ನೀವು ಗೃಹಲಕ್ಷ್ಮಿ ಯೋಜನೆಗೆ (Gruha lakshmi scheme) ಅರ್ಜಿ ಸಲ್ಲಿಸಿದ್ದು, ನಿಮ್ಮ ಖಾತೆಗೆ ಇದುವರೆಗೆ ಹಣ ಬಂದಿಲ್ವಾ ಅಥವಾ ಮೊದಲ ಒಂದೆರಡು ಕಂತಿನ ಹಣ ಬಂದಿದ್ದು ಈಗ ಬಿಡುಗಡೆ ಆಗುತ್ತಿರುವ 6 ಮತ್ತು 7ನೇ ಕಂತಿನ ಹಣ ನಿಮ್ಮ ಖಾತೆಯನ್ನು (Bank Account) ತಲುಪಿಲ್ವಾ?

ಹಾಗೇನಾದ್ರೂ ನೀವು ಸಮಸ್ಯೆ ಅನುಭವಿಸ್ತಾ ಇದ್ರೆ ಈ ಸುದ್ದಿ ನಿಮಗಾಗಿ. ನೀವು ಕೇವಲ ಈ ಮೂರು ದಾಖಲೆಗಳನ್ನು ನೀಡುವುದರ ಮೂಲಕ ನಿಮ್ಮ ಖಾತೆಗೆ ಪೆಂಡಿಂಗ್ (pending amount) ಇರುವ ಹಣವು ಕೂಡ ಬಿಡುಗಡೆ ಆಗುವಂತೆ ಮಾಡಿಕೊಳ್ಳಬಹುದು.

Gruha Lakshmi Yojana money will Deposit on the same day every month

ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ ವಿತರಣೆ ಪ್ರಕ್ರಿಯೆ ಸ್ಥಗಿತಗೊಳ್ಳುವುದಿಲ್ಲ! ಇಲ್ಲಿದೆ ಅಪ್ಡೇಟ್

ಮಹಿಳೆಯರ ಮೆಚ್ಚುಗೆ ಪಡೆದ ಗೃಹಲಕ್ಷ್ಮಿ ಯೋಜನೆ!

ರಾಜ್ಯ ಸರ್ಕಾರ (State Congress government) ಅಧಿಕಾರಕ್ಕೆ ಬಂದ ಕೇವಲ ಮೂರು ತಿಂಗಳುಗಳಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿತು. ಇದೀಗ ಈ ಯೋಜನೆ ಆರಂಭವಾಗಿ ಏಳು ತಿಂಗಳು ಕಳೆದಿದೆ. ಹಾಗೂ ಮಹಿಳೆಯರ ಖಾತೆಗೆ 12 ರಿಂದ 14,000 ಉಚಿತವಾಗಿ ಜಮಾ ಆಗಿವೆ. ಇದರಿಂದ ಮಹಿಳೆಯರು ಸ್ವಾವಲಂಬಿ ಜೀವನ (independent life) ನಡೆಸಲು ಸಹಕಾರಿಯಾಗಿದೆ.

ಆದರೆ ಇವರಿಗೆ ಮಾತ್ರ ಬಂದಿಲ್ವಲ್ಲ ಹಣ!

ಹೌದು, 80% ಮಹಿಳೆಯರು ಕಳೆದ ಆರು ತಿಂಗಳ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಆದರೆ ದುರದೃಷ್ಟವಶಾತ್ ಅರ್ಜಿ ಸಲ್ಲಿಸಿದ ನಂತರ ಶೇಕಡ 20ರಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರದ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿಯನ್ನು ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದ್ಯಾ? ತಿಳಿಯೋಕೆ ಇಲ್ಲಿದೆ ಡೈರೆಕ್ಟ್ ಲಿಂಕ್

ಹಣ ಬಾರದೆ ಇರುವವರು ಈ ಕೆಲಸ ಮಾಡಬೇಕು!

