ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಬಿಗ್ ಅಪ್ಡೇಟ್! ಪೆಂಡಿಂಗ್ ಹಣ ಪಡೆಯಿರಿ
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್, ಯಾರಿಗೆ ಹಣ ಬಂದಿಲ್ವೋ ಅವರು ಈ ಕೆಲಸ ಮಾಡಿ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣ ಪಡೆದುಕೊಳ್ಳಿ!
1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗೆ ಅರ್ಜಿ ಸಲ್ಲಿಸಿದ್ದು ಇಂದು ಶೇಕಡ 90ರಷ್ಟು ಜನರ ಖಾತೆಗೆ (Bank Account) ಹಣ ವರ್ಗಾವಣೆ ಆಗುತ್ತಿದೆ. ಆದರೆ ಇನ್ನೂ 10% ನಷ್ಟು ಜನರ ಖಾತೆಗೆ ಹಣ ಬಾರದೇ ಇರುವುದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ.
ಇದೀಗ ಸರ್ಕಾರ ಹೊಸ ಅಪ್ಡೇಟ್ ನೀಡಿದ್ದು, ಮಾರ್ಚ್ 25ರ ಒಳಗೆ ಈ ಕೆಲಸ ಮಾಡಿಕೊಳ್ಳದಿದ್ದರೆ ನಿಮ್ಮ ಖಾತೆಗೆ ಹಣ ಬಿಡುಗಡೆ (Money Deposit) ಆಗುವುದಿಲ್ಲ ಎಂದು ತಿಳಿಸಿತ್ತು..
ಇಂತಹ ರೇಷನ್ ಕಾರ್ಡ್ ರದ್ದು, ರಾಜ್ಯ ಸರ್ಕಾರದ ಖಡಕ್ ನಿರ್ಧಾರ! ವಿಶೇಷ ಸೂಚನೆ
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗದೆ ಇರುವುದಕ್ಕೆ ಕಾರಣ!
* ಬ್ಯಾಂಕ್ ನಲ್ಲಿ ಇರುವ ಖಾತೆಗೆ ಕೆವೈಸಿ ಅಪ್ಡೇಟ್ ಆಗಿಲ್ಲ.
* ಎನ್ ಪಿ ಸಿ ಐ ಮ್ಯಾಪಿಂಗ್ ಆಗಿಲ್ಲ
* ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ.
* ಮಹಿಳೆಯರು ನೀಡಿದ ಎಲ್ಲಾ ದಾಖಲೆಗಳಲ್ಲಿ ಒಂದೇ ತರನಾದ ಹೆಸರು ಅಥವಾ ಅಡ್ರೆಸ್ ಇಲ್ಲ.
* ಅರ್ಜಿ ಸಲ್ಲಿಸುವಾಗ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಕೆ ಪೂರ್ಣಗೊಂಡಿಲ್ಲ.
* ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ಲ
ಅನ್ನಭಾಗ್ಯ ಹಣ ಬಿಡುಗಡೆ ಆಯ್ತು, ಖಾತೆ ಚೆಕ್ ಮಾಡಿಕೊಳ್ಳಿ! ಹಣ ಬಾರದಿದ್ರೆ ಈ ರೀತಿ ಮಾಡಿ
ಈ ಸಮಸ್ಯೆ ಪರಿಹರಿಸಿಕೊಳ್ಳುವುದು ಹೇಗೆ?
ಸಮಸ್ಯೆಯ ಮೂಲ ಇರುವುದೇ ಬ್ಯಾಂಕ್ ಖಾತೆಯಲ್ಲಿ ಆಗಿರುವುದರಿಂದ ನೀವು ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಗೆ ಅಗತ್ಯ ಇರುವ ಎಲ್ಲಾ ಅಪ್ಡೇಟ್ ಮಾಡಿಸಬೇಕು. ಇದಕ್ಕಾಗಿ ನೀವು ನೇರವಾಗಿ ಬ್ಯಾಂಕ್ ಗೆ ಹೋಗಿ ಸಿಬ್ಬಂದಿಗಳನ್ನು ಭೇಟಿ ಮಾಡಿ, ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗುತ್ತಿಲ್ಲ ಎನ್ನುವುದರ ಬಗ್ಗೆ ತಿಳಿಸಿ ಬಳಿಕ ನಿಮ್ಮ ಖಾತೆಗೆ ಅಗತ್ಯ ಇರುವ ಅಪ್ಡೇಟ್ ಮಾಡಿಸಿಕೊಡಲು ಹೇಳಿ.
ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ! ನಿಮ್ಮ ಖಾತೆ ಪರಿಶೀಲಿಸಿ
ಎರಡನೆಯದಾಗಿ ಆಧಾರ್ ಕಾರ್ಡ್ ಹತ್ತು ವರ್ಷಗಳಷ್ಟು ಹಳೆಯದಾಗಿದ್ದರೆ ತಕ್ಷಣ ಅದನ್ನು ಆಧಾರ್ ಕಾರ್ಡ್ ಸೆಂಟರ್ನಲ್ಲಿ ಅಪ್ಡೇಟ್ ಮಾಡಿಸಿ. ಆಧಾರ್ ಕಾರ್ಡ್ ನಲ್ಲಿ ಹೆಸರು, ಅಡ್ರೆಸ್, ಲಿಂಗ, ಜನ್ಮ ದಿನಾಂಕ ಮೊದಲಾದ ವಿವರಗಳನ್ನು ನವೀಕರಣಗೊಳಿಸಬಹುದು.
ಆನ್ಲೈನ್ನಲ್ಲಿಯೂ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶವಿದೆ. ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಗೆ ಸರ್ಕಾರ ಅವಕಾಶ ಕೊಟ್ಟಿದೆ. ಇದು ಸಂಪೂರ್ಣ ಉಚಿತವಾಗಿದ್ದು ಜೂನ್ 14ರವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ನಿಮಗೆ ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
ಈ ತಿಂಗಳ ಗೃಹಲಕ್ಷ್ಮಿ ಹಣ ಬಂದಿದ್ಯಾ? ಮೊಬೈಲ್ ನಲ್ಲೆ ಈ ರೀತಿ ಚೆಕ್ ಮಾಡಿಕೊಳ್ಳಿ
7ನೇ ಕಂತಿನ ಹಣ ಬಿಡುಗಡೆ!
ರಾಜ್ಯ ಸರ್ಕಾರ ಈಗಾಗಲೇ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ ಬಿಡುಗಡೆ ಮಾಡಿದೆ, ಹೀಗಾಗಿ ಹದಿನಾಲ್ಕು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಗೃಹಿಣಿಯರಿಗೆ ಸಾಧ್ಯವಾಗಿದೆ. ಪ್ರತಿ ಜಿಲ್ಲೆಗೂ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ಮಾರ್ಚ್ 31ರ ಒಳಗೆ ಪ್ರತಿಯೊಬ್ಬರ ಖಾತೆಗೂ ಹಣ ವರ್ಗಾವಣೆ ಆಗಲಿದೆ.
Big update for those who have not received Gruha lakshmi scheme money