ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್! 8ನೇ ಕಂತಿನ ಹಣಕ್ಕೆ ಇನ್ನೊಂದು ರೂಲ್ಸ್
ಇನ್ನು ಕೆಲವರಿಗೆ ಗೃಹಲಕ್ಷ್ಮಿ ಹಣ ಜಮಾ ಆಗುವುದು ಬಾಕಿ ಇದೆ ಈ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಂಡರೆ ನಿಮ್ಮ ಖಾತೆಗೆ (Bank Account) ಹಣ ವರ್ಗಾವಣೆ ಆಗುವುದು.
ರಾಜ್ಯ ಸರ್ಕಾರ ಪ್ರತಿ ತಿಂಗಳು 2,000 ಗಳನ್ನ ನೀಡುವಂತಹ ಗೃಹಲಕ್ಷ್ಮಿ ಯೋಜನೆ (Gruha lakshmi scheme) ರಾಜ್ಯದಲ್ಲಿ ಬಹುತೇಕ ಯಶಸ್ವಿ (success) ಯಾಗಿದೆ. 90% ನಷ್ಟು ಮಹಿಳೆಯರಿಗೆ ತಪ್ಪದೆ ಪ್ರತಿ ತಿಂಗಳು 2000 ಅವರ ಖಾತೆಗೆ ಜಮಾ (DBT) ಆಗುತ್ತಿದೆ.
ಇನ್ನು ಕೆಲವರಿಗೆ ಹಣ ಜಮಾ ಆಗುವುದು ಬಾಕಿ ಇದೆ, ಈ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಂಡರೆ ನಿಮ್ಮ ಖಾತೆಗೆ (Bank Account) ಹಣ ವರ್ಗಾವಣೆ ಆಗುವುದು.
ಕೊನೆಗೂ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!
ಬ್ಯಾಂಕಿನಲ್ಲಿ ಈ ಕೆಲಸ ಸಂಪೂರ್ಣಗೊಳಿಸಿ!
* ನೀವು ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಬ್ಯಾಂಕ್ (Bank) ಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬೇಕು.
* ಬ್ಯಾಂಕ್ ನಲ್ಲಿ ನಿಮ್ಮ ಖಾತೆಗೆ ಈ ಕೆ ವೈ ಸಿ ಅಪ್ಡೇಟ್ (KYC) ಮಾಡಿಸಬೇಕು.
* ekyc ಅಪ್ಡೇಟ್ ಮಾಡಿ ಸಿಯು ಕಳೆದ ತಿಂಗಳ ಹಣ ಬಾರದೆ ಇರುವವರು ಎನ್‌ಪಿಸಿಐ ಮ್ಯಾಪಿಂಗ್ (NPCI mapping) ಮಾಡಿಸಬೇಕು.
* ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಸಬೇಕು. ಜೂನ್ 14 2018 ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಲು ಕೊನೆಯ ದಿನಾಂಕವಾಗಿದೆ. ಆಧಾರ್ ಕೇಂದ್ರಕ್ಕೆ ಹೋಗಿ ಈ ಕೆಲಸವನ್ನು ಮಾಡಿಕೊಳ್ಳಿ.
* ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದನ್ನು ಮರೆಯಬೇಡಿ.
* ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿ ಸಕಾಲಕ್ಕೆ ಸಲ್ಲಿಕೆ ಆಗದೆ ಇದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಹಾಗಾಗಿ CDPO ಕಚೇರಿಗೆ ಹೋಗಿ ಅರ್ಜಿ ಪರಿಶೀಲನೆ ಮಾಡಿಸಿ.
ಕರೆಂಟ್ ಬಿಲ್ ಬಾಕಿ ಇರಿಸಿಕೊಂಡವರಿಗೆ ಬಿಗ್ ಅಪ್ಡೇಟ್! ಸರ್ಕಾರದ ಹೊಸ ನಿರ್ಧಾರ
ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಜಮಾ!
ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಕೆಲವು ಜಿಲ್ಲೆಗಳಿಗೆ ಬಿಡುಗಡೆ ಆಗಿದೆ, ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ಈ ಹಣ ತಲುಪುತ್ತದೆ. ಹಾಗಾಗಿ ಈ ತಿಂಗಳ ಕೊನೆಯ ವರೆಗೆ ನೀವು 7ನೇ ಕಂತಿನ ಹಣ ಬರಲು ಕಾಯಬಹುದು.
ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎನ್ನುವುದರ ಬಗ್ಗೆ ನೋಟಿಫಿಕೇಶನ್ ಬಾರದೆ ಇದ್ದಲ್ಲಿ ಅಥವಾ ಮೊಬೈಲ್ಗೆ ಎಸ್ಎಂಎಸ್ ಬಾರದೆ ಇದ್ದಲ್ಲಿ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಚೆಕ್ ಮಾಡಿಸಿಕೊಂಡರೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಸಿಗುತ್ತದೆ.
ಇನ್ನು ಎರಡನೆಯದಾಗಿ ಕರ್ನಾಟಕ ಸರ್ಕಾರದ DBT Karnataka ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೊಬೈಲ್ ನಲ್ಲಿಯೇ ಡಿ ಬಿ ಟಿ ಸ್ಟೇಟಸ್ ತಿಳಿದುಕೊಳ್ಳಬಹುದು.
ಆರ್‌ಟಿಇ ಅಡಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ! LKG ಮತ್ತು 1ನೇ ತರಗತಿಗೆ ಸೇರಿಸಿ
ಅತ್ತೆ ಮರಣ ಹೊಂದಿದ್ರೆ ಸೊಸೆ ಖಾತೆಗೆ ಹಣ ಜಮಾ!
ಕೆಲವು ಕಡೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಆ ಮಹಿಳೆ ಮರಣ ಹೊಂದಿದ್ದು ಈಗ ಯಾರ ಖಾತೆಗೆ ಹಣ ಜಮಾ ಆಗಬೇಕು ಎನ್ನುವ ಗೊಂದಲ ಏರ್ಪಡುತ್ತದೆ, ಆದರೆ ಸರ್ಕಾರ ಇದಕ್ಕೆ ಪರಿಹಾರವನ್ನು ಸೂಚಿಸಿದ್ದು ಮನೆಯಲ್ಲಿ ಅತ್ತೆ ಅರ್ಜಿ ಸಲ್ಲಿಸಿ ಆಕೆ ಈಗ ಮರಣ ಹೊಂದಿದ್ದರೆ ಅವರ ನಂತರದಲ್ಲಿ ಸೊಸೆ ತಮ್ಮ ಹೆಸರನ್ನು ಗೃಹಲಕ್ಷ್ಮೀ ಯೋಜನೆಯಲ್ಲಿ ಬದಲಾಯಿಸಿಕೊಂಡು ಹಣ ಪಡೆದುಕೊಳ್ಳಬಹುದು.
ರೇಷನ್ ಕಾರ್ಡ್ ಆಕ್ಟಿವ್ ಇದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದು! ಹೊಸ ನಿಯಮ
ಹೊಸದಾಗಿ ಅರ್ಜಿ ಸಲ್ಲಿಸಬಹುದು!
ರಾಜ್ಯ ಸರಕಾರ ತಿಳಿಸಿರುವಂತೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುವ ಪ್ರಕ್ರಿಯೆ (application process) ನಿರಂತರವಾಗಿ ನಡೆಯುತ್ತದೆ. ಹಾಗಾಗಿ ನೀವು ಈಗಾಗಲೇ ಸಲ್ಲಿಸಿದ ಅರ್ಜಿ ಸರಿಯಾಗದೆ ನಿಮ್ಮ ಖಾತೆಗೆ ಹಣ ಜಮಾ ಆಗ್ತಿಲ್ಲ ಎಂದಾದರೆ ಎಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ಮತ್ತೆ ಅರ್ಜಿ ಸಲ್ಲಿಸಿ ಅಥವಾ ಇದುವರೆಗೆ ಅರ್ಜಿ ಸಲ್ಲಿಸದೆ ಇರುವವರು ಕೂಡಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಸರ್ಕಾರದಿಂದ ಉಚಿತವಾಗಿ 2000 ಸಿಗುವಂತೆ ಮಾಡಿಕೊಳ್ಳಿ.
New Update of Gruha Lakshmi Yojana, Another rule for 8th installment money