ಇನ್ಮುಂದೆ ಎಲ್ಲರಿಗೂ ಸಿಗೋಲ್ಲ ಉಚಿತ ಕರೆಂಟ್! ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ

ಇಂದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆ (Gruha jyothi scheme) ಅಡಿಯಲ್ಲಿ 200 ಯೂನಿಟ್ ವರೆಗೆ ಸುಲಭವಾಗಿ ಉಚಿತ ವಿದ್ಯುತ್ (free electricity) ಪಡೆದುಕೊಳ್ಳುತ್ತಿರುವವರಿಗೂ ಕೂಡ ವಿದ್ಯುತ್ ಬಿಲ್ ಪಾವತಿಸುವ ಪರಿಸ್ಥಿತಿ ಎದುರಾಗಿದೆ.
ಕಳೆದ ಆರು ತಿಂಗಳಿನಿಂದ ಉಚಿತ ವಿದ್ಯುತ್ ಲಾಭವನ್ನು ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಪಡೆದುಕೊಳ್ಳುತ್ತಿವೆ. ಯಾವುದೇ ಮನೆಯ ಮಾಲೀಕರಿರಬಹುದು ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವವರು ಇರಬಹುದು, ಯಾರು ಬೇಕಾದರೂ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ತು ಪಡೆದುಕೊಳ್ಳಬಹುದು.
ಇದಕ್ಕೆ ಇರಬೇಕಾಗಿರುವ ಒಂದೇ ಒಂದು ಮಾನದಂಡ ಅಂದ್ರೆ ನೀವು 200 ಯೂನಿಟ್ ವಿದ್ಯುತ್ ಬಳಕೆ ಮಾಡಬೇಕು.
ಬೆಳ್ಳಂಬೆಳ್ಳಗೆ ಬಂತು ರೇಷನ್ ಕಾರ್ಡ್ ಡಿಲೀಟ್ ಸಂದೇಶ! ನಿಮ್ಮ ಕಾರ್ಡ್ ಸ್ಥಿತಿ ಚೆಕ್ ಮಾಡಿ
ಹೆಚ್ಚಾಗಿದೆ ವಿದ್ಯುತ್ ಬಳಕೆ! (Electricity usage increased)
ಸರ್ಕಾರ 200 ಯೂನಿಟ್ ವರೆಗೆ ಯಾರು ವಿದ್ಯುತ್ ಬಳಕೆ ಮಾಡುತ್ತಾರೋ ಅಥವಾ 200 ಯೂನಿಟ್ ಗಿಂತ ಕಡಿಮೆ ಯಾರು ವಿದ್ಯುತ್ ಬಳಕೆ ಮಾಡುತ್ತಾರೋ ಅಂತವರಿಗಾಗಿ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು ಕಳೆದ ಏಳು ತಿಂಗಳ ಗಳಿಂದ ಉಚಿತ ವಿದ್ಯುತ್ ನೀಡುತ್ತಿದೆ.
ಸಾಕಷ್ಟು ಕುಟುಂಬಗಳು ಒಂದು ರೂಪಾಯಿ ಕೂಡ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡದೆ ಶೂನ್ಯ ಕರೆಂಟ್ ಬಿಲ್ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ವರದಿಯ ಪ್ರಕಾರ ಈ ಬಾರಿ 20 ಪರ್ಸೆಂಟ್ ನಷ್ಟು ಹೆಚ್ಚಿನ ವಿದ್ಯುತ್ ಬಳಕೆ ಆಗಿದೆ.
ಹೌದು, ಬೇಸಿಗೆಯ ತಾಪಮಾನ (summer temperature) ಇಂದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಆಶ್ಚರ್ಯ ಅಂದ್ರೆ ದೇಶದಲ್ಲಿ ದಾಖಲೆಯ ಮಟ್ಟದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಮಾರ್ಚ್ ತಿಂಗಳಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಲಿದೆ.
ಹೀಗಿರುವಾಗ ಬಿಸಿಲಿನ ಉರಿ, ಸೆಕೆ ತಡೆದುಕೊಳ್ಳಲು ಸಾಧ್ಯವಾಗದೆ. ಎಸಿ, ಫ್ಯಾನ್, ಕೂಲರ್ ಮೊದಲಾದವುಗಳ ಬಳಕೆ ಕೂಡ ಜಾಸ್ತಿಯಾಗಿದೆ. ಮೊದಲು ಬಳಕೆ ಮಾಡುವುದಕ್ಕಿಂತ 20 ಪರ್ಸೆಂಟ್ ನಷ್ಟು ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! 8ನೇ ಕಂತಿನ ಹಣಕ್ಕೆ ಇನ್ನೊಂದು ರೂಲ್ಸ್
ಪಾವತಿಸಬೇಕು ವಿದ್ಯುತ್ ಬಿಲ್
ಈ ರೀತಿ ವಿದ್ಯುತ್ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರಂತೆ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿರುವ ಗ್ರಾಹಕರು ಕೂಡ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಆಗಿದೆ.
