Karnataka NewsBangalore News

ಗೃಹಜ್ಯೋತಿ ಫ್ರೀ ವಿದ್ಯುತ್ ಯೋಜನೆಯ ಬಿಗ್ ಅಪ್ಡೇಟ್; ಪಾವತಿಸಬೇಕು ಸಂಪೂರ್ಣ ಬಿಲ್

ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ (Gruha jyothi Yojana) ಯನ್ನು ಜಾರಿಗೆ ತಂದ ನಂತರ ಲಕ್ಷಾಂತರ ಕುಟುಂಬಗಳು ಕಳೆದ ಸುಮಾರು ಆರು ತಿಂಗಳುಗಳಿಂದ ಒಂದೇ ಒಂದು ರೂಪಾಯಿ ಕರೆಂಟ್ ಬಿಲ್ಲು (Electricity Bill) ಕಟ್ಟದೆ ಆರಾಮಾಗಿ ವಿದ್ಯುತ್ ಬಳಕೆ ಮಾಡಿಕೊಂಡಿದ್ದಾರೆ.

ನೀವು ಮನೆಯ ಮಾಲೀಕರಾಗಿರಬಹುದು ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವವರು ಆಗಿರಬಹುದು ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳಲು ಎಲ್ಲರೂ ಅರ್ಹರು. ಇದಕ್ಕಿರುವ ಒಂದು ಮಾನದಂಡ ಅಂದ್ರೆ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡಬೇಕು.

New rule to get free electricity for rent House beneficiaries

ಗೃಹಲಕ್ಷ್ಮಿ ಹಣ ಯಾರಿಗೆ ಬಂತು, ಯಾರಿಗೆ ಬಂದಿಲ್ಲ! ರೇಷನ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಿಕೊಳ್ಳಿ

ಹೆಚ್ಚಾಗುತ್ತಿದೆ ವಿದ್ಯುತ್ ಬಳಕೆ! (Electricity usage increased)

ದೇಶದಲ್ಲಿ ಸಾಕಷ್ಟು ಬಿಸಿಲಿನ ತಾಪಮಾನ ಹೆಚ್ಚಾಗಿದೆ, 40° ಸೆಲ್ಸಿಯಸ್ ವರೆಗೆ ಕೆಲವು ನಗರಗಳಲ್ಲಿ ತಾಪಮಾನ ದಾಖಲಾಗಿದೆ. ಇದರಿಂದಾಗಿ ನೀರಿನ ಅಭಾವದಿಂದಾಗಿ ವಿದ್ಯುತ್ ಅಭಾವ ಕೂಡ ಎದುರಾಗಿದೆ.

ಕೃಷಿ ಭೂಮಿಗೆ ನೀರು ಒದಗಿಸಲು ಕೂಡ ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ದೆ ಎಲ್ಲ ಉದ್ಯಮಗಳು ನೀರಿಲ್ಲದೆ ಸಮಸ್ಯೆ ಅನುಭವಿಸುವಂತೆ ಆಗಿದೆ. ಇದರ ಜೊತೆಗೆ ನೀರಿನ ಅಭಾವದಿಂದ ವಿದ್ಯುತ್ ಉತ್ಪಾದನೆ ಆಗದೆ ಇರುವುದಕ್ಕೆ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ (power generation) ಆಗುತ್ತಿಲ್ಲ. ಆದರೆ ವಿದ್ಯುತ್ ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಏಪ್ರಿಲ್ 1ರಿಂದಲೇ ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ! ಆದ್ರೆ ಈ ದಾಖಲೆಗಳು ಕಡ್ಡಾಯ

Electricity billಹೆಚ್ಚುವರಿ ವಿದ್ಯುತ್ ಬಿಲ್ ಪಾವತಿ ಮಾಡಬೇಕು!

