ಆರ್‌ಟಿಇ ಅಡಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ! LKG ಮತ್ತು 1ನೇ ತರಗತಿಗೆ ಸೇರಿಸಿ

ಸಾಮಾನ್ಯವಾಗಿ ಒಂದು ದೇಶ ಇರಲಿ, ಅಥವಾ ರಾಜ್ಯವೇ ಆಗಿರಲಿ ಉಚಿತ ಶಿಕ್ಷಣ (free education) ಮತ್ತು ಆರೋಗ್ಯ (free health) ಸಿಕ್ಕರೆ ಸ್ಥಳದಲ್ಲಿ ವಾಸಿಸುವ ಜನರ ಅರ್ಧದಷ್ಟು ಅಭಿವೃದ್ಧಿ ಆದಂತೆ. ಯಾಕಂದ್ರೆ ಭಾರತದಲ್ಲಿ ಬಡತನ ಅನ್ನೋದು ಇನ್ನೂ ನಿವಾರಣೆ ಆಗದೆ ಇರುವ ಸಮಸ್ಯೆ.
ಹಾಗಾಗಿ ಇದೇ ಕಾರಣಕ್ಕೆ ಸಾಕಷ್ಟು ಮಕ್ಕಳಿಗೆ ಆರಂಭಿಕ ಹಂತದ ವಿದ್ಯಾಭ್ಯಾಸವೇ (Education) ಸಿಗುವುದಿಲ್ಲ. ಹೀಗಾದಾಗ ಅವರು ತಮ್ಮ ಭವಿಷ್ಯವನ್ನು ಉತ್ತಮವಾಗಿ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲ.. ಇದೆಲ್ಲ ಒಂದಕ್ಕೊಂದು ಸರಪಳಿಯ ಕೊಂಡಿಯಿದ್ದಂತೆ.
ಆದರೆ ರಾಜ್ಯದಲ್ಲಿ ಆರ್ ಟಿ ಇ (right to education) ಶಿಕ್ಷಣ ಹಕ್ಕು ಯೋಜನೆ ಜಾರಿಯಲ್ಲಿದ್ದು 2024 25ನೇ ಶೈಕ್ಷಣಿಕ ವರ್ಷಕ್ಕೆ ಉಚಿತ ಶಿಕ್ಷಣ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ರೇಷನ್ ಕಾರ್ಡ್ ಆಕ್ಟಿವ್ ಇದ್ರೆ ಮಾತ್ರ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದು! ಹೊಸ ನಿಯಮ
ರೈಟ್ ಟು ಎಜುಕೇಶನ್ ಅಂದ್ರೆ ಶಿಕ್ಷಣದ ಹಕ್ಕು ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಇದ್ದೇ ಇರುತ್ತದೆ. ಅದು ಸರಿಯಾದ ರೀತಿಯಲ್ಲಿ ಸಿಕ್ಕಾಗ ಮಾತ್ರ ಆ ವ್ಯಕ್ತಿ ಸಕ್ಸಸ್ ಕಾಣಲು ಸಾಧ್ಯ. ಹಾಗಾಗಿ ಬೇಸಿಕ್ ಶಿಕ್ಷಣವನ್ನ ಸರ್ಕಾರ ಉಚಿತವಾಗಿ ನೀಡಲು ನಿರ್ಧರಿಸಿದೆ.
ಆರ್ ಟಿ ಇ ಪ್ರವೇಶಕ್ಕೆ ಅರ್ಜಿ ಆಹ್ವಾನ! (Apply for RTE)
ರಾಜ್ಯದ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಹಕ್ಕು (right to education) ಒದಗಿಸುತ್ತದೆ, ಈ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣವನ್ನು ಪಡೆದುಕೊಳ್ಳಬಹುದು. ಆರ್ ಟಿ ಇ ಹಕ್ಕು ದೇಶದಾದ್ಯಂತ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಹಾಗೂ ಕರ್ನಾಟಕ ರಾಜ್ಯದಲ್ಲಿಯೂ ಕೂಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ತಿಳಿಸಲಾಗಿದೆ.
ಪೆಂಡಿಂಗ್ ಹಣದ ಜೊತೆಗೆ 7ನೇ ಕಂತಿನ ಗೃಹಲಕ್ಷ್ಮಿ ಹಣ ಕೂಡ ಬಿಡುಗಡೆ! ಚೆಕ್ ಮಾಡಿ
ಎಷ್ಟು ವರ್ಷದವರಿಗೆ ಸಿಗುತ್ತೆ ಉಚಿತ ಶಿಕ್ಷಣ?
ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಲ್ಲಿ ಸಾಕಷ್ಟು ಮಕ್ಕಳು ತಮ್ಮ ಆರಂಭಿಕ ಶಿಕ್ಷಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ಆರ್ ಟಿ ಇ ಕಾಯ್ದೆಯ ಅಡಿಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ಉಚಿತ ಶಿಕ್ಷಣ ಪಡೆದುಕೊಳ್ಳಲು ಅವಕಾಶ ಇದೆ. ಇದಕ್ಕೆ ಬೇಕಾಗಿರುವ ವಯಸ್ಸಿನ ಮಿತಿ ನೋಡುವುದಾದರೆ…
ಎಲ್ಕೆಜಿ ವಿದ್ಯಾಭ್ಯಾಸಕ್ಕೆ ಪ್ರವೇಶ ಪಡೆಯಲು ಮಗುವಿಗೆ ಕನಿಷ್ಠ ನಾಲ್ಕು ವರ್ಷ ವಯಸ್ಸಾಗಿರಬೇಕು. ಮತ್ತು ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಕನಿಷ್ಠ ಐದು ವರ್ಷ ಐದು ತಿಂಗಳು ವಯಸ್ಸಾಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ? (How to apply)
ನೀವು ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ ಲೈನ್ (offline) ಮೂಲಕ ಅರ್ಜಿ ಸಲ್ಲಿಸುವುದಾದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅದೇ ರೀತಿ ಹತ್ತಿರದ ಸೇವಾ ಕೇಂದ್ರಗಳಲ್ಲಿ, ಬೆಂಗಳೂರು ಒನ್, ಕರ್ನಾಟಕ ಒನ್ ನಲ್ಲಿಯೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ https://sdcedn.karnataka.gov.in/rteadmission/RTE/page1.aspx ಈ ವೆಬ್ ಸೈಟ್ ಗೆ ಹೋಗಿ ಅಗತ್ಯ ಇರುವ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು
ಇದಕ್ಕೆ ಪಾಲಕರು ತಮ್ಮ ಆಧಾರ್ ಕಾರ್ಡ್ ಅಥೆಂಟಿಕೇಷನ್ (Aadhaar Card authentication) ನೀಡಬೇಕಾಗುತ್ತದೆ. ನಂತರ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಮಗುವಿನ ಮಾಹಿತಿಯನ್ನು ಕೊಡಬೇಕಾಗುತ್ತದೆ.
ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಖಡಕ್ ಸೂಚನೆ
2024 25 ನೇ ಸಾಲಿನ ಆರ್ ಟಿ ಇ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ದಿನಾಂಕಗಳು!
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 22 2024.
ಅರ್ಹ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕ ಏಪ್ರಿಲ್ 26, 2024
ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟ್ ಹಂಚಿಕೆ ವೇಳಾಪಟ್ಟಿ ಬಿಡುಗಡೆ ದಿನಾಂಕ 30 ಏಪ್ರಿಲ್ 2024.
ಆಯ್ಕೆಯಾದ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಲು ಕೊನೆಯ ದಿನಾಂಕ 13 ಮೇ 2024.
ಆನ್ಲೈನಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಮಾಡುವ ದಿನಾಂಕ ಮೇ 22, 2024.
ಇದೊಂದು ಸರ್ಕಾರದ ಉಚಿತ ಉಪಕ್ರಮವಾಗಿದ್ದು, ಸುಲಭವಾಗಿ ನಿಮ್ಮ ಮಕ್ಕಳಿಗೆ ಉಚಿತವಾಗಿ ಬೇಸಿಕ್ ಶಿಕ್ಷಣವನ್ನ ಒದಗಿಸಲು ತಕ್ಷಣ ಅರ್ಜಿ ಸಲ್ಲಿಸಿ.
ಇಂತಹವರು ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕು! ಸಿಗೋಲ್ಲ ಗೃಹಜ್ಯೋತಿ ಸೌಲಭ್ಯ
Apply for free education under RTE, Enroll your child in LKG and 1st class
ಅರ್ಜಿ ಸಲ್ಲಿಸುವುದು ಹೇಗೆ? (How to apply)



