ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಯಾವಾಗ ಜಾರಿಗೆ ಬಂದಿದೆಯೋ ಅಲ್ಲಿಂದ ಇಲ್ಲಿಯವರೆಗೆ ಮಹಿಳೆಯರ ಖಾತೆಯಲ್ಲಿ (Bank Account) ಒಂದಷ್ಟು ಹಣ ಸಂಗ್ರಹ ಆಗಿದ್ದಂತೂ ಸುಳ್ಳಲ್ಲ. ಯಾಕಂದ್ರೆ ಇಲ್ಲಿಯವರೆಗೆ ಏಳು ಕಂತಿನ ಹಣ ಬಿಡುಗಡೆ ಆಗಿದ್ದು ಮಹಿಳೆಯರ ಖಾತೆಯಲ್ಲಿ (bank account) ಉಚಿತವಾಗಿ 14,000 ರೂಪಾಯಿಗಳು ಸಂಗ್ರಹ ಆಗಿವೆ.

“ನಾವು ಮನೆಯಲ್ಲಿ ಕುಳಿತುಕೊಂಡರೆ ಇಷ್ಟು ಹಣವನ್ನು ಯಾರು ಕೊಡುತ್ತಿರಲಿಲ್ಲ. ಆದರೆ ಸರ್ಕಾರದಿಂದ ಈಗ ಉಚಿತವಾಗಿ 2000 ಪ್ರತಿ ತಿಂಗಳು ಖಾತೆಗೆ ಬರ್ತಾ ಇದೆ” ಅಂತ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಖುಷಿಯಿಂದ ಹೇಳಿಕೊಳ್ಳುತ್ತಾರೆ.

Gruha Lakshmi money received only 2,000, Update About Pending Money

ರೇಷನ್ ಕಾರ್ಡ್ ಅರ್ಜಿಗೆ ಈ ದಾಖಲೆಗಳು ಕಡ್ಡಾಯ; ಕೆಲವೇ ದಿನಗಳು ಮಾತ್ರ ಅವಕಾಶ

ಆದರೆ ಇನ್ನೊಂದು ಕಡೆ “ಅರ್ಜಿಯನ್ನು ಸಲ್ಲಿಸಿ ಯಾವ ಕಾಲ ಆಯ್ತು ಎಲ್ಲ ದಾಖಲೆಗಳು ಸರಿಯಾಗಿ ಇದೆ ಆದರೂ ನಮಗೆ ಮಾತ್ರ ಹಣ ಬಂದಿಲ್ಲ” ಅಂತ ಇನ್ನೊಂದಿಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ನೀವು ಬ್ಯಾಂಕ್ ನಲ್ಲಿ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಂಡ್ರೆ ತಪ್ಪದೇ ನಿಮ್ಮ ಖಾತೆಗೆ ಹಣ ವರ್ಗಾವಣೆ (DBT) ಆಗುತ್ತದೆ ಎಂದು ಸರ್ಕಾರವು ಈಗಾಗಲೇ ಭರವಸೆ ನೀಡಿದೆ.

ಬ್ಯಾಂಕ್ ನಲ್ಲಿ ನೀವು ಮಾಡಲೇಬೇಕಾದ ಕೆಲಸಗಳು ಇವು!

* ಈಕೆ ವೈ ಸಿ (E-KYC update) ಎನ್ನುವುದು ಕಡ್ಡಾಯವಾಗಿರುವುದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ ಅಪ್ಡೇಟ್ ಮಾಡಿಸಿ.

* ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳುವುದು ಮುಖ್ಯ ಜೂನ್ 14, 2024ರ ವರೆಗೆ ಮಾತ್ರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಅವಕಾಶ ಇದೆ. ಆಧಾರ್ ಕಾರ್ಡ್ ಅಪ್ಡೇಟ್ ಆಗದಿದ್ದರೆ ನಿಮ್ಮ ಬ್ಯಾಂಕ್ ನ ಯಾವ ಕೆಲಸಗಳು ಕೂಡ ಸಂಪೂರ್ಣ ಕೊಡುವುದಿಲ್ಲ.

* ಈಕೆ ವೈ ಸಿ ಮಾಡಿಸಿಕೊಂಡಿದ್ದರು ಕೂಡ ಹಣ ಬಾರದೆ ಇರುವವರು ಬ್ಯಾಂಕ್ ಗೆ ಹೋಗಿ ಎನ್ ಪಿ ಸಿ ಐ ಮ್ಯಾಪಿಂಗ್ ಕೂಡ ಮಾಡಿಸಿಕೊಳ್ಳಬೇಕು.

* ಇದರ ಜೊತೆಗೆ ರೇಷನ್ ಕಾರ್ಡ್ ಮತ್ತೆ ಆಧಾರ್ ಕಾರ್ಡ ಲಿಂಕ್ ಆಗುವುದು ಕೂಡ ಕಡ್ಡಾಯವಾಗಿದೆ.

ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಆಟೋಮೆಟಿಕ್ ಆಗಿ ಬರುವುದರಿಂದ ನಿಮ್ಮ ಡಿಜಿಟಲ್ ದಾಖಲೆಗಳು (digital documents) ಸರಿಯಾಗಿ ಇರುವುದು ಬಹಳ ಮುಖ್ಯ.

ಆರ್‌ಟಿಇ ಅಡಿ ನಿಮ್ಮ ಮಕ್ಕಳನ್ನು ಉಚಿತವಾಗಿ ಖಾಸಗಿ ಶಾಲೆಗೆ ಸೇರಿಸಿ! ಇಲ್ಲಿದೆ ಮಾಹಿತಿ

Gruha Lakshmi Yojanaಅತ್ತೆ ಮರಣ ಹೊಂದಿದ್ರೆ ಸೊಸೆ ಖಾತೆಗೆ ಹಣ ಬರುತ್ತೆ!

ಈಗಾಗಲೇ ಹಲವು ಕಡೆ ಈ ಸಮಸ್ಯೆಯನ್ನು ಕೂಡ ಜನರು ಎದುರಿಸಿದ್ದಾರೆ, ಗೃಹಲಕ್ಷ್ಮಿ ಯೋಜನೆ, ಆರಂಭವಾದಾಗ ಅರ್ಜಿ ಸಲ್ಲಿಸಿದ ಸಾಕಷ್ಟು ಹಿರಿಯ ಮಹಿಳೆಯರು ಮರಣ ಹೊಂದಿದ್ದಾರೆ, ಈ ಹಿನ್ನೆಲೆಯಲ್ಲಿ ಅವರ ಖಾತೆಗೆ ಜಮಾ ಆಗಬೇಕಾದ ಗೃಹಲಕ್ಷ್ಮಿ ಹಣ ಬೇರೆ ಯಾರಿಗೆ ಸಿಗಬೇಕು ಎನ್ನುವ ಗೊಂದಲ ಕುಟುಂಬದವರಲ್ಲಿ ಇತ್ತು.

ಇದಕ್ಕೆ ಸರ್ಕಾರ ಪರಿಹಾರ ತಿಳಿಸಿದ್ದು ಅತ್ತೆ ಇಲ್ಲದೆ ಇದ್ದಲ್ಲಿ ಮನೆಯ ಹಿರಿಯ ಸೊಸೆ ತನ್ನ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಇನ್ನು ನಿಮ್ಮಲ್ಲಿ ಯಾವುದೇ ಗೊಂದಲಗಳಿದ್ದರೆ ಖಾತೆಗೆ ಹಣ ಬಾರದೆ ಇರುವುದಕ್ಕೆ ಕಾರಣ ತಿಳಿಯದೆ ಇದ್ದರೆ ಹತ್ತಿರದ ಸಿಡಿಪಿಓ (CDPO) ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಕೇಳಿ ಮಾಹಿತಿ ತಿಳಿದುಕೊಳ್ಳಿ ಹಾಗೂ ಅವರ ಮಾರ್ಗದರ್ಶನದಲ್ಲಿ ನೀವು ಅಗತ್ಯ ಇರುವ ಬದಲಾವಣೆಗಳನ್ನು ಮಾಡಿಕೊಂಡರೆ ತಪ್ಪದೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಉಚಿತ ಕರೆಂಟ್ ಸೌಲಭ್ಯ ಸಿಗೋದಿಲ್ಲ

ಎಂಟನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಸಿದ್ಧತೆ!

ಎಲ್ಲರಿಗೂ ತಿಳಿದಿರುವಂತೆ 7ನೇ ಕಂತಿನ ಗೃಹಲಕ್ಷ್ಮಿ ಹಣ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಿದೆ. ಇನ್ನು ಎಲ್ಲರ ಖಾತೆಗೆ ಹಣ ಬಾರದೆ ಇರಬಹುದು. ಆದರೆ ಮಾರ್ಚ್ 31ರ ಒಳಗೆ ಏಳನೇ ಕಂತಿನ ಹಣ ಫಲಾನುಭವಿಗಳ ಖಾತೆ ಸೇರುತ್ತದೆ. ಇನ್ನು 8ನೇ ಕಂತಿನ ಹಣವು ಕೂಡ ಸದ್ಯದಲ್ಲಿಯೇ ಬಿಡುಗಡೆ ಆಗಲಿದ್ದು ಏಪ್ರಿಲ್ ಮೊದಲ ವಾರದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣವನ್ನು ನಿರೀಕ್ಷಿಸಬಹುದು.

ಈ 3 ದಾಖಲೆಗಳನ್ನು ಕೊಟ್ಟು ಪೆಂಡಿಂಗ್ ಗೃಹಲಕ್ಷ್ಮಿ ಹಣ ಪಡೆಯಿರಿ! ಹೊಸ ಅಪ್ಡೇಟ್

Gruha Lakshmi Yojana Update, Here is the information about the 8th installment money release