ಬೆಸ್ಕಾಂ ನೀಡಿರುವ ವರದಿಯ ಪ್ರಕಾರ ಈ ಬಾರಿ ವಿದ್ಯುತ್ ಉತ್ಪಾದನೆ ಆಗಿರುವ ಮೂರು ಪಟ್ಟು ಹೆಚ್ಚು ವಿದ್ಯುತ್ ಬಳಕೆ ಆಗಿದೆ. ಒಂದು ವರ್ಷದ ಅವಧಿಯಲ್ಲಿ 31,111 ಮಿಲಿಯನ್ ಯೂನಿಟ್ ಬಳಕೆ ಮಾಡಲಾಗಿದೆ.

ಗೃಹ ಜ್ಯೋತಿ ಫಲಾನುಭವಿಗಳು 1.20 ಕೋಟಿ. ಇತ್ತೀಚಿನ ವರದಿಯ ಪ್ರಕಾರ 40607 ಮಿಲಿಯನ್ ಯೂನಿಟ್ ಬಳಕೆ ಆಗಿದೆ. ಕೇವಲ ಒಂದು ತಿಂಗಳಲ್ಲಿ 10,000 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ.

ಇನ್ಮುಂದೆ ಎಲ್ಲರಿಗೂ ಸಿಗೋಲ್ಲ ಉಚಿತ ಕರೆಂಟ್! ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ

ಎಲ್ಲರೂ ಪಾವತಿಸಬೇಕು ಬಿಲ್!

ಇದೀಗ ಬೆಸ್ಕಾಂ ತಿಳಿಸಿರುವಂತೆ ಜಾಸ್ತಿ ವಿದ್ಯುತ್ ಬಳಕೆ ಮಾಡಿದರೆ ಪ್ರತಿ ಒಬ್ಬರು ಸಂಪೂರ್ಣ ಬಿಲ್ ಪಾವತಿ ಮಾಡಬೇಕು. ಬೇಸಿಗೆ ಕಾಲ ಆಗಿರುವುದರಿಂದ ಅದರಲ್ಲೂ ತಾಪಮಾನ ಹೆಚ್ಚಾಗಿರುವುದರಿಂದ ಎಸಿ, ಕೂಲರ್, ಫ್ಯಾನ್ ಬಳಕೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ.

24 ಗಂಟೆ ವಿದ್ಯುತ್ ಬಳಕೆ ಮಾಡಿದರೆ ವಿದ್ಯುತ್ ಬಿಲ್ ಬಂದೇ ಬರುತ್ತೆ. ಹೆಚ್ಚು ಯೂನಿಟ್ ಬಳಕೆ ಮಾಡಿದಷ್ಟು ನೀವು ಉಚಿತ ವಿದ್ಯುತ್ ಪಡೆದುಕೊಳ್ಳುವ ಸಾಧ್ಯತೆಗಳು ಕೂಡ ಕಡಿಮೆಯಾಗುತ್ತದೆ.

ಹಾಗಾಗಿ ವಿದ್ಯುತ್ ಬಳಕೆ ಮಾಡುವಾಗ ಸ್ವಲ್ಪ ಹಿತಮಿತವಾಗಿ ವಿದ್ಯುತ್ ಬಳಕೆ ಮಾಡಿ. ಇಷ್ಟು ತಿಂಗಳವರೆಗೆ ಉಚಿತ ವಿದ್ಯುತ್ ಪಡೆದು ಈಗ ವಿದ್ಯುತ್ ಬಿಲ್ ಪಾವತಿಸುವಂತೆ ಮಾಡಿಕೊಳ್ಳಬೇಡಿ.

ಬೆಳ್ಳಂಬೆಳ್ಳಗೆ ಬಂತು ರೇಷನ್ ಕಾರ್ಡ್ ಡಿಲೀಟ್ ಸಂದೇಶ! ನಿಮ್ಮ ಕಾರ್ಡ್ ಸ್ಥಿತಿ ಚೆಕ್ ಮಾಡಿ

Big update on Gruha jyothi Free Electricity Scheme, Electricity bill to be Pay

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories