ಪೆಂಡಿಂಗ್ ಹಣದ ಜೊತೆಗೆ 7ನೇ ಕಂತಿನ ಗೃಹಲಕ್ಷ್ಮಿ ಹಣ ಕೂಡ ಬಿಡುಗಡೆ! ಚೆಕ್ ಮಾಡಿ
ಪೆಂಡಿಂಗ್ ಇರುವ ಹಣದ ಜೊತೆಗೆ ಏಳನೇ ಕಂತಿನ ಹಣ ಬಿಡುಗಡೆ, ನಿಮ್ಮ ಖಾತೆ ಪರಿಶೀಲಿಸಿ!
ಮಹಿಳೆಯರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ . ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಅಡಿಯಲ್ಲಿ ಆರು ಕಂತಿನ ಹಣವನ್ನು ಈಗಾಗಲೇ ಮಹಿಳೆಯರು ಪಡೆದುಕೊಂಡಿದ್ದಾರೆ.
ಅಂದರೆ ಒಟ್ಟು 12,000 ಮಹಿಳೆಯರ ಖಾತೆಗೆ (Bank Account) ಜಮಾ ಆಗಿವೆ. ಅದೇ ರೀತಿ ಈಗ ಮುಂದಿನ ಕಂತಿನ ಹಣ ಅಂದರೆ 7ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ತಲುಪುವ ನಿರೀಕ್ಷೆ ಇದೆ.
ಈ ದಾಖಲೆಗಳು ಇದ್ರೆ ಮಾತ್ರ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ! ಖಡಕ್ ಸೂಚನೆ
ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಂದು ಮಹಿಳೆಯರ ಖಾತೆಗೆ ಜಮಾ ಆಗುತ್ತದೆ. ಹಲವರು ಇದರಿಂದ ವಂಚಿತರಾಗಿದ್ದಾರೆ. ಈ ಸಮಸ್ಯೆಗಳಿಂದಾಗಿ ಹಲವು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದು ತಲುಪಿಲ್ಲ. ಕೋಟ್ಯಾಂತರ ಮಹಿಳೆಯರು ಅರ್ಜಿ ಸಲ್ಲಿಸಿದ್ದು ಅದರಲ್ಲಿ ಸುಮಾರು 10% ನಷ್ಟು ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಕೆಲವು ಕಂತಿನ ಹಣ ಬರುವುದು ಬಾಕಿ ಇದೆ.
ಪೆಂಡಿಂಗ್ ಹಣವು ಜಮಾ ಆಗುತ್ತದೆ!
ಸರ್ಕಾರ ಈಗಾಗಲೇ ತಿಳಿಸಿರುವಂತೆ ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ನೀವು ಪರಿಹರಿಸಿಕೊಂಡರೆ ಉದಾಹರಣೆಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್, ಈಕೆ ವೈ ಸಿ (E-KYC) ಮಾಡಿಸಿಕೊಳ್ಳುವುದರಬಹುದು, ಎನ್ ಪಿ ಸಿ ಐ ಮ್ಯಾಪಿಂಗ್, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಲಿಂಕ್, ಆಧಾರ್ ಕಾರ್ಡ್ ಅಪ್ಡೇಟ್ ಇವಿಷ್ಟು ಪ್ರಮುಖ ಕೆಲಸಗಳನ್ನು ನೀವು ಸರಿಯಾಗಿ ಮಾಡಿಕೊಂಡರೆ ನಿಮಗೆ ಹಣ ಬಾರದೆ ಇರಲು ಸಾಧ್ಯವೇ ಇಲ್ಲ. ಇದರ ಜೊತೆಗೆ ಒಂದಷ್ಟು ತಾಂತ್ರಿಕ ದೋಷಗಳು ಕೂಡ ಇದ್ದು ಅವುಗಳ ಪರಿಹಾರಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ.
ಇಂತಹವರು ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಬೇಕು! ಸಿಗೋಲ್ಲ ಗೃಹಜ್ಯೋತಿ ಸೌಲಭ್ಯ
ಇನ್ನು ಪ್ರತಿ ತಿಂಗಳು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡ ಮಹಿಳೆಯರಿಗೆ ಪೆಂಡಿಂಗ್ ಇರುವ ಹಿಂದಿನ ಒಂದು ಎರಡು ಮೂರು ಕಂತುಗಳ ಹಣವು ಕೂಡ ಬಿಡುಗಡೆ ಆಗುತ್ತಿದೆ.
ಇದಕ್ಕೆ ಸಾಕ್ಷಿಯಾಗಿ ಕೆಲವು ಮಹಿಳೆಯರ ಖಾತೆಗೆ ಈಗಾಗಲೇ ಒಟ್ಟಿಗೆ ನಾಲ್ಕರಿಂದ ಐದು ಕಂತಿನ ಹಣ ಜಮಾ ಆಗಿರೋದು ಕಂಡು ಬಂದಿದೆ. ಹೀಗಾಗಿ ನೀವು ಕೂಡ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದು (Money Deposit) ಗ್ಯಾರಂಟಿ!
ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಬಿಗ್ ಅಪ್ಡೇಟ್! ಪೆಂಡಿಂಗ್ ಹಣ ಪಡೆಯಿರಿ
ಏಳನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆ?
ಪ್ರತಿ ತಿಂಗಳು 15ರಿಂದ 20ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಯ ಹಣ ಸರ್ಕಾರದ ಬಿಡುಗಡೆ ಮಾಡಿ ಮಹಿಳೆಯರ ಖಾತೆಗೆ ಅದು ಬ್ಯಾಂಕ್ ಮೂಲಕ ತಲುಪುತ್ತದೆ. ಕೋಟ್ಯಾಂತರ ಮಹಿಳೆಯರಿಗೆ ಹಣ DBT ಮಾಡುವ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬ ಆಗಬಹುದು.
ಈಗಾಗಲೇ ಕೆಲವು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿತ್ತು ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ಹಣ ಬಂದು ತಲುಪುತ್ತದೆ. ಈಗ ಯಾವೆಲ್ಲ ಜಿಲ್ಲೆಗೆ ಏಳನೇ ಕಂತಿನ ಹಣ ಜಮಾ ಆಗಿದೆ ಎಂಬುದನ್ನು ನೋಡೋಣ, ಇದರಲ್ಲಿ ನಿಮ್ಮ ಜಿಲ್ಲೆ ಇದೆಯಾ ಎಂದು ತಿಳಿದುಕೊಳ್ಳಿ.
ಇಂತಹ ರೇಷನ್ ಕಾರ್ಡ್ ರದ್ದು, ರಾಜ್ಯ ಸರ್ಕಾರದ ಖಡಕ್ ನಿರ್ಧಾರ! ವಿಶೇಷ ಸೂಚನೆ
ಧಾರವಾಡ, ಶಿವಮೊಗ್ಗ, ವಿಜಯಪುರ, ತುಮಕೂರು, ಉತ್ತರ ಕನ್ನಡ, ರಾಮನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕೊಪ್ಪಳ, ಹಾವೇರಿ, ಗದಗ, ರಾಯಚೂರು, ಬೀದರ್, ಕೋಲಾರ್, ಬಳ್ಳಾರಿ, ಮೈಸೂರು, ಯಾದಗಿರಿ ಹಾಸನ ಈ ಜಿಲ್ಲೆಗಳಿಗೆ ಏಳನೇ ಕಂತೆನ ಹಣ ಬಿಡುಗಡೆ ಆಗಿದೆ.
ನಿಮ್ಮ ಜಿಲ್ಲೆಯ ಹೆಸರು ಈ ಲಿಸ್ಟ್ ನಲ್ಲಿ ಇರದೇ ಇದ್ರೆ ಚಿಂತೆ ಮಾಡುವ ಅಗತ್ಯವಿಲ್ಲ ಮಾರ್ಚ್ 31ರ ಒಳಗೆ ನಿಮ್ಮ ಖಾತೆಗೂ ಹಣ ಜಮಾ ಆಗಲಿದೆ.
Along with the pending money, the 7th installment of Gruha Lakshmi money also released