ಸಚಿವೆ ತಿಳಿಸಿರುವ ಪ್ರಕಾರ ಇಲ್ಲಿಯವರೆಗೆ ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಈ ಕೆಲವು ದಾಖಲೆಗಳನ್ನು ಪರಿಶೀಲಿಸುವುದು ಅಗತ್ಯ ಎಂದು ಹೇಳಿದ್ದಾರೆ. ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ರೇಷನ್ ಕಾರ್ಡ್ ಈ ಮೂರನ್ನು ತೆಗೆದುಕೊಂಡು ಹತ್ತಿರದ ಸೇವ ಕೇಂದ್ರಕ್ಕೆ ಹೋಗಿ ನಿಮ್ಮ ದಾಖಲೆಗಳು (documents) ಸರಿಯಾಗಿ ಇವೆಯಾ ಎನ್ನುವುದನ್ನು ಚೆಕ್ ಮಾಡಬೇಕು.

Gruha Lakshmi Yojanaಅದೇ ರೀತಿ ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ (bank passbook update) ಮಾಡಿಸಿಕೊಳ್ಳುವುದರ ಮೂಲಕ ಬ್ಯಾಂಕು ಖಾತೆಯಲ್ಲಿ ಏನಾದರೂ ಸಮಸ್ಯೆ ಇದಿಯಾ ಎನ್ನುವುದನ್ನು ತಿಳಿದುಕೊಳ್ಳಬೇಕು.

ಒಂದು ವೇಳೆ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದು ಕೆ ವೈ ಸಿ ಪ್ರಕ್ರಿಯೆ (KYC process) ಪೂರ್ಣಗೊಂಡಿರದೇ ಇದ್ದರೆ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಹೊಸ ಖಾತೆ ತೆರೆಯುವುದು ಸೂಕ್ತ ಎಂದು ತಿಳಿಸಲಾಗಿದೆ.

ಗೃಹಜ್ಯೋತಿ ಫ್ರೀ ವಿದ್ಯುತ್ ಯೋಜನೆಯ ಬಿಗ್ ಅಪ್ಡೇಟ್; ಪಾವತಿಸಬೇಕು ಸಂಪೂರ್ಣ ಬಿಲ್

ಈಗಾಗಲೇ ಅರ್ಜಿ ಸಲ್ಲಿಸಿರುವವರು ತಮ್ಮ ಅರ್ಜಿ ಪರಿಶೀಲನೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸಿಡಿಪಿಓ ಕಚೇರಿಗೆ (CDPO officer) ಹೋಗಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಪರಿಶೀಲನೆ ಮಾಡಿಸಿ ನೀವು ಕೊಟ್ಟ ದಾಖಲೆಗಳು ತಪ್ಪಾಗಿದ್ದಲ್ಲಿ ನಿಮ್ಮ ಅರ್ಜಿ ಸರ್ಕಾರಕ್ಕೆ ಸಂದಾಯವಾಗಿರುವುದಿಲ್ಲ.

ಈ ಕಾರಣಕ್ಕಾಗಿ ನಿಮ್ಮ ಖಾತೆಗೆ ಹಣ ಬಾರದೆ ಇರಬಹುದು. ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ನಿರಾಶರಾಗುವ ಅಗತ್ಯವಿಲ್ಲ. ಬದಲಿಗೆ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ನೀವು ನೀಡಿರುವ ದಾಖಲೆಗಳು ಸರಿಯಾಗಿ ಇದ್ರೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆಟೋಮ್ಯಾಟಿಕ್ ಆಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಖಾತೆಗೆ ಸರ್ಕಾರದಿಂದ ಹಣ ಜಮಾ ಆಗುತ್ತದೆ. ಪ್ರ

ತಿಯೊಂದು ಜಿಲ್ಲೆಯಲ್ಲಿಯೂ ಕೂಡ ಮಹಿಳೆಯರು ಹಣ ಪಡೆದುಕೊಳ್ಳುತ್ತಿದ್ದಾರೆ. ನಿಮ್ಮ ಖಾತೆಗೆ ಹಣ ಬಾರದೆ ಇದ್ರೆ ಮಾರ್ಚ್ 31 ನೇ ತಾರೀಖಿನವರೆಗೆ ಕಾದು ನಿಮ್ಮ ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಮಾಡಿಸಿ, ಆಗಲೂ ಹಣ ಬಾರದೆ ಇದ್ರೆ ಸಿಡಿಪಿಒ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಗೃಹಲಕ್ಷ್ಮಿ ಹಣ ಯಾರಿಗೆ ಬಂತು, ಯಾರಿಗೆ ಬಂದಿಲ್ಲ! ರೇಷನ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಿ

Submit these 3 documents and get pending Gruha Lakshmi Scheme money