ಈ ಅರ್ಹತೆ ಇದ್ರೆ ಮಾತ್ರ ನಿಮಗೆ ಬಿಪಿಎಲ್ ಕಾರ್ಡ್ ಸಿಗುತ್ತೆ; ಹೊಸ ರೇಷನ್ ಕಾರ್ಡ್ ಅಪ್ಡೇಟ್
ಫಲಾನುಭವಿಗಳಿಗೆ ಬಿಪಿಎಲ್ (BPL Ration card) ಮತ್ತು ಎಪಿಎಲ್ ಕಾರ್ಡ್ (APL ration card) ವಿತರಣೆ ಮಾಡಲು ನಿರ್ಧರಿಸಲಾಗಿದೆ.
ರೇಷನ್ ಕಾರ್ಡ್ (ration card) ವಿತರಣೆಗೆ ಸರ್ಕಾರ ಮುಂದಾಗಿದೆ, ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ರೇಷನ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ 295 ಲಕ್ಷ ಅರ್ಜಿಗಳು ವಿಲೇವಾರಿ ಆಗದೆ ಹಾಗೆಯೇ ಸರ್ಕಾರದ ಬಳಿ ಉಳಿದುಕೊಂಡಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್ ಕಾರ್ಡ್ (Aadhaar card) ಜೊತೆಗೆ ರೇಷನ್ ಕಾರ್ಡ್ ಕೂಡ ಬಹಳ ಮುಖ್ಯವಾಗಿರುವ ದಾಖಲೆ ಆಗಿದೆ. ಅದರಿಂದ ಈಗ ಮತ್ತೆ ರೇಷನ್ ಕಾರ್ಡ್ ವಿತರಣೆ ಕೆಲಸವನ್ನು ಸರ್ಕಾರ ಕೈಗೆತ್ತಿಕೊಂಡಿದೆ.
ಗೃಹಜ್ಯೋತಿ ಯೋಜನೆಯ ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ
ಆಹಾರ ಮತ್ತು ನಾಗರಿಕ ಇಲಾಖೆ ಈಗಾಗಲೇ ತಿಳಿಸಿರುವಂತೆ ಫಲಾನುಭವಿ ಸಾರ್ವಜನಿಕರಿಗೆ ಬಿಪಿಎಲ್ (BPL Ration card) ಮತ್ತು ಎಪಿಎಲ್ ಕಾರ್ಡ್ (APL ration card) ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಬಂದಿರುವ ಎಲ್ಲ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಅಂದರೆ ಮಾರ್ಚ್ 31 2024ಕ್ಕೆ ಪರಿಶೀಲನೆ ಕೊನೆಗೊಳ್ಳಬೇಕು ಹಾಗೂ ಏಪ್ರಿಲ್ ಒಂದರಿಂದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಆರಂಭವಾಗಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ರೇಷನ್ ಕಾರ್ಡ್ ವಿಂಗಡಣೆ!
ಲಕ್ಷಾಂತರ ರೇಷನ್ ಕಾರ್ಡ್ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆ ಆಗಿದೆ ಇದರಲ್ಲಿ ಅರ್ಹ ಫಲಾನುಭವಿಗಳ ಆಧಾರದ ಮೇಲೆ ಎಪಿಎಲ್ ಮತ್ತು ಬಿಪಿಎಲ್ ಎಂದು ವರ್ಗೀಕರಣ ಮಾಡಿ ನಂತರ ಸಂಬಂಧಪಟ್ಟ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು.
ಈ ಯೋಜನೆಯಲ್ಲಿ ರೈತರಿಗೆ ಸಿಗುತ್ತೆ 10,000 ಸಹಾಯಧನ! ನೇರವಾಗಿ ಖಾತೆಗೆ ಜಮಾ
ನೀವು ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರಾಗಿದ್ದು ನಿಮಗೆ ಎಲ್ಲಾ ಅನುಕೂಲಗಳು ಇದ್ದರೂ ಕೂಡ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿದರೆ, ಖಂಡಿತ ನಿಮಗೆ ಆ ಕಾರ್ಡ್ ಸಿಗುವುದಿಲ್ಲ.
ಬದಲಿಗೆ ಎಪಿಎಲ್ ಕಾರ್ಡನ್ನೇ ನೀಡಲಾಗುತ್ತದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಹೊಸ ಅರ್ಜಿ ಸಲ್ಲಿಕೆ ಮಾಡಲು ಹೋಗುವುದಿದ್ದರೆ ಸರಿಯಾದ ಮಾಹಿತಿಯನ್ನು ನೀಡಿ ನಂತರ ನಿಮಗೆ ಯಾವ ಕಾರ್ಡ್ ಪಡೆದುಕೊಳ್ಳಲು ಅರ್ಹತೆ ಇರುತ್ತದೆಯೋ ಅದಕ್ಕೆ ಅರ್ಜಿ ಸಲ್ಲಿಸಿ.
ಇಂತಹವರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬಂದ್! ಸರ್ಕಾರ ಖಡಕ್ ವಾರ್ನಿಂಗ್
ಹೊಸ ರೇಷನ್ ಕಾರ್ಡ್ ವಿತರಣೆ ಯಾವಾಗ!
ಈಗಾಗಲೇ 57 ಸಾವಿರ ರೇಷನ್ ಕಾರ್ಡ್ ವಿತರಣೆ ಮಾಡಲಾಗಿದೆ. ಅದರಲ್ಲಿ ತುರ್ತು ಮೆಡಿಕಲ್ ಎಮರ್ಜೆನ್ಸಿ ಸಲುವಾಗಿ 774 ಪಡಿತರ ಚೀಟಿ ವಿತರಣೆ ಆಗಿದೆ ಎಂದು ಸರ್ಕಾರ ತಿಳಿಸಿದೆ. ಈಗ ಉಳಿದಿರುವ ರೇಷನ್ ಕಾರ್ಡ್ ಮಾರ್ಚ್ ತಿಂಗಳಿನಲ್ಲಿ ಪರಿಶೀಲನೆ ಕೊನೆಗೊಂಡು ಏಪ್ರಿಲ್ 1, 2024ಕ್ಕೆ ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಸೇವಾ ಕೇಂದ್ರಗಳು ಅಥವಾ ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಣೆ ಮಾಡಲಾಗುವುದು.
New Ration Card Update, Only Such People will get BPL card