ನೀವು ವಾರ್ಷಿಕವಾಗಿ ಸರಾಸರಿ ಎಷ್ಟು ವಿದ್ಯುತ್ ಖರ್ಚು ಮಾಡುತ್ತೀರೋ ಅದರ ಆಧಾರದ ಮೇಲೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಈಗ ಇನ್ನೂರು ಯೂನಿಟ್ ವರೆಗೆ ಆಟೋಮೆಟಿಕ್ ಆಗಿ ವಿದ್ಯುತ್ ಖರ್ಚಾಗುತ್ತಿದೆ. ಎಸಿ ಕೂಲರ್ ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳು ಹೆಚ್ಚು ಕರೆಂಟ್ ಬಳಸಿಕೊಳ್ಳುತ್ತದೆ, ಹೀಗಾಗಿ ವಿದ್ಯುತ್ ಯೂನಿಟ್ ಕೂಡ ಜಾಸ್ತಿ ಬಳಕೆ ಆಗಿರುತ್ತದೆ.
ಕೊನೆಗೂ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!
ಕಂಟ್ರೋಲ್ ಮಾಡಿ ವಿದ್ಯುತ್ ಬಳಕೆ
ನೀವು 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್ ಗೆ 8 ರೂಪಾಯಿಗಳಷ್ಟು ಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ನಿಮಗೆ ಉಚಿತ ವಿದ್ಯುತ್ ಪ್ರಯೋಜನ ಸಿಗುವುದಿಲ್ಲ. ಆದ್ದರಿಂದ ಬಹಳ ಜಾಗರೂಕತೆಯಿಂದ ಕರೆಂಟ್ ಖರ್ಚು ಮಾಡಿದ್ರೆ ಮುಂದೆಯೂ ಕೂಡ ಉಚಿತ ವಿದ್ಯುತ್ ಲಾಭವನ್ನು ಪಡೆದುಕೊಳ್ಳಬಹುದು.
5 ಸ್ಟಾರ್ ರೇಟಿಂಗ್ ಇರುವ ಕೂಲರ್ ಅಥವಾ ಎಸಿ ಕಡಿಮೆ ವಿದ್ಯುತ್ ಬಳಕೆ ಮಾಡುತ್ತವೆ. ಹಾಗಾಗಿ ಅಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನ ಖರೀದಿ ಮಾಡುವುದು ಒಳ್ಳೆಯದು. ಜೊತೆಗೆ ಅನಗತ್ಯ ಸಮಯದಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿ. ಹಗಲಿನಲ್ಲಿ ಹೆಚ್ಚು ವಿದ್ಯುತ್ ಬಳಕೆ ಮಾಡದೇ ಇರುವುದು ಸೂಕ್ತ.
ಚುನಾವಣಾ ಅವಧಿ ಹತ್ತಿರ ಬಂದಿದೆ ಇದರಿಂದಾಗಿ ಯಾವಾಗ ನಿಯಮ ಬೇಕಾದರೂ ಬದಲಾಗಬಹುದು. ಅದರಿಂದ ಸದ್ಯಕ್ಕೆ ಉಚಿತ ಕರೆಂಟ್ ಪಡೆದುಕೊಳ್ಳುತ್ತಿರುವ ಗ್ರಾಹಕರು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿಕೊಂಡು ಉಚಿತ ವಿದ್ಯುತ್ ಲಾಭವನ್ನು ತೆಗೆದುಕೊಳ್ಳಿ.
ಕರೆಂಟ್ ಬಿಲ್ ಬಾಕಿ ಇರಿಸಿಕೊಂಡವರಿಗೆ ಬಿಗ್ ಅಪ್ಡೇಟ್! ಸರ್ಕಾರದ ಹೊಸ ನಿರ್ಧಾರ
From now on everyone will not get free electricity, Big changes in Gruha jyothi scheme
ಪಾವತಿಸಬೇಕು ವಿದ್ಯುತ್ ಬಿಲ್



