Karnataka NewsBangalore News

ಅನ್ನಭಾಗ್ಯ ಹಣ ಬಿಡುಗಡೆ ಆಯ್ತು, ಖಾತೆ ಚೆಕ್ ಮಾಡಿಕೊಳ್ಳಿ! ಹಣ ಬಾರದಿದ್ರೆ ಈ ರೀತಿ ಮಾಡಿ

ಕಳೆದ ಆರು ತಿಂಗಳಿಂದ ಜನ ಬೇರೆ ಯಾವುದೇ ವಿಷಯಕ್ಕೆ ಕಾಯ್ತಾರೋ ಇಲ್ವೋ ಗೊತ್ತಿಲ್ಲ ಆದರೆ ಅನ್ನಭಾಗ್ಯ ಯೋಜನೆ (Annabhagya scheme) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಖಾತೆಗೆ (Bank Account) ಜಮಾ ಆಗಿದೆಯಾ ಅಂತ ತಿಳಿದುಕೊಳ್ಳುವುದಕ್ಕೆ ಮಾತ್ರ ಎದುರುನೋಡುತ್ತಾರೆ.

ಹೌದು, ಇವತ್ತು ಯಾರು ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿದ್ದಾರೋ ಅವರಿಗೆ ದವಸಧಾನ್ಯಗಳ ಜೊತೆಗೆ ಉಚಿತವಾಗಿ ಹಣ ಕೂಡ ಲಭ್ಯವಾಗುತ್ತಿದೆ, ಇದು ರಾಜ್ಯ ಸರ್ಕಾರದ ಅನ್ನಭಾಗ್ಯ ಗ್ಯಾರಂಟಿ ಯೋಜನೆಯ ಫಲ.

Do this if Annabhagya Yojana money not reached your Bank account yet

ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಬಡವರಿಗೆ ಪಡಿತರ ವಸ್ತುಗಳನ್ನ ಉಚಿತವಾಗಿ ನೀಡುವುದರ ಮೂಲಕ ಅವರ ಹಸಿವನ್ನು ನಿವಾರಿಸಲು 2013ರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಯಿತು.

ರೈತರ ಖಾತೆಗೆ ನೇರವಾಗಿ ಡಿಬಿಟಿ ಆಗಿದೆ ಬೆಳೆ ವಿಮೆ ಹಣ! ನಿಮ್ಮ ಖಾತೆ ಪರಿಶೀಲಿಸಿ

ಈ ಯೋಜನೆ ಅಡಿಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಫಲಾನುಭವಿಗಳಿಗೆ ನೀಡುತ್ತಿದೆ. ಇದಕ್ಕೆ ತಾನು ಐದು ಕೆಜಿ ಅಕ್ಕಿಯನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಭರವಸೆಯನ್ನು ರಾಜ್ಯ ಸರ್ಕಾರ (State government) ನೀಡಿತ್ತು.

ಆದರೆ ಕಾರಣಾಂತರಗಳಿಂದ ಇದು ಸಾಧ್ಯವಾಗಿಲ್ಲ. ಹಾಗಾಗಿ ಉಚಿತ ಅಕ್ಕಿ ಬದಲಿಗೆ ಆ ಅಕ್ಕಿಗೆ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಯಿತು. ಕಳೆದ ಆರು ತಿಂಗಳಿನಿಂದಲೂ ಕೂಡ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ.

ನಿಮ್ಮ ಖಾತೆಗೆ ಹಣ ಬಂದಿಲ್ವಾ, ಸರ್ಕಾರ ಕೊಟ್ಟಿದೆ ಪರಿಹಾರ!

ಸಾಕಷ್ಟು ಜನರಿಗೆ ಇತ್ತೀಚಿನ ದಿನಗಳಲ್ಲಿ ಅಂದ್ರೆ ಜನವರಿ ಫೆಬ್ರವರಿ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿಲ್ಲ ಇದಕ್ಕಿಂತ ಹಿಂದಿನ ಕಂತುಗಳು ಬಂದಿವೆ. ಆದರೆ ಜನವರಿ ಫೆಬ್ರವರಿ ತಿಂಗಳ ಹಣ ಬಿಡುಗಡೆ ಆಗಿಲ್ಲ. ಈಗಾಗಲೇ ಮಾರ್ಚ್ ತಿಂಗಳಿನಲ್ಲಿ ಅನ್ನಭಾಗ್ಯ ಯೋಜನೆ ಹಣವನ್ನು ಬಿಡುಗಡೆ ಮಾಡಲಾಗಿದೆ ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ಕೂಡ ಈ ಹಣ ಲಭ್ಯವಾಗಲಿದೆ.

