Karnataka NewsBangalore News

ಅಪ್ಲೈ ಮಾಡಿದ ಎಲ್ಲರಿಗೂ ಸಿಗಲ್ಲ ರೇಷನ್ ಕಾರ್ಡ್, ಇಂತವರಿಗೆ ಮಾತ್ರ ಹೊಸ ಕಾರ್ಡ್

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಗಾಗ ಸಾರ್ವಜನಿಕರಿಗೆ ಪಡಿತರ ಚೀಟಿ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ಡೇಟ್ ಗಳನ್ನು ಕೊಡುತ್ತಿರುತ್ತದೆ. ಇದೀಗ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (food minister KH muniyappa) ಅವರು ತಿಳಿಸಿರುವಂತೆ ಸದ್ಯದಲ್ಲಿಯೇ ಬಿಪಿಎಲ್ (BPL Ration card) ಹಾಗೂ ಎಪಿಎಲ್ (APL card) ರೇಷನ್ ಕಾರ್ಡ್ ವಿತರಣೆ ಕಾರ್ಯ ಆರಂಭವಾಗಲಿದೆ.

ಅನ್ನಭಾಗ್ಯ ಯೋಜನೆ ಅಪ್ಡೇಟ್; ಪೆಂಡಿಂಗ್ ಇರೋ ಹಣ ಯಾವಾಗ ಜಮಾ! ಇಲ್ಲಿದೆ ಮಾಹಿತಿ

BPL Ration Card

ಎಲ್ಲರಿಗೂ ಸಿಗಲ್ಲ ಹೊಸ ರೇಷನ್ ಕಾರ್ಡ್!

ಈಗಾಗಲೇ ಅರ್ಜಿ ಸಲ್ಲಿಕೆ ಆಗಿದ್ದು ಸುಮಾರು ಮೂರು ಲಕ್ಷಗಳಷ್ಟು. ಹಾಗಾಗಿ ಇಷ್ಟು ರೇಷನ್ ಕಾರ್ಡ್ ಪರಿಶೀಲನೆ ನಡೆಸಿ ಏಪ್ರಿಲ್ ಒಂದರಿಂದ ವಿತರಣೆ ಕಾರ್ಯ ಶುರು ಮಾಡಲಿದೆ ಸರ್ಕಾರ. ಇದರ ಜೊತೆಗೆ ಗುಡ್ ನ್ಯೂಸ್ ಅಂದ್ರೆ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೂ ಕೂಡ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ.

ಹಾಗಾಗಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಪಡೆದುಕೊಳ್ಳಲು ಬಯಸುವವರು ಅವರ ಅರ್ಹತೆಯ ಮೇರೆಗೆ ಆಯಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು.

ಹಾಗಂದ ಮಾತ್ರಕ್ಕೆ ಎಲ್ಲರೂ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಹಾಗಾದ್ರೆ ಯಾರು ಅರ್ಜಿ ಸಲ್ಲಿಸಬಹುದು ನೋಡೋಣ.

* ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು

* ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು

* ಸರ್ಕಾರಿ ನೌಕರಿಯಲ್ಲಿ ಇರಬಾರದು ಆದಾಯ ತೆರಿಗೆ ಪಾವತಿ ಮಾಡುವವರಾಗಿರಬಾರದು

* ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ರೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

* ಮದುವೆಯಾಗಿ ಹೊಸದಾಗಿ ಜೀವನ ನಡೆಸುವ ಗಂಡ ಹೆಂಡತಿ ಕುಟುಂಬದಿಂದ ಪ್ರತ್ಯೇಕವಾಗಿ ವಾಸ ಮಾಡುವುದಾದರೆ ಹಾಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

* ಅರ್ಜಿ ಸಲ್ಲಿಸುವವರ ಆದಾಯದ ಆಧಾರದ ಮೇಲೆ ಬಿಪಿಎಲ್ ಮತ್ತು ಎಪಿಎಲ್ ಕಾರ್ಡಿಗೆ ಎಂದು ವರ್ಗೀಕರಿಸಿ ಅದಕ್ಕೆ ತಕ್ಕ ಹಾಗೆ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆ ಅಪ್ಡೇಟ್; 8ನೇ ಕಂತಿನ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ

BPL Ration Cardಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ವಿಳಾಸದ ಪುರಾವೆಗಾಗಿ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸನ್ಸ್
ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಪಾಸ್ಪೋರ್ಟ್ ಅಳತೆಯ ಫೋಟೋ

ರೇಷನ್ ಕಾರ್ಡ್ ಅರ್ಜಿಗೆ ಈ ದಾಖಲೆಗಳು ಕಡ್ಡಾಯ; ಕೆಲವೇ ದಿನಗಳು ಮಾತ್ರ ಅವಕಾಶ

ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ!

ಸರ್ಕಾರ ತಿಳಿಸಿರುವ ಮಾಹಿತಿಯ ಪ್ರಕಾರ ಏಪ್ರಿಲ್ ಒಂದು 2024ಕ್ಕೆ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು. ಜೊತೆಗೆ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವವರೆಗೂ ಕೂಡ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ.

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಎಲ್ಲಾ ಸಮಯದಲ್ಲಿಯೂ ವೆಬ್ಸೈಟ್ ಸರ್ವರ್ ಸಮಸ್ಯೆಯಿಂದಾಗಿ ತೆರೆದುಕೊಳ್ಳದೆ ಇರುವ ಸಾಧ್ಯತೆ ಇರುತ್ತದೆ.

ಆದ್ದರಿಂದ ನೀವು ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಾದರೆ ಹತ್ತಿರದ ಸೇವಾಕೇಂದ್ರ ಗಳಿಗೆ ಹೋಗಿ ಸರಿಯಾದ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸುವುದು ಒಳ್ಳೆಯದು.

ಆರ್‌ಟಿಇ ಅಡಿ ನಿಮ್ಮ ಮಕ್ಕಳನ್ನು ಉಚಿತವಾಗಿ ಖಾಸಗಿ ಶಾಲೆಗೆ ಸೇರಿಸಿ! ಇಲ್ಲಿದೆ ಮಾಹಿತಿ

ಏಪ್ರಿಲ್ ಒಂದಕ್ಕೆ ಇನ್ನು ಜಾಸ್ತಿ ದಿನ ಸಮಯ ಇಲ್ಲ ಹಾಗಾಗಿ ಮೇಲೆ ಹೇಳಿರುವ ದಾಖಲೆಗಳನ್ನು ಒರಿಜಿನಲ್ ಮತ್ತು ಝರಾಕ್ಸ್ ಕಾಪಿ ರೆಡಿ ಮಾಡಿ ಇಟ್ಟುಕೊಳ್ಳಿ. ಸರ್ಕಾರದ ಅಧಿಕೃತ ಘೋಷಣೆ ಆದ ನಂತರ ನೀವು ಕೂಡ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

Not everyone who applied will get a ration card, only such people will get a new card

Our Whatsapp Channel is Live Now 👇

Whatsapp Channel

Related Stories