾಗದ ಬಗ್ಗೆ ವ್ಯಾಜ್ಯಗಳು ಇದ್ದಿದ್ದೆ. ಇದೀಗ ಅರಣ್ಯ ಇಲಾಖೆಯ ಭೂಮಿಯ ಅಂಚಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಅನ್ಯಾಯ ಆಗಬಾರದು ಎನ್ನುವ ಕಾರಣಕ್ಕೆ ಕಂದಾಯ ಇಲಾಖೆ ಅರಣ್ಯ ಭೂಮಿ (forest land) ಮತ್ತು ಕಂದಾಯ ಭೂಮಿ ಸರ್ವೆ ಮಾಡಲು ಮುಂದಾಗಿದೆ ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣ ಭೈರೇಗೌಡ (revenue minister Krishna bairagowda) ತಿಳಿಸಿದ್ದಾರೆ.
ಗೃಹಲಕ್ಷ್ಮಿ 8ನೇ ಕಂತಿನ ಬಿಗ್ ಅಪ್ಡೇಟ್; ಈ ಮಹಿಳೆಯರಿಗೆ ಹಣ ಜಮಾ ಆಗೋದು ಡೌಟ್
ಇದರಿಂದಾಗಿ ಕೃಷಿ ಮಾಡುವ ರೈತರು ಕಂದಾಯ ಇಲಾಖೆಯ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದರೆ ಅರಣ್ಯ ಇಲಾಖೆ ಅಂತವರಿಗೆ ಅಡ್ಡಿ ಪಡಿಸುವಂತೆ ಇಲ್ಲ.
ಸಚಿವರು ನೀಡಿರುವ ಮಾಹಿತಿಯ ಪ್ರಕಾರ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಗಡಿ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಸರ್ವೇ ಮಾಡಲು ಸರ್ಕಾರ ಮುಂದಾಗಿದೆ. ಈ ಗಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಡ್ರೋನ್ (drone) ಮೊದಲಾದ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ವೇ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಅಪ್ಲೈ ಮಾಡಿದ ಎಲ್ಲರಿಗೂ ಸಿಗಲ್ಲ ರೇಷನ್ ಕಾರ್ಡ್, ಇಂತವರಿಗೆ ಮಾತ್ರ ಹೊಸ ಕಾರ್ಡ್
ಈ ಪ್ರದೇಶಗಳಲ್ಲಿ ನಡೆಯಲಿದೆ ಸರ್ವೆ!
ರಾಜ್ಯಾದ್ಯಂತ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿ ನಡುವೆ ಎಲ್ಲಿ ಗಡಿ ಸಮಸ್ಯೆ ಇದೆಯೋ, ಅಂತಹ ಎಲ್ಲಾ ಪ್ರದೇಶಗಳಲ್ಲಿಯೂ ಕೂಡ ಸರ್ವೇ ನಡೆಸಲಾಗುವುದು, ಆದರೆ ಈಗ ಆರಂಭದಲ್ಲಿ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಆರಂಭಿಸಲಾಗುವುದು.
ಗಡಿಯ ಸರ್ವೆಯಾದ ನಂತರ ಕಂದಾಯ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವ ರೈತರು ಫಾರಂ 57 ಭರ್ತಿ ಮಾಡಿ ಬಗೇರ್ ಹುಕುಂ ಬಗ್ಗೆ ಅರ್ಜಿ ಸಲ್ಲಿಸಿ ಹಕ್ಕು ಪತ್ರ ಪಡೆದುಕೊಳ್ಳಬಹುದು ಎಂದು ಸಚಿವರು ರೈತರಿಗೆ ಶುಭ ಸುದ್ದಿ ನೀಡಿದ್ದಾರೆ.
ಅನ್ನಭಾಗ್ಯ ಯೋಜನೆ ಅಪ್ಡೇಟ್; ಪೆಂಡಿಂಗ್ ಇರೋ ಹಣ ಯಾವಾಗ ಜಮಾ! ಇಲ್ಲಿದೆ ಮಾಹಿತಿ
Such farmers will get land allotment and Hakku Patra from the government
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.