ಈ ತಿಂಗಳ ಗೃಹಲಕ್ಷ್ಮಿ ಹಣ ಬಂದಿದ್ಯಾ? ಮೊಬೈಲ್ ನಲ್ಲೆ ಈ ರೀತಿ ಚೆಕ್ ಮಾಡಿಕೊಳ್ಳಿ

Annabhagya Schemeಇನ್ನು ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾದರೆ ಅದಕ್ಕೆ ಪ್ರಮುಖ ಕಾರಣ ಕೆ ವೈ ಸಿ ಪ್ರಕ್ರಿಯೆ (E-KYC ) ಮಾಡಿಕೊಳ್ಳದೆ ಇರುವುದು ಆಗಿರುತ್ತದೆ. ಇನ್ನು ಮನೆಯ ಯಜಮಾನನ ಖಾತೆ ನಿಷ್ಕ್ರಿಯಗೊಂಡಿದ್ದರೆ ಅಥವಾ ಖಾತೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಅಂತಹವರಿಗೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

ಇದಕ್ಕಾಗಿ ಮನೆಯ ಯಜಮಾನನ ಖಾತೆಯಲ್ಲಿ ಸಮಸ್ಯೆ ಇದ್ದಾಗ ರೇಷನ್ ಕಾರ್ಡ್ ನ ಹೆಸರಿನಲ್ಲಿ ಎರಡನೇ ಸದಸ್ಯ ಯಾರಾಗಿರುತ್ತಾನೋ ಅವರ ಖಾತೆಗೆ ಹಣ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಅವರ ಬ್ಯಾಂಕ್ ಖಾತೆ (Bank Account) ಕೂಡ ಈಕೆ ವೈ ಸಿ ಅಪ್ಡೇಟ್ ಆಧಾರ್ ಅಪ್ಡೇಟ್ ಮಾಡಿಸಿಕೊಂಡಿರುವುದು ಬಹಳ ಮುಖ್ಯ.

ಈ ಅರ್ಹತೆ ಇದ್ರೆ ಮಾತ್ರ ನಿಮಗೆ ಬಿಪಿಎಲ್ ಕಾರ್ಡ್ ಸಿಗುತ್ತೆ; ಹೊಸ ರೇಷನ್ ಕಾರ್ಡ್ ಅಪ್ಡೇಟ್

ಮೊಬೈಲ್ ನಲ್ಲಿ ಅನ್ನಭಾಗ್ಯ ಸ್ಟೇಟಸ್ ತಿಳಿದುಕೊಳ್ಳಿ!

ನೀವು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಸಹಾಯದಿಂದ ಸಾಧ್ಯವಾಗದೇ ಇದ್ದರೆ ಮೊಬೈಲ್ ಮೂಲಕವೂ ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು.

ಇದಕ್ಕಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಭೇಟಿ ನೀಡಿ. ಈ ಸರ್ವಿಸ್ ವಿಭಾಗದಲ್ಲಿ ಎಡ ಭಾಗದಲ್ಲಿ ಮೂರು ಲೈನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಅನುಮೋದಿಸಿ, ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ವೋ ಎನ್ನುವುದನ್ನು ಚೆಕ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಮೊಬೈಲ್ಗೆ ಎಸ್ಎಂಎಸ್ ಬಾರದೇ ಇದ್ದಲ್ಲಿ ಹಣ ಜಮಾ ಆಗಿಲ್ಲ ಎಂದಲ್ಲ. ತಾಂತ್ರಿಕ ದೋಷದಿಂದ ಎಸ್ಎಮ್ಎಸ್ ಬಾರದೆ ಇರಬಹುದು. ಆದರೆ ನೀವು ಬ್ಯಾಂಕಿಗೆ ಹೋಗಿ ಪಾಸ್ ಬುಕ್ (Bank Passbook) ಅಪ್ಡೇಟ್ ಮಾಡಿಸಿದರೆ ನಿಮ್ಮ ಖಾತೆಗೆ ಬಂದಿರುವ ಹಣ ಎಷ್ಟು ಎನ್ನುವ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಗೃಹಜ್ಯೋತಿ ಯೋಜನೆಯ ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ

Annabhagya Scheme money has been released, check the bank account

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories